ಸಾರಾಂಶ
ಇಂದು ಎಲ್ಲ ರಂಗದಲ್ಲೂ ವಿಶಿಷ್ಟ ಸಾಧನೆ ಮೂಲಕ ಮಹಿಳೆ ಇಲ್ಲದ ಯಾವುದೇ ಕ್ಷೇತ್ರಗಳಿಲ್ಲ ಎಂದು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಶೃತಿ ತೇಲಿ ಅವರು ಹೇಳಿದರು
ಕನ್ನಡಪ್ರಭ ವಾರ್ತೆ ಮುಧೋಳ
ಮೊದಲು ಕೆಲವು ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹಿಳೆ ಇಂದು ಎಲ್ಲ ರಂಗದಲ್ಲೂ ವಿಶಿಷ್ಟ ಸಾಧನೆ ಮೂಲಕ ಮಹಿಳೆ ಇಲ್ಲದ ಯಾವುದೇ ಕ್ಷೇತ್ರಗಳಿಲ್ಲ ಎಂದು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಶೃತಿ ತೇಲಿ ಅವರು ಹೇಳಿದರು.ನಗರದ ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್‌ನಲ್ಲಿ ಗುರುವಾರ ನಡೆದ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಶಾಖಾ ಪ್ರಬಂಧಕ ನಿಖಿಲ ಮಾತನಾಡಿ, ಮಹಿಳೆ ಇಲ್ಲದೆ ಈ ಜೀವನವೇ ಇಲ್ಲ. ಮಹಿಳೆ ಪುರುಷರಿಗಿಂತ ಅತ್ಯುನ್ನತ ಸಾಧನೆ ಮಾಡುವುದರ ಮೂಲಕ ನಾವು ಯಾರಿಗೂ ಕಡಿಮೆ ಇಲ್ಲ ಎಂದು ನಿರೂಪಿಸಿದ್ದಾರೆ. ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬನೆ ಸಾಧಿಸಲು ಬ್ಯಾಂಕ್ ಪ್ರಯೋಜನೆ ಪಡೆದುಕೊಳ್ಳಬೇಕು ಎಂದು ಹೇಳಿದರು.
ಹೇಮಾ ತುಂಬರಮಟ್ಟಿ, ಡಾ.ಉಷಾ ಬಸರಡ್ಡಿ ಸಾಂದರ್ಭಿಕವಾಗಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪಲ್ಲವಿ ಯಡಹಳ್ಳಿ, ಅಕ್ಷತಾ ಮೆಳ್ಳಗೇರಿ, ಸಂಪದಾ ಕುಲಕರ್ಣಿ ಅರ್ಚನಾ ಹಲಗತ್ತಿ ಮುಂತಾದವರನ್ನು ಇದೆ ಸಂದರ್ಭದಲ್ಲಿ ಬ್ಯಾಂಕ್ ವತಿಯಿಂದ ಗೌರವಿಸಲಾಯಿತು.ಪ್ರಮುಖರಾದ ರಾಜು ಯಡಹಳ್ಳಿ, ರಾಜು ಹಲಗತ್ತಿ, ಧೀರಜ ಓಸ್ವಾಲ, ಉದಯ ಕುಕರ್ಣಿ ನಾರಾಯಣ ದಾಸರ ಮುಂತಾದವರು ಇದ್ದರು. ಲಕ್ಷ್ಮಣ ನಾರಾಯಣಕರ ಪ್ರಾರ್ಥಿಸಿದರು, ಸೌಮ್ಯಾ ಸ್ವಾಗತಿಸಿದರು, ಕವಿತಾ ಹಾಗೂ ಜೇತನಗೌಡ ನಿರೂಪಿಸಿದರು. ಕಿರಣರಾಜ ವಂದಿಸಿದರು.