ಸಾರಾಂಶ
ಮನುಷ್ಯನ ಮನಸ್ಸಿನ ಕಾಯಿಲೆಗೆ ರಂಗಭೂಮಿಯೇ ಔಷಧ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ತುಮಕೂರು
ಮನುಷ್ಯನ ಮನಸ್ಸಿನ ಕಾಯಿಲೆಗೆ ರಂಗಭೂಮಿಯೇ ಔಷಧ ಎಂದು ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮಲ್ಲಿಕಾರ್ಜುನ ಕೆಂಕೆರೆ ಅಭಿಪ್ರಾಯಪಟ್ಟರು.ಕರ್ನಾಟಕ ನಾಟಕ ಅಕಾಡೆಮಿ ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಸಹಯೋಗದೊಂದಿಗೆ ಗುರುವಾರ ಆಯೋಜಿದ್ದ ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ಹಲವು ಖಾಯಿಲೆಗಳಿಗೆ ವಿಭಿನ್ನ ರೀತಿಯ ಔಷಧಿಗಳಿವೆ, ಆದರೆ ಮನಸ್ಸಿನ ಕಾಯಿಲೆಗಳಿಗೆ ರಂಗಭೂಮಿ ಮೊದಲಾದ ಸಂಪ್ರಾದಾಯಿಕ ಕಲೆಗಳೇ ಔಷಧಿಗಳು ಎಂದರು.
ಇಂದಿನ ಯುವಜನತೆ ಮೊಬೈಲ್ ದಾಸರಾಗಿದ್ದಾರೆ. ಅವರು ಮೊಬೈಲ್ ಲೋಕದಿಂದ ಹೊರಬಂದು ಜಗತ್ತನ್ನು ನೋಡಲು ಕಲಿತರೆ ಅನೇಕ ಸಮಸ್ಯೆಗಳು ತಾವಾಗಿಯೇ ಪರಿಹಾರವಾಗುತ್ತವೆ ಎಂದರು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ರಂಗಭೂಮಿ ಕಲಾವಿದ ಎಚ್.ಎಂ.ರಂಗಯ್ಯ, ಕಳೆದ 40 ವರ್ಷಗಳಿಂದ ರಂಗಭೂಮಿ ಕಲೆಯ ಉಳಿವಿಗಾಗಿ ತನ್ನ ಕೈಲಾದ ಸೇವೆ ಮಾಡುತ್ತಿದ್ದೇನೆ. ಮನೆಯಲ್ಲಿಯೇ ಆಪ್ತರಂಗ ಮಂದಿರ ನಡೆಸಿಕೊಂಡು ಹೋಗುತ್ತಿದ್ದೇನೆ. ರಂಗಭೂಮಿಯನ್ನು ಉಳಿಸಿ ಬೆಳೆಸಲು ಪ್ರಜ್ಞಾವಂತ ಯುವ ಸಮುದಾಯ ಮುಂದೆ ಬರಬೇಕಿದ ಎಂದರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ನಿಕಟಪೂರ್ವ ಸದಸ್ಯೆ ಆರತಿ ಪಟ್ರಮೆ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸಮಾಜವು ಅನೇಕ ರೀತಿಯ ಒತ್ತಡ ಮತ್ತು ಸವಾಲುಗಳನ್ನು ಎದುರಿಸುತ್ತಿದೆ. ಸವಾಲುಗಳು ಇಲ್ಲದೇ ಯಾವ ಯುಗವೂ ಇಲ್ಲ. ಆದರೆ ಇವುಗಳಿಂದ ಹೊರಬರಲು ಮತ್ತು ಸಮಾಜದಲ್ಲಿ ಶಾಂತಿಯನ್ನು ಕಾಪಾಡಲು ಕಲೆಯ ಅವಶ್ಯಕತೆಯಿದೆ ಎಂದು ಅಭಿಪ್ರಾಯಪಟ್ಟರು.ವಿವಿ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ಹಿರಿಯ ರಂಗಭೂಮಿ ಕಲಾವಿದರಾದ ಪಂಡಿತ್ ಜವಾಹರ್, ಎಸ್. ಎ. ಖಾನ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾದ ಉಗಮ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು. ಕುಮಾರ್ ಮತ್ತು ತಂಡವು ಜಾಗೃತಿ ಗೀತೆಗಳನ್ನು ಹಾಡಿದರು