ಶರಣರ ವಚನಗಳು ನಮ್ಮ ಬದುಕಿಗೆ ದಾರಿದೀಪ-ಮುಕ್ತಿಮಂದಿರ ಶ್ರೀಗಳು

| Published : Aug 24 2025, 02:00 AM IST

ಶರಣರ ವಚನಗಳು ನಮ್ಮ ಬದುಕಿಗೆ ದಾರಿದೀಪ-ಮುಕ್ತಿಮಂದಿರ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ಆಧುನಿಕ ಟಿವಿ, ಮೊಬೈಲ್‌ಗಳ ಪ್ರಭಾವ ಮತ್ತು ಒತ್ತಡದ ಬದುಕಿನಲ್ಲಿರುವ ಜನರಿಗೆ ಧರ್ಮ, ಸಂಸ್ಕೃತಿ, ಆಚರಣೆ, ಸಂಪ್ರದಾಯ, ಸಾಹಿತ್ಯ, ಆಧ್ಯಾತ್ಮದ ಸಂಗ ಕಲ್ಪಿಸುವ ಮೂಲಕ ಸಾತ್ವಿಕ ಸಮಾಜ ನಿರ್ಮಾಣ ಮಾಡುವ ಪುರಾಣ-ಪುಣ್ಯಕಥೆ ಕೇಳಿ ಬದುಕಿನಲ್ಲಿ ಅಳವಡಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.

ಲಕ್ಷ್ಮೇಶ್ವರ: ಇಂದಿನ ಆಧುನಿಕ ಟಿವಿ, ಮೊಬೈಲ್‌ಗಳ ಪ್ರಭಾವ ಮತ್ತು ಒತ್ತಡದ ಬದುಕಿನಲ್ಲಿರುವ ಜನರಿಗೆ ಧರ್ಮ, ಸಂಸ್ಕೃತಿ, ಆಚರಣೆ, ಸಂಪ್ರದಾಯ, ಸಾಹಿತ್ಯ, ಆಧ್ಯಾತ್ಮದ ಸಂಗ ಕಲ್ಪಿಸುವ ಮೂಲಕ ಸಾತ್ವಿಕ ಸಮಾಜ ನಿರ್ಮಾಣ ಮಾಡುವ ಪುರಾಣ-ಪುಣ್ಯಕಥೆ ಕೇಳಿ ಬದುಕಿನಲ್ಲಿ ಅಳವಡಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು. ಶುಕ್ರವಾರ ಪಟ್ಟಣದ ಅಕ್ಕಮಹಾದೇವಿ ದೇವಸ್ಥಾನದಲ್ಲಿ ನಡೆದ ಶ್ರಾವಣ ಮಾಸದಲ್ಲಿ ಸಿದ್ದೇಶ್ವರ ಸತ್ಸಂಗ ಬಳಗ, ಕದಳಿ ಮಹಿಳಾ ವೇದಿಕೆ, ಶರಣ ಸಾಹಿತ್ಯ ಪರಿಷತ್ತು, ರಾಜರಾಜೇಶ್ವರಿ ಮಹಿಳಾ ಸಾಹಿತ್ಯ ಮತ್ತು ಸಂಸ್ಕೃತಿ ವೇದಿಕೆ, ಅಕ್ಕನ ಬಳಗ, ಪ್ರೇಮಕ್ಕ ಅಭಿಮಾನಿ ಬಳಗದ ಸಂಯುಕ್ತಾಶ್ರಯದಲ್ಲಿ ನಡೆದ ಶ್ರಾವಣ ಸಂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನಿಧ್ಯವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.

