ಸಾರಾಂಶ
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ, ಯೋಗ ಕಲಿಯಲು ನಗರಕ್ಕೆ ಬಂದಿರುವ ವಿದೇಶಿಯರು ಸೇರಿದಂತೆ ನೂರಾರು ಮಂದಿ ಭೇಟಿ ನೀಡಿ, ಅಂತಿಮ ನಮನ ಸಲ್ಲಿಸಿದರು.
ಮೈಸೂರು: ಕಳೆದ ವಾರ ಅಮೆರಿಕಾದ ವರ್ಜೀನಿಯಾದಲ್ಲಿ ನಿಧನರಾದ ಖ್ಯಾತ ಯೋಗ ಗುರು ಹಾಗೂ ಕೆ. ಪಟ್ಟಾಭಿ ಜೋಯಿಸ್ ಅವರ ಮೊಮ್ಮಗ ಶರತ್ ಜೋಯಿಸ್ ಅವರ ಅಂತ್ಯಕ್ರಿಯೆಯು ಸೋಮವಾರ ಗೋಕುಲಂನ ಚಿರಶಾಂತಿಧಾಮದಲ್ಲಿ ನೆರವೇರಿತು. ಭಾನುವಾರ ರಾತ್ರಿ ಪಾರ್ಥಿವ ಶರೀರವನ್ನು ಮೈಸೂರಿಗೆ ತರಲಾಯಿತು. ಇವತ್ತು ವಿ.ವಿ. ಮೊಹಲ್ಲಾದಲ್ಲಿರುವ ಮೃತರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ತೆ ಮಾಡಲಾಗಿತ್ತು. ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ, ಯೋಗ ಕಲಿಯಲು ನಗರಕ್ಕೆ ಬಂದಿರುವ ವಿದೇಶಿಯರು ಸೇರಿದಂತೆ ನೂರಾರು ಮಂದಿ ಭೇಟಿ ನೀಡಿ, ಅಂತಿಮ ನಮನ ಸಲ್ಲಿಸಿದರು. ಶರತ್ ಜೋಯಿಸ್ ಅವರ ನಿಧನಕ್ಕೆ ಶಾಸಕರಾದ ಜಿ.ಟಿ. ದೇವೇಗೌಡ, ಟಿ.ಎಸ್. ಶ್ರೀವತ್ಸ, ಕೆ. ಹರೀಶ್ ಗೌಡ ಸಂತಾಪ ಸೂಚಿಸಿದ್ದಾರೆ.