ಬಡವರ ಮಕ್ಕಳಿಗಾಗಿ ಅವರು ಸರ್ಕಾರಿ ಸಂಸ್ಥೆಗಳನ್ನು ಪ್ರಾರಂಭಿಸುವುದರಿಂದ ಪ್ರಜಾಪ್ರಭುತ್ವದಲ್ಲಿ ಕಡಿಮೆ ಖರ್ಚಿನಲ್ಲಿ ಓದುವಂತಹ ಅವಕಾಶ ಸಿಗುತ್ತದೆ ಎಂದರು. ಇಲ್ಲಿ ಪೋಸ್ಟ್ ಗ್ರ್ಯಾಜುಯೇಷನ್ ಕಾಲೇಜುಗಳಲ್ಲಿದೆ. ಈಗ ಉನ್ನತ ಶಿಕ್ಷಣ ಸಂಸ್ಥೆಯ ಸಂಶೋಧನೆ ರುಸಾ ಬಂದ ಮೇಲೆ ಸಂಶೋಧನಾ ಸಂಸ್ಥೆಗಳಾಗಿ ಕೂಡ ಡಿಗ್ರಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿವೆ. ಇಂತಹ ಸಂಸ್ಥೆಯಿಂದ ಏನು ಲಾಭ ಆಗುತ್ತದೆ ಅಂದರೆ, ಈ ಭಾಗದ ಎಲ್ಲಾ ಸಮುದಾಯದ ಅದರಲ್ಲೂ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಪಡೆದುಕೊಳ್ಳಲಿಕ್ಕೆ ಸಾಧ್ಯ, ಜತೆಗೆ ಅದೃಷ್ಟದಿಂದ ಈ ನೆಲದಲ್ಲಿ ಆ ತರದ ಒಂದು ಅವಕಾಶ ಈ ಹೆಣ್ಣುಮಕ್ಕಳಿಗೆ ಸಿಕ್ಕಿರುವಂತದ್ದು ಗುಣಾತ್ಮಕವಾದದ್ದು ಅಂತ ನಾನು ಅಭಿನಂದಿಸುತ್ತೇನೆ ಎಂದು ನುಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ರಾಜಕೀಯ ಇರಲಿ, ಏನೇ ಕಾರಣ ಇರಲಿ, ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ಇರುತ್ತದೆ. ಆದರೆ ಮಾಡಿರುವ ಕೆಲಸವನ್ನು ನಾವು ಒಪ್ಪಿಕೊಳ್ಳದೇ ಉಂಡ ಹೊಟ್ಟೆಯನ್ನು ಮುಂದಿಟ್ಟುಕೊಂಡು ದೂರ ಬಾರದು. ಆ ಅರ್ಥದಲ್ಲಿ ರಾಜಕೀಯ ಇಚ್ಛಾಶಕ್ತಿಯಿಂದ ಈ ಊರಿನಲ್ಲಿ ಈ ತರಹದ ಉನ್ನತ ಶಿಕ್ಷಣ ಸಂಸ್ಥೆಗಳಿದೆ ಒಳ್ಳೆಯದು ಎಂದು ಮೈಸೂರು ವಿವಿಯ ಕಲಾನಿಕಾಯ ಹಾಗೂ ಲೇಖಕರಾದ ಎಂ.ಎಸ್. ಶೇಖರ್‌ ಸಲಹೆ ನೀಡಿದರು.

