ಶರಣರ ವಚನ ನಾಡಿನಾದ್ಯಂತ ಬಿತ್ತರವಾಗಬೇಕು: ಸ್ವಾಮೀಜಿ

| Published : Dec 13 2024, 12:48 AM IST

ಸಾರಾಂಶ

ಶರಣರು ರಚಿಸಿದ ವಚನಗಳನ್ನು ನಾಡಿನಾದ್ಯಂತ ಬಿತ್ತರಿಸುವ ಕೆಲಸವಾಗಬೇಕು ಎಂದು ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಲ್ಲಿ ಬಾನುವಾರ ಶರಣ ಸಾಹಿತ್ಯ ಪರಿಷತ್ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಸ್ವಾಮೀಜಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಶರಣರು ರಚಿಸಿದ ವಚನಗಳನ್ನು ನಾಡಿನಾದ್ಯಂತ ಬಿತ್ತರಿಸುವ ಕೆಲಸವಾಗಬೇಕು ಎಂದು ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಲ್ಲಿ ಬಾನುವಾರ ಶರಣ ಸಾಹಿತ್ಯ ಪರಿಷತ್ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಅವರು ಸ್ವಾಮೀಜಿ ಮಾತನಾಡಿದರು.

ವಚನಕಾರರು ಹಾಗೂ ಶರಣರು ರಚಿಸಿದ ವಚನಗಳನ್ನು ತಾ.ಶರಣ ಸಾಹಿತ್ಯ ಪರಿಷತ್ ಮತ್ತು ತಾಲೂಕು ಕದಳಿ ಮಹಿಳಾ ವೇದಿಕೆ ಪದಾಧಿಕಾರಿಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಿರಂತರ ಬಿತ್ತರಿಸುವ ಕೆಲಸ ಮಾಡಬೇಕು ಸ್ವಾಮೀಜಿ ಹೇಳಿದರು.

ಹೊನ್ನಾಳಿ ತಾ. ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಎಂ.ಆರ್.ಲೋಕೇಶ್ ಮಾತನಾಡಿ, ನಾನು, ಆತ್ಮಸಾಕ್ಷಿಯಾಗಿ ನಡೆ, ನುಡಿ, ಜವಾಬ್ದಾರಿಯಿಂದ ಮತ್ತು ತಮ್ಮ ತನು, ಮನದಿಂದ ಶರಣರ ಕುಲಕ್ಕೆ ಅಪವಾದವಾಗದಂತೆ ವಚನ ಸಾಹಿತ್ಯ ಬಿತ್ತರಿಸುವ ಕೆಲಸ ಮಾಡುತ್ತೇನೆ ಎಂದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಹಳ್ಳಿಗಳ ಜಾನಪದ ಹಾಡುಗಳು ಮತ್ತು ಕಲೆ ಸಾಹಿತ್ಯ ರೂಪಿಸುವ ಕೆಲಸವನ್ನು ಲೋಕಕಲ್ಯಾಣಕ್ಕಾಗಿ ಶರಣಸಾಹಿತ್ಯ ಪರಿಷತ್ ಕೆಲಸ ಮಾಡಬೇಕು ಎಂದರು.

ಕಾಲೇಜಿನ ಪ್ರಾಚಾರ್ಯ ಡಾ.ಧನಂಜಯ ಬಿ.ಜಿ. ಮಾತನಾಡಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ..ಬಿ. ಪರಮೇಶ್ವರಪ್ಪ, ಜಿಲ್ಲಾ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಗಾಯಿತ್ರಿ ವಸ್ತ್ರದ್ ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಸಮಾರಂಭದಲ್ಲಿ ಗ್ರಾಮೀಣ ಪ್ರತಿಭೆ ಸಾಧಕ ಜೀವಿ ಎಂ.ಎಸ್.ರೇವಣಪ್ಪ ಕೃತಿಯನ್ನು ಶ್ರೀ ಗಳಿಂದ ಲೋಕರ್ಪಣೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಸಾಹಿತಿ ಕೆ.ಪಿ.ದೇವೇಂದ್ರಯ್ಯ, ದಾವಣಗೆರೆ ವಿವಿ ಸಹಾಯಕ ಪ್ರಾಧ್ಯಾಪಕ ಡಾ. ವಿಜಯಕುಮಾರ, ತಾ ಕಸಾಪ ಅಧ್ಯಕ್ಷ ಮುರುಗೇಪ್ಪಗೌಡ, ಸಾಹಿತಿ ಸಂಗನಾಳಮಠ, ಪಿ.ಎಂ.ಸಿದ್ದಯ್ಯ, ಎಂ.ಎಸ್.ರೇವಣಪ್ಪ, ಎಂ.ನಾಗರಾಜನಾಯ್ಕ, ಎ.ಜಿ.ಹೇಮಲತಾ, ಕತ್ತಿಗೆ ನಾಗರಾಜ್, ಅವರಗೆರೆ ರುದ್ರಮನಿ ಉಪಸ್ಥಿತರಿದ್ದರು.