ಸಾರಾಂಶ
ಹನೂರು ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಕನಕ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಯದರ್ಶಿ ರಘು ಮಾತನಾಡಿದರು.
ಹನೂರು: ಸಮಾಜದ ಒಳಿತಿಗೆ ಬೇಕಾಗಿರುವುದು ಶ್ರೇಷ್ಠ ಸಂತರ ದಾರ್ಶನಿಕ ಅಸೂಯೆ ದ್ವೇಷ ಇಲ್ಲದ ಮಾರ್ಗಗಳು ಎಂದು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ತಿಳಿಸಿದರು.
ಮಲೆಮಾದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಪ್ರಸಿದ್ಧ ಕವಿ ದಾರ್ಶನಿಕ ಸಂಗೀತಕಾರ ಕೀರ್ತನೆಗಳ ಮೂಲಕ ದಾಸ ಶ್ರೇಷ್ಠ ಸಂತ ಕನಕದಾಸರು ರಚಿಸಿದ ಕೀರ್ತನೆಗಳು ಜಾತಿ ಭೇದಭಾವವಿಲ್ಲದೆ ಸಮಾಜದ ಒಳಿತಿಗೆ ಶ್ರಮಿಸಿದ ವಚನಕಾರರು ಎಂದರು. ಕನಕದಾಸರು, ಮಾದಯ್ಯ, ಅಲ್ಲಮಪ್ರಭು, ಬಸವಣ್ಣ, ಪುರಂದರದಾಸರು ಡಾ.ಅಂಬೇಡ್ಕರ್ ಇನ್ನಿತರ ನಾಯಕರು ಸಮಾಜದ ಒಳಿತಿಗೆ ದುಡಿದಂತಹ ಮಹನೀಯರು ಎಂದರು. ಪ್ರತಿಯೊಬ್ಬರು ಅವರ ಚಿಂತನೆಗಳನ್ನು ಅನುಸರಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.ಎಲ್ಲಾ ಸಂತರು ಸಮಾಜಕ್ಕೆ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ತಮ್ಮ ಕೊಡುಗೆಯನ್ನು ನೀಡುವ ಮೂಲಕ ಶ್ರಮಿಸಿದ್ದಾರೆ. ಹೀಗಾಗಿ ಕನಕ ಜಯಂತಿ ದೇಶಾದ್ಯಂತ ನಡೆಯುತ್ತಿದೆ. ಪ್ರತಿಯೊಬ್ಬರು ಇಂತಹ ರಾಷ್ಟ್ರೀಯ ಹಬ್ಬಗಳ ಜಯಂತಿಗಳ ಆಚರಣೆ ಮಾಡುವ ನಿಟ್ಟಿನಲ್ಲಿ ಆಚಾರ ವಿಚಾರಗಳನ್ನು ಪ್ರತಿಯೊಬ್ಬರು ತಿಳಿದುಕೊಂಡು ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಾಧಿಕಾರ ಉಪ ಕಾರ್ಯದರ್ಶಿ, ಚಂದ್ರಶೇಖರ್ ಹಿರಿಯ ಲೆಕ್ಕಾಧಿಕಾರಿ ನಾಗೇಶ್ ಸರಗೂರು, ಮಹದೇವಸ್ವಾಮಿ, ನಾಗರಾಜ್, ಮಹದೇವಸ್ವಾಮಿ, ರವೀಂದ್ರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.