ಪಟ್ಟಣದ ಮಹಿಳಾ ಸರ್ಕಾರಿ ಗೃಹವಿಜ್ಞಾನ ಕಾಲೇಜಿನಲ್ಲಿ ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್, ರೇಂಜರ್ಸ್‌ ಮತ್ತು ಯುವ ರೆಡ್ ಕ್ರಾಸ್ ಘಟಕಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದೇವೇಗೌಡರು ಇರಲಿ, ರೇವಣ್ಣ ಇರಲಿ, ಶ್ರೇಯಸ್ ಅವರೇ ಇರಲಿ ಅವರು ಯಾರೇ ಇರಲಿ, ಬಡವರ ಮಕ್ಕಳಿಗಾಗಿ ಅವರು ಸರ್ಕಾರಿ ಸಂಸ್ಥೆಗಳನ್ನು ಪ್ರಾರಂಭಿಸುವುದರಿಂದ ಪ್ರಜಾಪ್ರಭುತ್ವದಲ್ಲಿ ಕಡಿಮೆ ಖರ್ಚಿನಲ್ಲಿ ಓದುವಂತಹ ಅವಕಾಶ ಸಿಗುತ್ತದೆ ಎಂದರು. ಇಲ್ಲಿ ಪೋಸ್ಟ್ ಗ್ರ್ಯಾಜುಯೇಷನ್ ಕಾಲೇಜುಗಳಲ್ಲಿದೆ. ಈಗ ಉನ್ನತ ಶಿಕ್ಷಣ ಸಂಸ್ಥೆಯ ಸಂಶೋಧನೆ ರುಸಾ ಬಂದ ಮೇಲೆ ಸಂಶೋಧನಾ ಸಂಸ್ಥೆಗಳಾಗಿ ಕೂಡ ಡಿಗ್ರಿ ಕಾಲೇಜಿನಲ್ಲಿ ಕೆಲಸ ಮಾಡುತ್ತಿವೆ. ಇಂತಹ ಸಂಸ್ಥೆಯಿಂದ ಏನು ಲಾಭ ಆಗುತ್ತದೆ ಅಂದರೆ, ಈ ಭಾಗದ ಎಲ್ಲಾ ಸಮುದಾಯದ ಅದರಲ್ಲೂ ಹೆಣ್ಣುಮಕ್ಕಳಿಗೆ ಶಿಕ್ಷಣವನ್ನು ಪಡೆದುಕೊಳ್ಳಲಿಕ್ಕೆ ಸಾಧ್ಯ, ಜತೆಗೆ ಅದೃಷ್ಟದಿಂದ ಈ ನೆಲದಲ್ಲಿ ಆ ತರದ ಒಂದು ಅವಕಾಶ ಈ ಹೆಣ್ಣುಮಕ್ಕಳಿಗೆ ಸಿಕ್ಕಿರುವಂತದ್ದು ಗುಣಾತ್ಮಕವಾದದ್ದು ಅಂತ ನಾನು ಅಭಿನಂದಿಸುತ್ತೇನೆ ಎಂದು ನುಡಿದರು.

ಅನುಭವ ಇರುವಂತ ಟೀಚರ್ಸ್‌ಗಳು ಫಸ್ಟ್ ಗ್ರೇಡ್ ಸರ್ಕಾರಿ ಕಾಲೇಜಿನಲ್ಲಿ ಇರುತ್ತಾರೆ ಜತೆಗೆ ಸರ್ಕಾರಿ ಕಾಲೇಜುಗಳಲ್ಲಿ ಆಡಳಿತ ನಡೆಸುವಂತಹ ಪ್ರಾಂಶುಪಾಲರಾಗಲಿ ಹಾಗೂ ಪಾಠ ಮಾಡುವಂತಹ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ನಮ್ಮ ಮಕ್ಕಳು ಎಂದುಕೊಂಡು ಪಾಠ ಮಾಡ್ಬಿಟ್ಟರೆ ಉತ್ತಮ ಫಲಿತಾಂಶ ಬರುತ್ತದೆ. ಈ ಕಾಲೇಜಿನ ಪರಿಸರದಲ್ಲಿ ನೂರಾರು ಅಡಿಕೆ ಮರಗಳು ತೆಂಗಿನ ಮರಗಳು ಕಾಣುತ್ತವೆ. ಇಷ್ಟು ಪ್ರಾಕೃತಿಕವಾದ ವಾತಾವರಣದಲ್ಲಿ ಪ್ರೈವೇಟ್ ಕಾಲೇಜ್ ಎಲ್ಲೂ ಕೂಡ ಇರಲ್ಲ ಸ್ನೇಹಿತರೆ. ನಾ ಟೀಕೆ ಮಾಡುತ್ತಿಲ್ಲ, ಹಾಸನ ಜಿಲ್ಲೆಯಲ್ಲಿ ಇರುವಂತಹ ಸರ್ಕಾರಿ ಫಸ್ಟ್ ಗ್ರೇಡ್ ಕಾಲೇಜುಗಳು, ಜೂನಿಯರ್‌ ಕಾಲೇಜುಗಳು ಬೇರೆ ಎಲ್ಲೂ ಕೂಡ ಇಷ್ಟೊಂದು ಚೆನ್ನಾಗಿ ಇಲ್ಲ ಅಂತ ನನ್ನ ಗಮನಕ್ಕೆ ಬರುತ್ತದೆ. ಇದು ಮೊದಲ ಹೆಜ್ಜೆ. ಅದೃಷ್ಟವಶಾತ್ ಇವತ್ತು ಸರ್ಕಾರಿ ಮಹಿಳಾ ಕಾಲೇಜುಗಳು ತುಂಬಿ ತುಳುಕುತ್ತವೆ, ಆದರೆ ಅಲ್ಲಿ ನಿವೃತ್ತ ಟೀಚರ್ಸ್ ಇರುತ್ತಾರೆ ಎಂದರು.

