ಸಾರಾಂಶ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ
ಈ ನಾಡಿನಲ್ಲಿ ಜನ ಸಾಮಾನ್ಯರು, ಶ್ರಮಿಕ ವರ್ಗದವರೇ ಕನ್ನಡ ಭಾಷೆ ಬೆಳೆಸಿದ್ದಾರೆ ಎಂದು ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಮೋಹನ್ ತಿಳಿಸಿದರು.ಮಂಗಳವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಿರಿಗನ್ನಡ ವೇದಿಕೆ ಹಾಗೂ ಕಾಲೇಜಿನ ವಿವಿಧ ಘಟಕಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಉಪನ್ಯಾಸ ನೀಡಿದರು. ಕನ್ನಡ ನಮ್ಮ ತಾಯಿ ಭಾಷೆ, ನಾಡ ಭಾಷೆ ಯಾಗಿದೆ. ವಿವಿಧತೆಯಲ್ಲಿ ಏಕತೆ ಸಾರುವ ಭಾರತ ವಿವಿಧ ಭಾಷೆಗಳ ನಾಡು. ಪೋರ್ಚುಗೀಸರು, ಬ್ರಿಟಿಷರು ನಮ್ಮ ಮೇಲೆ ದಾಳಿ ಮಾಡಿ ದರೂ ಕನ್ನಡ ಭಾಷೆ ಅಳಿದಿಲ್ಲ. ಇದಕ್ಕೆ ಮುಖ್ಯ ಕಾರಣ ಜನ ಸಾಮಾನ್ಯರು ಕನ್ನಡದಲ್ಲೇ ಮಾತ ನಾಡುತ್ತಾ ಬಂದಿರುವುದು. ಕರ್ನಾಟಕಕ್ಕೆ ಅನೇಕ ಗಣ್ಯರ ಕೊಡುಗೆ ಇದೆ. ದೇವರಾಜು ಮುಖ್ಯಮಂತ್ರಿಯಾಗಿದ್ದಾಗ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದರು. ನಟ ಡಾ.ರಾಜಕುಮಾರ್ ಕನ್ನಡ ಭಾಷೆಗೆ ಸಲ್ಲಿಸಿದ ಸೇವೆ ಅನನ್ಯ. ಕನ್ನಡ ನಾಡು ಜಾತಿ ಜನಾಂಗವನ್ನು ಮೀರಿದ ನಾಡು. ಸರಿಯಾಗಿ ಉಚ್ಛಾರಣೆ ಮಾಡಲು ಸಾಧ್ಯವಾಗದ ಇಂಗ್ಲೀಷ್ ಭಾಷೆ ನಮಗೆ ಏಕೆ ಬೇಕು. ಸೃಷ್ಟ ವಾಗಿ ಅರ್ಥವಾಗುವ ಸುಂದರ ಕನ್ನಡ ಭಾಷೆಯನ್ನು ಎಲ್ಲರೂ ಪ್ರೀತಿಯಿಂದ ಕಾಣೋಣ ಎಂದರು.
ಮುಖ್ಯ ಅತಿಥಿಯಾಗಿದ್ದ ಸಿರಿಗನ್ನಡ ವೇದಿಕೆ ಅಧ್ಯಕ್ಷೆ ಮೀನಾಕ್ಷಿ ಕಾಂತರಾಜ್ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಸಮಾಜ ಎಂಬುದು ಹಡಗಿನಂತೆ. ಅದನ್ನು ನಿಯಂತ್ರಿಸುವ ಶಕ್ತಿ ನಾವು ಪಡೆದು ಕೊಳ್ಳಬೇಕು. ಜೀವನವನ್ನು ಸಮಚಿತ್ತದಿಂದ ಸ್ವೀಕಾರ ಮಾಡಬೇಕು. ಬಾಲ್ಯದಲ್ಲಿ ಕಲಿತ ವಿದ್ಯೆ, ಪರಿಣಿತಿ ನಮ್ಮ ಜೀವನದಲ್ಲಿ ಶಾಶ್ವತವಾಗಿ ಉಳಿಯಲಿದೆ. ಕನ್ನಡ ಭಾಷೆಗೆ ಹೆಚ್ಚು ಗೌರವ ನೀಡೋಣ. ಹಣ, ಅಂತಸ್ತು ಜೀವನದಲ್ಲಿ ಶಾಶ್ವತವಲ್ಲ. ಬದುಕಿನಲ್ಲಿ ಪ್ರಾಮಾಣಿಕತೆ, ಮಾನವೀಯತೆ ಗುಣ ಬೆಳೆಸಿಕೊಂಡರೆ ಮುಂದೆ ಅದು ನಮ್ಮ ಜೀವನದಲ್ಲಿ ಶಾಶ್ವತವಾಗಿ ಉಳಿಯಲಿದೆ ಎಂದರು.ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತಶೆಟ್ಟಿ ಉದ್ಘಾಟಿಸಿದರು. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಜಿ.ಸವಿತಾ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಹೊನ್ನೇಕೊಡಿಗೆ ಎಲ್ದೋ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್, ಮುತ್ತಿನಕೊಪ್ಪ ಜನ ಜಾಗೃತಿ ವೇದಿಕೆ ಅಧ್ಯಕ್ಷ ಮನೋಹರ್,ಶಾಶ್ವತಿ ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಪದ್ಮಸತೀಶ್,ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಭವ್ಯ ಸಂತೋಷ್,ಕಾಲೇಜಿನ ಐ.ಕ್ಯೂ.ಎ.ಸಿ. ಸಂಚಾಲಕ ಆರ್.ಕೆ.ಪ್ರಸಾದ್, ಎ.ಎನ್.ಮಂಜುಳಾ, ನೀತಾ ಪ್ರದೀಪ್, ಚೈತ್ರಾ ರಮೇಶ್ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))