ಚಾರಣದಲ್ಲಿ ದಾರಿ ತಪ್ಪಿದ ಯುವತಿಯರು ಸುರಕ್ಷಿತ

| Published : Dec 18 2023, 02:00 AM IST

ಸಾರಾಂಶ

ರಾಮನಗರ: ಚಾರಣ ಮುಗಿಸಿ ವಾಪಸ್ಸಾಗುವಾಗ ಅರಣ್ಯದಲ್ಲಿ ದಾರಿ ತಪ್ಪಿದ ಆರು ಮಂದಿ ಯುವತಿಯರನ್ನು ಪೊಲೀಸರು ಗ್ರಾಮಸ್ಥರ ಸಹಕಾರದಿಂದ ಪತ್ತೆ ಹಚ್ಚಿದ ಘಟನೆ ಹಂದಿಗುಂದಿ ಅರಣ್ಯ ಪ್ರದೇಶದಲ್ಲಿ ಶನಿವಾರ ನಡೆದಿದೆ.

ರಾಮನಗರ: ಚಾರಣ ಮುಗಿಸಿ ವಾಪಸ್ಸಾಗುವಾಗ ಅರಣ್ಯದಲ್ಲಿ ದಾರಿ ತಪ್ಪಿದ ಆರು ಮಂದಿ ಯುವತಿಯರನ್ನು ಪೊಲೀಸರು ಗ್ರಾಮಸ್ಥರ ಸಹಕಾರದಿಂದ ಪತ್ತೆ ಹಚ್ಚಿದ ಘಟನೆ ಹಂದಿಗುಂದಿ ಅರಣ್ಯ ಪ್ರದೇಶದಲ್ಲಿ ಶನಿವಾರ ನಡೆದಿದೆ.

ಬೆಂಗಳೂರು ಮೂಲದ ಆರು ಯುವತಿಯರು ಕಾರಿನಲ್ಲಿ ಶನಿವಾರ ಬೆಳಗ್ಗೆ 9 ಗಂಟೆ ವೇಳೆಗೆ ರಾಮನಗರದ ಹಂದಿಗುಂದಿ ಬೆಟ್ಟಕ್ಕೆ ಚಾರಣ ಮಾಡಲು ಆಗಮಿಸಿದ್ದಾರೆ.

ಬೆಳಗ್ಗೆ ಹಂದಿಗುಂದಿ ಬೆಟ್ಟ ಹತ್ತಿದ ಯುವತಿಯರು ಸಂಜೆ 4ರಿಂದ 5 ಗಂಟೆ ವೇಳೆಗೆ ಕೆಳಗಿಳಿದು, ಅರಣ್ಯ ಪ್ರದೇಶದೊಳಗೆ ತೆರಳಿದ್ದಾರೆ. ವಾಪಸ್ಸಾಗುವಾಗ ದಾರಿ ತಪ್ಪಿ ಕಾಡಿನ ಮಧ್ಯೆಯೇ ಸಿಲುಕಿ ಭಯಭೀತರಾಗಿದ್ದಾರೆ. ದಾರಿ ಕಾಣದೆ ಅಲೆದಾಡಿದ ಯುವತಿಯರು 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಹಂದಿಗುಂದಿ ಬೆಟ್ಟದ ಅರಣ್ಯಕ್ಕೆ ಆಗಮಿಸಿದ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಬಸವನಪುರ ಗ್ರಾಮಸ್ಥರ ಸಹಕಾರದಿಂದ ಕಾರ್ಯಾಚರಣೆ ಆರಂಭಿಸಿ ರಾತ್ರಿ 9 ಗಂಟೆ ವೇಳೆಗೆ ಆರು ಮಂದಿ ಯುವತಿಯರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಆರು ಯುವತಿಯರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕಳುಹಿಸಿ ಕೊಡಲಾಯಿತು.

17ಕೆಆರ್ ಎಂಎನ್‌ 5.ಜೆಪಿಜಿ

ಚಾರಣದಲ್ಲಿ ದಾರಿ ತಪ್ಪಿದ ಯುವತಿಯರು.