ಒಂದು ತಾಲೂಕಿನಲ್ಲಿ ಯಾವತ್ತೂ ಕೂಡ ಗುಣಕ್ಕೆ ಮತ್ಸರ ಇಲ್ಲ ಅನ್ನುವುದು ಬಹಳ ಸೂಕ್ಷ್ಮವಾದ ಮಾತು. ಒಂದು ತಾಲೂಕಿನಲ್ಲಿ ಒಂದು ಕೂಗಳತೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ನಾಲ್ಕರಿಂದ ಐದು ಇದೆ ಎನ್ನುವ ಮಾತು ದಟ್ ಈಸ್ ಪಾಸಿಟಿವ್. ಅದು ಗುಣಾತ್ಮಕವಾದದ್ದು, ಯಾರು ಎಷ್ಟು ತಾತ್ವಿಕವಾಗಿ ಭಿನ್ನಾಭಿಪ್ರಾಯಗಳಿರಲಿ, ಈ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯವನ್ನು ಇಟ್ಟುಕೊಂಡು ಕೂಡ ಆತ್ಮೀಯವಾಗಿ ಬದುಕಲಿಕ್ಕೆ ಸಾಧ್ಯತೆ ಇದೆ. ಭಿನ್ನಾಭಿಪ್ರಾಯ ಇಲ್ಲದೆ ಇದ್ದರೆ ಜ್ಞಾನವೇ ಬೆಳೆಯಲ್ಲ ಎಂದು ತಿಳಿಸಿ, ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ಉತ್ತಮ ಜೀವನ ರೂಪಿಸಿಕೊಳ್ಳಲು ಅತ್ಯಗತ್ಯವಾದ ಸಲಹೆ ಸೂಚನೆಗಳನ್ನು ನೀಡಿ, ಸುದೀರ್ಘವಾಗಿ ಮಾತನಾಡಿದರು.

ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸರ್ಕಾರಿ ಮಹಿಳಾ ಗೃಹ ವಿಜ್ಞಾನ ಕಾಲೇಜು ಪ್ರಾಂಶುಪಾಲರಾದ ಆಶಾ ಜ್ಯೋತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಾಸನದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರು ಹಾಗೂ ಪ್ರಾಂಶುಪಾಲರಾದ ಪ್ರೊ. ಕವಿತ ಕೆ.ಜಿ, ಮಹಿಳಾ, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಪ್ರೊ. ಮಾದಯ್ಯ ಮಾಕನಹಳ್ಳಿ, ಪ್ರಾಧ್ಯಾಪಕರಾದ ಜಗದೀಶ್ ಸಿ. ಬಿ, ಶ್ವೇತ ನಾಯಕ್, ಡಾ. ಅಶೋಕ್ ಎಚ್. ಕೆ, ಫರೀರಮ್ಮ ಪಿ. ಮುರುಗೊಡ್, ಮಧುಶ್ರೀ, ಜಯಚಂದ್ರ, ಸಹ ಪ್ರಾಧ್ಯಾಪಕರಾದ ಸುನಿಲ್ ಎಸ್, ನವೀನ, ಇತರರು ಇದ್ದರು.