ಸಾರಾಂಶ
- ವಾಕ್ ವಿಥ್ ಕಾಫಿ’ ಕಾರ್ಯಕ್ರಮ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುಚಿಕ್ಕಮಗಳೂರು, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಉತ್ಕೃಷ್ಟ ದರ್ಜೆಯ ಕಾಫಿ ಬೆಳೆಯಲಾಗುತ್ತಿದೆ. ಕಾಫಿಯಲ್ಲಿರುವ ಕೆಫಿನ್ ಅಂಶ ಮೆದುಳಿನ ಕಾರ್ಯಕ್ಷಮತೆ ಹೆಚ್ಚಿಸುತ್ತದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಹೇಳಿದರು. ಪಟ್ಟಣದಲ್ಲಿ ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘ, ಖಾಂಡ್ಯ ಕಾಫಿ ಬೆಳೆಗಾರರ ಸಂಘ ಹಾಗೂ ಕಳಸ-ಬಾಳೂರು ಕಾಫಿ ಬೆಳೆಗಾರರ ಸಂಘದ ಸಹಯೋಗದಲ್ಲಿ ಭದ್ರಾ ಕಾಫಿ ಶಾಪ್‌ನಿಂದ ಜೇಸಿ ವೃತ್ತದವರೆಗೆ ಆಯೋಜಿಸಿದ್ದ ‘ವಾಕ್ ವಿಥ್ ಕಾಫಿ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಲೆನಾಡಿನ ಜೀವಂತಿಕೆ ಕಾಫಿ ಬೆಳೆ ಮೇಲೆ ನಿಂತಿದೆ. ಕಾಫಿ ದರ ಕುಸಿದ ಸಂದರ್ಭದಲ್ಲಿ ಹುಟ್ಟಿ ಕೊಂಡ ಕಾಫಿ ಡೇ, ಕೋಥಾಸ್‌ನಂತಹ ಉದ್ಯಮಗಳಿಗೆ ಮರು ಜೀವ ನೀಡಿದೆ. ಲಕ್ಷಾಂತರ ಕಾರ್ಮಿಕರಿಗೆ ಕಾಫಿ ಉಧ್ಯಮ ಉದ್ಯೋಗ ನೀಡಿದ್ದು ಬೆಳೆದ ಬಹುಪಾಲು ಕಾಫಿ ವಿದೇಶಕ್ಕೆ ರಫ್ತಾಗುತ್ತಿದೆ ಎಂದರು.ಕಾಫಿ ಮಂಡಳಿ ಸದಸ್ಯ ಮಹಾಬಲ ಮಾತನಾಡಿ, 2030ಕ್ಕೆ ದೇಶದಲ್ಲಿ 7 ಲಕ್ಷ ಟನ್ ಕಾಫಿ ಉತ್ಪಾದನೆಯ ಗುರಿಯನ್ನು ಕಾಫಿ ಮಂಡಳಿ ಹೊಂದಿದೆ. ಇಂದು ವಿಶ್ವದಲ್ಲಿ ಅಂತಾರಾಷ್ಟ್ರೀಯ ಕಾಫಿ ದಿನಾಚರಣೆ ನಡೆಸಲಾಗುತ್ತಿದೆ. ಸೀಗೋಡಿನ ಕಾಫಿ ಸಂಶೋಧನಾ ಕೇಂದ್ರ ಆರಂಭಗೊಂಡು 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇದೇ ನ.6ರಿಂದ 8ರವರೆಗೆ ಶತಮಾನೋ ತ್ಸವ ಆಚರಿಸಲು ಉದ್ದೇಶಿಸಲಾಗಿದೆ.ಏಷ್ಯಾದಲ್ಲೆ ಈ ಸಂಶೋಧನಾ ಸಂಸ್ಥೆ ಅತ್ಯುತ್ತಮ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸಿದೆ. ಕಾಫಿ ಉತ್ಪಾದನೆ ಜಾಸ್ತಿ ಮಾಡಬೇಕು, ಕಾಫಿ ಕುಡಿಯುವ ಸಂಸ್ಕೃತಿ ಎಲ್ಲಡೆ ಪಸರಿಸಬೇಕು ಎಂಬುದೇ ವಾಕ್ ವಿತ್ ಕಾಫಿ ಕಾರ್ಯಕ್ರಮದ ಉದ್ದೇಶ ಎಂದರು. ಹಿರಿಯ ಕ್ರೀಡಾಪಟು ಓ.ಡಿ.ಸ್ಟೀಫನ್ ಮಾತನಾಡಿ, ಕಾಫಿ ಸೇವನೆ ಕೇವಲ ಪೇಯವಲ್ಲ ಅದರಲ್ಲಿ ಕಾಫಿ ಬೆಳೆಗಾರರ ಶ್ರಮ, ಸಹನೆ, ಬೆವರಿನ ಫಲ ಹಾಗೂ ಕನಸು ಅಡಗಿದೆ. 