ಪ್ರಸ್ತುತ ದಿನಗಳಲ್ಲಿ ಯುವಜನತೆ ಓದಿನ ಕಡೆಗೆ ಹೆಚ್ಚು ಗಮನಹರಿಸದೇ ದಿನದ 24 ಗಂಟೆಗಳೂ ತಮ್ಮ ಕೈಯಲ್ಲಿರುವ ಮೊಬೈಲ್ನೊಂದಿಗೆ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಮಾನಸಿಕವಾದ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ತಾಲೂಕು ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಜಿ.ಚಿನ್ನಸ್ವಾಮಿ ಹೇಳಿದ್ದಾರೆ.
- ಚನ್ನಗಿರಿ ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಪ್ರಸ್ತುತ ದಿನಗಳಲ್ಲಿ ಯುವಜನತೆ ಓದಿನ ಕಡೆಗೆ ಹೆಚ್ಚು ಗಮನಹರಿಸದೇ ದಿನದ 24 ಗಂಟೆಗಳೂ ತಮ್ಮ ಕೈಯಲ್ಲಿರುವ ಮೊಬೈಲ್ನೊಂದಿಗೆ ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ಮಾನಸಿಕವಾದ ಖಿನ್ನತೆಗೆ ಒಳಗಾಗುತ್ತಿದ್ದಾರೆ ಎಂದು ತಾಲೂಕು ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಜಿ.ಚಿನ್ನಸ್ವಾಮಿ ಹೇಳಿದರು.ಶುಕ್ರವಾರ ಪಟ್ಟಣದ ಸರ್ಕಾರಿ ಸಾರ್ವಜನಿಕ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ದಿನಪತ್ರಿಕೆ, ವಾರಪತ್ರಿಕೆ, ಮಾಸ ಪತ್ರಿಕೆಗಳಿಗಾಗಿ ಕಾಯುವ ಕಾಲ ಈ ಹಿಂದೆ ಇತ್ತು. ಆದರೆ, ಪ್ರಸ್ತುತ ದಿನಪತ್ರಿಕೆಗಳು ಮನೆಯ ಬಾಗಿಲಿಗೆ ಬಂದರೂ ಮಕ್ಕಳು, ಯುವಜನರು ಪತ್ರಿಕೆ ಓದುವುದಿರಲಿ, ಅವುಗಳನ್ನು ಕೈಗಳಿಂದ ಮುಟ್ಟುವುದೂ ಇಲ್ಲದ ದುಸ್ಥಿತಿ ತಲುಪಿದ್ದಾರೆ. ಹೀಗಾಗದೇ ಓದುವ ಹವ್ಯಾಸವನ್ನು ಬೆಳೆಸಿಕೊಂಡರೆ ಹೆಚ್ಚು ಜ್ಞಾನ ಪಡೆಯಲು ಸಾಧ್ಯ ಎಂದರು.
ಇಂದಿನ ದಿನಗಳಲ್ಲಿ 50 ವರ್ಷ ಮೇಲ್ಪಟ್ಟವರು ಮಾತ್ರ ಓದುವ ಹವ್ಯಾಸವನ್ನು ಇಂದಿಗೂ ಇಟ್ಟುಕೊಂಡಿದ್ದಾರೆ. ಈ ತಲೆಮಾರು ನಶಿಸಿದರೆ ಓದುವವರ ಸಂಖ್ಯೆಯೇ ಇಲ್ಲದಂತಾಗುವ ಆತಂಕವಿದೆ. ಗ್ರಂಥಾಲಯಗಳ ಪ್ರಾರಂಭಕ್ಕೆ ಬುನಾದಿ ಹಾಕಿದ ಎಸ್.ಆರ್.ರಂಗನಾಥ್ ಅವರ ಜನ್ಮದಿನದ ಅಂಗವಾಗಿ ಪ್ರತಿವರ್ಷ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ಕಾರ್ಯಕ್ರಮದ ಮೂಲಕ ಯುವಜನತೆಗೆ ಗ್ರಂಥಾಲಯದ ಮಹತ್ವವನ್ನು ತಿಳಿಸುವ ಕೆಲಸ ಆಗಬೇಕಾಗಿದೆ ಎಂದರು.ಗ್ರಂಥಪಾಲಕ ಬಿ.ಎಲ್.ಜಾಧವ್ ಮಾತನಾಡಿ, ಚನ್ನಗಿರಿ ಪಟ್ಟಣದಲ್ಲಿರುವ ಈ ಗ್ರಂಥಾಲಯದಲ್ಲಿ 1200 ಜನ ಸದಸ್ಯರಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಪುಸ್ತಕಗಳ ಸಂಗ್ರಹ ಇದೆ. 10 ವರ್ಷಗಳ ಬಾಲಕರಿಂದ ಹಿಡಿದು ವೃದ್ಧರವರೆಗೂ ಓದಬಹುದಾದ ಎಲ್ಲ ವಿಧದ ಉತ್ತಮ ಪುಸ್ತಕಗಳ ಸಂಗ್ರಹಾಲಯ ಇದಾಗಿದೆ ಎಂದರು.
ಈ ಗ್ರಂಥಾಲಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗುವ ವಿದ್ಯಾರ್ಥಿಗಳು, ದಿನಪತ್ರಿಕೆ, ಮಾಸಪತ್ರಿಕೆ, ವಾರಪತ್ರಿಕೆಗಳನ್ನು ಓದಲು ಪ್ರತಿದಿನವು ಜನರು ಬರುತ್ತಾರೆ ಅವರಿಗೆ ಬೇಕಾದ ಎಲ್ಲ ರೀತಿಯ ಮೂಲ ಸೌಲಭ್ಯಗಳನ್ನು ಹೊಂದಿರುವ ಸುಸಜ್ಜಿತ ಗ್ರಂಥಾಲಯ ಇದಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಮುಖ್ಯ ಅತಿಥಿಗಳಾಗಿ ಜೆ.ಎಸ್. ಮಲ್ಲಿಕಾರ್ಜುನ್, ಶಿಕ್ಷಕ ವಿ.ಎ.ಷಣ್ಮುಖಪ್ಪ, ಚಿಕ್ಕಪ್ಪ, ಉಮಾಪತಿ ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಓದುಗರು ಹಾಜರಿದ್ದರು.
- - -(ಕೋಟ್)
ಇಂದಿನ ಯುವಜನಾಂಗ ಪುಸ್ತಕ ಹಿಡಿ, ಮೊಬೈಲ್ ಬಿಡಿ ಎಂಬ ಶಿಕ್ಷಣ ಇಲಾಖೆಯ ಘೋಷಣೆಯಂತೆ ಮೊಬೈಲ್ಗಳನ್ನು ಅವಶ್ಯಕತೆಗೆ ತಕ್ಕಂತೆ ಬಳಸಿಕೊಂಡು ಓದುವ ಹವ್ಯಾಸವನ್ನು ಬೆಳೆಸಿಕೊಂಡಾಗ ವಿಚಾರ ಶಕ್ತಿಗಳು ವೃದ್ಧಿಸುತ್ತವೆ.- ಬಿ.ಎಲ್.ಜಾಧವ್, ಗ್ರಂಥಪಾಲಕ.
- - --20ಕೆಸಿಎನ್ಜಿ1: ಗ್ರಂಥಾಲಯ ಸಪ್ತಾಹ ಕಾರ್ಯಕ್ರಮವನ್ನು ಕಾರ್ಯದರ್ಶಿ ಜಿ.ಚಿನ್ನಸ್ವಾಮಿ ಉದ್ಘಟಿಸಿದರು.