ಆಧುನಿಕ ತಾಂತ್ರಿಕತೆಯ ಪ್ರಭಾವದ ನಡುವೆಯೂ ನಮ್ಮ ಸಂಪ್ರದಾಯ, ಸಂಸ್ಕೃತಿ, ಆಚಾರ-ವಿಚಾರಗಳೊಂದಿಗೆ ಹಿರಿಯರು ನಡೆದು ಬಂದ ದಾರಿಯಲ್ಲಿ ಸಾಗಬೇಕು. ಈ ನಿಟ್ಟಿನಲ್ಲಿ ಪ್ರತಿವರ್ಷ ಶ್ರಾವಣ ಮಾಸದ ಪರ್ಯಂತ ಧಾರ್ಮಿಕ, ಸಾಂಸ್ಕೃತಿ, ಸಾಹಿತ್ಯಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸಾಮಾಜಿಕ ಬದಲಾವಣೆಗೆ ಶ್ರಮಿಸುತ್ತಿರುವ ಅಕ್ಕನ ಬಳಗದ ಕಾರ್ಯ ಶ್ಲಾಘನೀಯ ಎಂದು ಹೇಳಿದರು.ಗದಗ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ಉಪನ್ಯಾಸಕ ಪ್ರೊ.ಎಸ್.ವಿ. ಸಜ್ಜನಶೆಟ್ಟರ ಅವರು ವಚನ ಸಾಹಿತ್ಯದಲ್ಲಿ ಮಾನವೀಯ ಮೌಲ್ಯಗಳು ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿ, ನೂರಾರು ವರ್ಷಗಳ ಇತಿಹಾಸವನ್ನು ನೋಡಿದಾಗ ವಚನಗಳು ನಮಗೆ ನೀಡಿದ ಮಹತ್ವದ ಅರಿವಾಗುತ್ತದೆ, ಸಮಾಜದ ಸ್ಥಿತಿಗತಿಗಳನ್ನು ತಮ್ಮ ವಚನಗಳ ಮೂಲಕ ನಾಡಿಗೆ ನೀಡಿ ಅದರಿಂದ ಸಮಾಜ ಸುಧಾರಣೆಯ ಚಿಂತನೆಯನ್ನು ಶರಣರು ಹೊಂದಿದ್ದರು. ಬಸವಣ್ಣನವರು, ಅಕ್ಕಮಹಾದೇವಿ, ಮುಕ್ತಾಯಕ್ಕ, ಸೇರಿದಂತೆ ಅನೇಕ ಶರಣರ ವಚನಗಳು ನಮ್ಮ ಸಮಾಜದ ಅಂಕುಡೊಂಕುಗಳ ಬಗ್ಗೆ ತಿಳಿಸುವ ಅಂಶಗಳಾಗಿವೆ. ಇವು ಯಾವುದೇ ಬರವಣಿಗೆಯಿಂದ ಬಂದದ್ದಲ್ಲ, ಶರಣರ ಬಾಯಿಯಿಂದ ಬಾಯಿಗೆ ಸಾಗಿ ಬಂದು ನಂತರ ಅಕ್ಷರ ರೂಪದಲ್ಲಿ ಪ್ರಕಟವಾಗಿವೆ ಎಂದರು. ಅಧ್ಯಕ್ಷತೆವಹಿಸಿದ್ದ ಎಸ್.ಎಸ್. ನಾಗಲೋಟಿ ಅವರು ಮಾತನಾಡಿದರು. ಅತಿಥಿಗಳಾಗಿ ನಾಗಭೂಷಣ ಪವಾಡಶೆಟ್ರ, ಮಲ್ಲಿಕಾರ್ಜುನ ಕಳಸಾಪೂರ, ಪರಮೇಶ್ವರಪ್ಪ ಬಂಕಾಪೂರ, ಎಂ.ಪಿ.ಹುಬ್ಬಳ್ಳಿ, ಕಿರಣ ನಾಲ್ವಾಡ, ಜಿ.ಎಸ್.ರಾಮಶೆಟ್ಟರ, ಎಲ್.ಎಸ್.ಅರಳಹಳ್ಳಿ, ಶೋಭಾ ಗಾಂಜಿ, ಮಧುಮತಿ ಹತ್ತಿಕಾಳ, ಸಂಘಟನೆಯ ಅಧ್ಯಕ್ಷೆ ನಿರ್ಮಲಾ ಅರಳಿ, ರತ್ನಾ ಕರ್ಕಿ, ಲಲಿತಕ್ಕ ಕೆರಿಮನಿ, ಪ್ರತಿಮಾ ಮಹಾಜನಶೆಟ್ಟರ, ಗಂಗಾಧರ ಅರಳಿ, ನಿಂಗಪ್ಪ ಗೊರವರ, ಮುಂತಾದವರು ಹಾಜರಿದ್ದರು.