1992ರ ಬಾರ್ಸೀಲೋನಾ ಒಲಂಫಿಕ್ಸ್ ನಲ್ಲಿ ಕೆಫಿನ್ ಅಂಶ ಉದ್ದೀಪನ ಪಟ್ಟಿಯಲ್ಲಿ ಸೇರಿಕೊಂಡಿತ್ತು. ನಂತರ ಅದನ್ನು ಪಟ್ಟಿಯಿಂದ ಕೈ ಬಿಡಲಾಗಿದೆ ಎಂದರು.ಕಾಫಿ ತೋಟದಲ್ಲಿ ಹಲವಾರು ವರ್ಷಗಳಿಂದ ಕಾರ್ಮಿಕರಾಗಿ ಸೇವೆ ಸಲ್ಲಿಸಿದ ಸಂಜೀವ ಹಾಗೂ ನಿಂಗಯ್ಯರನ್ನು ಗೌರವಿಸಲಾಯಿತು. ಜೇಸಿ ವೃತ್ತದ ಬಳಿ ಸಾರ್ವಜನಿಕರಿಗೆ ಉಚಿತವಾಗಿ ಕಾಫಿ ವಿತರಿಸಲಾಯಿತು.ವಿಪ ಮಾಜಿ ಸದಸ್ಯ ಎಸ್.ವಿ.ಮಂಜುನಾಥ್, ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಕೆ.ಎಸ್.ಜಯರಾಜ್, ಕಾರ್ಯ ದರ್ಶಿ ಜೆ.ನಾಗಭೂಷಣ ರಾವ್, ಖಾಂಡ್ಯ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಸ್.ವಿ.ಶಂಕರ್ ಕಾರ್ಯದರ್ಶಿ ಬಿ.ಎಸ್.ರತ್ನಾಕರ್, ಕೆಜಿಎಫ್ ಖಜಾಂಚಿ ಎಂ.ಕೆ.ಸುಂದರೇಶ್, ಹಿರಿಯ ಕಾಫಿ ಬೆಳೆಗಾರ ಎಚ್.ಬಿ.ರಾಜಗೋಪಾಲ್, ಗ್ರಾಪಂ ಅಧ್ಯಕ್ಷ ರವಿಚಂದ್ರ, ಕಾಫಿ ಮಂಡಳಿ ಸದಸ್ಯರಾದ ವೆನಿಲ್ಲಾ ಭಾಸ್ಕರ್, ಎ.ಜಿ.ದಿವಿನ್ ರಾಜ್, ಡಾ.ಕೃಷ್ಣಾನಂದ, ಕಾಫಿ ಸಂಶೋಧನಾ ಕೇಂದ್ರದ ನಿರ್ದೇಶಕ ಸಿ.ಬಾಬು, ರೋಟರಿ ಅಧ್ಯಕ್ಷ ತಿಮ್ಮಯ್ಯ, ಪಿಸಿಎಸಿಎಸ್ ಅಧ್ಯಕ್ಷ ಕೆ.ಕೆ.ವೆಂಕಟೇಶ್, ಅಕ್ಷತಾ ಮತ್ತಿತರರು ಇದ್ದರು.
(ಬಾಕ್ಸ್)--ವಾಟ್ಸಾಪ್ ಮೆಸೇಜ್ ಬಗ್ಗೆ ಕೇರ್ ಮಾಡೊಲ್ಲರೈತರ ಅಕ್ರಮ ಒತ್ತುವರಿ ತೆರವು ಮಾಡಲು ಶಾಸಕರು ಸಭೆಯಲ್ಲಿ ಸೂಚಿಸಿದ್ದಾರೆ ಎಂದು ಕೆಲವರು ವಾಟ್ಸಾಪ್‌ನಲ್ಲಿ ಮೆಸೇಜ್ ಹರಿ ಬಿಟ್ಟಿದ್ದಾರೆ. ಅದರೆ ಅದು ಸತ್ಯಕ್ಕೆ ದೂರ. ರಸ್ತೆ ವಿಸ್ತರಣೆಗೆ ಅಡ್ಡಿಯಾಗುವ ಒತ್ತುವರಿ ಕಟ್ಟಡಗಳನ್ನು ಯಾವುದೇ ಮುಲಾ ಜಿಲ್ಲದೆ ತೆರವುಗೊಳಿಸುವಂತೆ ಹೇಳಿದ್ದೆ. ಅದನ್ನು ತಿರುಚಿ ಕೆಲವರು ವಾಟ್ಸಾಪ್‌ನಲ್ಲಿ ಬಿಟ್ಟಿದ್ದು ಅದನ್ನು ಕೇರ್ ಮಾಡೋಲ್ಲ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.೦೩ಬಿಎಚ್‌ಆರ್ ೧:ಬಾಳೆಹೊನ್ನೂರಿನಲ್ಲಿ ಅಂತರರಾಷ್ಟ್ರೀಯ ಕಾಫಿ ದಿನಾಚರಣೆ ಅಂಗವಾಗಿ ಭದ್ರಾ ಕಾಫಿ ಶಾಫ್‌ನಿಂದ ಜೇಸಿ ವೃತ್ತದವರೆಗೆ ವಿವಿಧ ಸಂಘಟನೆಗಳ ಸಹಯೋಗದಲ್ಲಿ ವಾಕ್ ವಿಥ್ ಕಾಫಿ ಕಾರ್ಯಕ್ರಮವನ್ನು ಆಯೋಜಿಸಿಲಾಗಿತ್ತು.