ಕೆರೆ ಪುನಶ್ಚೇತನ ಕಾರ್ಯಕೈಗೊಂಡಿರುವ ಕಾರ್ಯ ಶ್ಲಾಘನೀಯ

| Published : Dec 17 2024, 01:00 AM IST

ಸಾರಾಂಶ

ಅಂತರಜಲ ಹೆಚ್ಚಿಸಲು, ಗ್ರಾಮೀಣ ಪ್ರದೇಶದ ಜನಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗೆ ಅನುಕೂಲವಾಗಲು ಕೆರೆ ಪುನಶ್ಚೇತನ ಕಾರ್ಯಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದು ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮದುರ್ಗ

ಅಂತರಜಲ ಹೆಚ್ಚಿಸಲು, ಗ್ರಾಮೀಣ ಪ್ರದೇಶದ ಜನಜಾನುವಾರುಗಳಿಗೆ ಕುಡಿಯುವ ನೀರು ಪೂರೈಕೆಗೆ ಅನುಕೂಲವಾಗಲು ಕೆರೆ ಪುನಶ್ಚೇತನ ಕಾರ್ಯಕೈಗೊಂಡಿರುವ ಕಾರ್ಯ ಶ್ಲಾಘನೀಯ ಎಂದು ಸರ್ಕಾರದ ಮುಖ್ಯಸಚೇತಕ ಅಶೋಕ ಪಟ್ಟಣ ಹೇಳಿದರು.

ತಾಲೂಕಿನ ಕುಳ್ಳೂರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಹಾಗೂ ಉದುಪುಡಿ ಗ್ರಾಮ ಪಂಚಾಯತಿ, ಕುಳ್ಳೂರ ಕರೆಅಭಿವೃದ್ಧಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಪುನಶ್ಚೇತನಗೊಳಸಿದ ನಮ್ಮೂರು ಕೆರೆ ನಮ್ಮ ಕೆರೆ ಕಾರ್ಯಕ್ರಮದ ಯೋಜನೆಯಲ್ಲಿ ಪುನಶ್ಚೇತನಗೊಳಿಸಲಾದ 765ನೇ ಕೆರೆಯ ನಾಮಫಲಕ ಅನಾವರಣ ಹಾಗೂ ಕೆರೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನಲ್ಲಿರುವ ಕೆರೆಗಳನ್ನು ತುಂಬಿಸಲು ಸರ್ಕಾರದಿಂದ ಅನುದಾನ ಮಂಜೂರು ಮಾಡಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಮಹಿಳೆಯರನ್ನು ಒಂದು ಗೂಡಿಸಿ, ಗಾಂಧಿಜೀಯವರ ಕನಸು ನನಸು ಮಾಡುವುದರ ಜತೆಗೆ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದಾರೆ. ಅವರ ಕಾರ್ಯಗಳು ಸಾಮಾಜಿಕ ಮನ್ನಣೆ ಪಡೆದುಕೊಂಡಿದ್ದು ಜನತೆ ಅವುಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಧರ್ಮಸ್ಥಳ ಸಂಸ್ಥೆಯ ಧಾರವಾಡ ಪ್ರಾದೇಶಿಕ ನಿರ್ದೇಶಕಿ ದಾಯಾಶೀಲ ಮಾತನಾಡಿ, ಗ್ರಾಮಸ್ಥರಿಗೆ ಕೆರೆ ಹಸ್ತಾಂತರಿಸಲಾಗಿದ್ದು, 2 ಕುಳ್ಳೂರ ಗ್ರಾಮದ ಜನತೆ ಕೆರೆ ಸ್ವಚ್ಛವಾಗಿಟ್ಟುಕೊಂಡು ಸದ್ಬಳಕೆ ಮಾಡಿಕೊಂಡಾಗ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಶ್ರಮಕ್ಕೆ ಪ್ರತಿಫಲ ದೊರೆತಂತಾಗುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮ ಸಾನಿಧ್ಯ ವಹಿಸಿದ್ದ ಕುಳ್ಳೂರ ಶಿವಯೋಗೀಶ್ವರ ಕಲ್ಮಠದ ಬಸವಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಉದಪುಡಿ ಗ್ರಾ.ಪಂ ಅಧ್ಯಕ್ಷೆ ಶಬಾನಾಬೇಗಂ ಖಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಎಚ್. ಆರ್. ಲವಕುಮಾರ, ಗ್ರಾ. ಪಂ ಉಪಾಧ್ಯಕ್ಷೆ ಶೋಭಾ ಮಾದರ,ಕೆರೆ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನಿಂಗಪ್ಪ ಬಳಿಗೇರ, ಯುವ ಮುಖಂಡ ಪ್ರಶಾಂತ ಯಾದವಾಡ, ಬಿ. ಎಸ್. ಹಲಗತ್ತಿ, ಕೆ. ಎಚ್. ಹಿರೇಹನಮನವರ, ಎಸ್.ಕೆ. ಬಾಲನ್ನವರ, ಜಿ. ಎಂ. ಪಾಟೀಲ, ಬಿ.ಎಸ್. ಪಾಟೀಲ, ಜಿಲ್ಲಾ ಜನಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ಅಶೋಕ ಕುಲಗೋಡ, ಸದಸ್ಯ ಜಿ. ಬಿ. ರಂಗನಗೌಡ್ರ, ಕೆರೆ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರಾಜು ಮರಲಿಂಗನವರ, ರಮೇಶ ಜಲಗೇರಿ, ಶಿವು ಬಳಿಗೇರ, ಕೃಷಿ ಅಧಿಕಾರಿ ಪ್ರದೀಪ ಗಾಂವ್‌ಕರ ಸೇರಿದಂತೆ ಇತರರಿದ್ದರು.ತಾಲೂಕಾ ಯೋಜನಾಧಿಕಾರಿ ಸಚಿನ್ ಸ್ವಾಗತಿಸಿದರು. ತಾಲೂಕಾ ವಿಚಕ್ಷಣಾಧಿಕಾರಿ ಕೇಶವ ಕಾರ್ಯಕ್ರಮ ನಿರೂಪಿಸಿದರು. ವಲಯ ಮೇಲ್ವಿಚಾರಕ ಗಿರೀಶ ವಂದಿಸಿದರು.