ವಿಶ್ವವಿಖ್ಯಾತಿ ‘ರ‍್ಯಾಂಬೊ ಸರ್ಕಸ್’ ಈಗ ಮಂಗಳೂರಿನಲ್ಲಿ!

| Published : Apr 06 2024, 12:55 AM IST

ವಿಶ್ವವಿಖ್ಯಾತಿ ‘ರ‍್ಯಾಂಬೊ ಸರ್ಕಸ್’ ಈಗ ಮಂಗಳೂರಿನಲ್ಲಿ!
Share this Article
  • FB
  • TW
  • Linkdin
  • Email

ಸಾರಾಂಶ

ಪ್ರದರ್ಶನದ ಸಮಯದಲ್ಲಿ ಟಿಕೆಟ್‌ಗಳು ಕೌಂಟರ್‌ಗಳಲ್ಲಿ ಲಭ್ಯವಿರುತ್ತದೆ. ಮುಂಗಡ ಕಾಯ್ದಿರಿಸಿಕೊಳ್ಳಲು www.rambocircus.in ಲಾಗ್‌ಇನ್ ಮಾಡಬಹುದು. ಬುಕ್ ಮೈ ಶೋ ಆ್ಯಪ್‌ನ ಮೂಲಕವೂ ಟಿಕೆಟ್‌ ಕಾಯ್ದಿರಿಸಿಕೊಳ್ಳಬಹುದಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮೈನವಿರೇಳಿಸುವ ಹೊಸ ಪ್ರಯೋಗಗಳೊಂದಿಗೆ ದಿಲ್ಲಿ, ಮುಂಬೈ, ಬೆಂಗಳೂರು, ಗೋವಾ ಹಾಗೂ ಇನ್ನೂ ಹಲವಾರು ಮಹಾನಗರಿಗಳಲ್ಲಿ ಯಶಸ್ವಿ ಪ್ರದರ್ಶನಗಳನ್ನು ನೀಡಿರುವ ‘ರ‍್ಯಾಂಬೋ ಸರ್ಕಸ್’ ಇದೀಗ ಮಂಗಳೂರು ಹೊರವಲಯದ ಬಂಗ್ರಕೂಳೂರಿನ ಗೋಲ್ಡ್‌ಫಿಂಚ್‌ ಸಿಟಿ ಎದುರಿನ ಡೆಲ್ಟಾಗ್ರೌಂಡ್‌ನಲ್ಲಿ ಮಾ.31ರಿಂದ ಆರಂಭಗೊಂಡಿದೆ.

ರ‍್ಯಾಂಬೊ ಸರ್ಕಸ್‌ ತನ್ನ ಪೂರ್ಣ ಪ್ರಮಾಣದ ಮೋಡಿ ಮಾಡುವ ೧೨೦ ನಿಮಿಷಗಳ ನವೀನ ಮಾದರಿಯ ಸರ್ಕಸ್‌ನ್ನು ಪ್ರದರ್ಶಿಸುತ್ತಿದೆ. ರ‍್ಯಾಂಬೊ ತಂಡ ಬಬಲ್ ಶೋ, ಸ್ಕೇಟಿಂಗ್, ಲ್ಯಾಡರ್ ಬ್ಯಾಲೆನ್ಸ್, ಸ್ವಾರ್ಡ್ಆಕ್ಟ್, ಕ್ಯೂಬ್‌ಜಗ್ಲಿಂಗ್, ರೊಲ್ಲಾ ಬೊಲ್ಲಾ, ಹುಲಾ ಹೂಪ್ ಮತ್ತು ಏರಿಯಲ್‌ ರೋಪ್‌ ಜೊತೆಗೆ ವಿದುಷಕ ಸಹಿತ ಅನೇಕ ಮನರಂಜನೆಗಳನ್ನು ಪ್ರದರ್ಶಿಸುತ್ತಿದೆ.

ಪ್ರದರ್ಶನದ ಸಮಯದಲ್ಲಿ ಟಿಕೆಟ್‌ಗಳು ಕೌಂಟರ್‌ಗಳಲ್ಲಿ ಲಭ್ಯವಿರುತ್ತದೆ. ಮುಂಗಡ ಕಾಯ್ದಿರಿಸಿಕೊಳ್ಳಲು www.rambocircus.in ಲಾಗ್‌ಇನ್ ಮಾಡಬಹುದು. ಬುಕ್ ಮೈ ಶೋ ಆ್ಯಪ್‌ನ ಮೂಲಕವೂ ಟಿಕೆಟ್‌ ಕಾಯ್ದಿರಿಸಿಕೊಳ್ಳಬಹುದಾಗಿದೆ. ಶೋ ಸಮಯ: ವಾರದ ದಿನಗಳಲ್ಲಿ ಎರಡು ಶೋಗಳು - ಸಂಜೆ 4.30 ಮತ್ತು ರಾತ್ರಿ 7.30 ಗಂಟೆಗೆ. ಶನಿವಾರ, ಭಾನುವಾರ ಮತ್ತು ರಜಾದಿನಗಳಲ್ಲಿ ಮೂರು ಶೋಗಳು. ಮಧ್ಯಾಹ್ನ 1.30, ಸಂಜೆ 4.30 ಮತ್ತು ರಾತ್ರಿ 7.30 ಗಂಟೆಗೆ.