ಮನಸ್ಸು ಪರಿವರ್ತಿಸುವ ರಂಗಭೂಮಿ- ಅಯ್ಯನಗೌಡ ಕೆಂಚಮ್ಮನವರ್

| Published : Dec 18 2023, 02:00 AM IST

ಮನಸ್ಸು ಪರಿವರ್ತಿಸುವ ರಂಗಭೂಮಿ- ಅಯ್ಯನಗೌಡ ಕೆಂಚಮ್ಮನವರ್
Share this Article
  • FB
  • TW
  • Linkdin
  • Email

ಸಾರಾಂಶ

ಯುವಪೀಳಿಗೆ ನಾಟಕಗಳನ್ನು ಹೆಚ್ಚು ವೀಕ್ಷಿಸುವ ಮೂಲಕ ನಾಟಕದ ಒಳ್ಳೆಯ ಸಂದೇಶ ಅನುಕರಣೆ ಮಾಡಬೇಕು. ಸಾಮಾಜಿಕ ಬದಲಾವಣೆಗೆ ರಂಗಭೂಮಿ ನಾಟಕಗಳು ಪೂರಕವಾಗಿವೆ. ಟಿವಿ ಧಾರಾವಾಹಿಗಳ ಹಾವಳಿಯಿಂದ ನಶಿಸುತ್ತಿರುವ ರಂಗಭೂಮಿ ಕಲೆ ಹಾಗೂ ಕಲಾವಿದರನ್ನು ಉಳಿಸಿ-ಬೆಳೆಸಲು ನಾಗರಿಕರ ಪ್ರೋತ್ಸಾಹ ಅಗತ್ಯವಾಗಿದೆ

ಯಲಬುರ್ಗಾ: ರಂಗಭೂಮಿ ಕಲೆ ಪ್ರತಿಯೊಬ್ಬರ ಮನಸ್ಸು ಪರಿವರ್ತನೆ ಮಾಡುತ್ತದೆ ಎಂದು ಬಿಜೆಪಿ ಮುಂಖಡ ಅಯ್ಯನಗೌಡ ಕೆಂಚಮ್ಮನವರ್ ಹೇಳಿದರು.

ತಾಲೂಕಿನ ನರಸಾಪುರ ಗ್ರಾಮದ ಮಾರುತೇಶ್ವರ ಕಾರ್ತಿಕೋತ್ಸವ ನಿಮಿತ್ತ ಅಮರ ಪಂಚಾಕ್ಷರಿ ಗವಾಯಿಗಳ ನಾಟ್ಯ ಸಂಘ ಆಯೋಜಿಸಿದ್ದ ಹೇಮರೆಡ್ಡಿ ಮಲ್ಲಮ್ಮ ಭಕ್ತಿ ಪ್ರಧಾನ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ಯುವ ಸಮುದಾಯ ನಾಟಕ ಕಲೆ ಮೈಗೂಡಿಸಿಕೊಳ್ಳುವ ಮೂಲಕ ಕಲೆ ಉಳಿವಿಗೆ ಪ್ರೋತ್ಸಾಹಿಸಬೇಕು ಎಂದರು.

ಯುವಪೀಳಿಗೆ ನಾಟಕಗಳನ್ನು ಹೆಚ್ಚು ವೀಕ್ಷಿಸುವ ಮೂಲಕ ನಾಟಕದ ಒಳ್ಳೆಯ ಸಂದೇಶ ಅನುಕರಣೆ ಮಾಡಬೇಕು. ಸಾಮಾಜಿಕ ಬದಲಾವಣೆಗೆ ರಂಗಭೂಮಿ ನಾಟಕಗಳು ಪೂರಕವಾಗಿವೆ. ಟಿವಿ ಧಾರಾವಾಹಿಗಳ ಹಾವಳಿಯಿಂದ ನಶಿಸುತ್ತಿರುವ ರಂಗಭೂಮಿ ಕಲೆ ಹಾಗೂ ಕಲಾವಿದರನ್ನು ಉಳಿಸಿ-ಬೆಳೆಸಲು ನಾಗರಿಕರ ಪ್ರೋತ್ಸಾಹ ಅಗತ್ಯವಾಗಿದೆ ಎಂದು ಹೇಳಿದರು.

ವಕೀಲರ ಸಂಘದ ಮಾಜಿ ಅಧ್ಯಕ್ಷ ಮಲ್ಲನಗೌಡ ಪಾಟೀಲ್, ರಾಬಕೊವಿ ಹಾಲು ಒಕ್ಕೂಟದ ನಿರ್ದೇಶಕ ಶಿವಪ್ಪ ವಾದಿ ಮಾತನಾಡಿ, ಆಧುನಿಕ ಯುಗದಲ್ಲಿ ಅತಿಯಾದ ಸಾಮಾಜಿಕ ಜಾಲತಾಣದ ಬಳಕೆಯಿಂದ ಕಲೆ, ಸಾಹಿತ್ಯ ಮತ್ತು ರಂಗಭೂಮಿ ಮೇಲೆ ಆಸಕ್ತಿ ಕಡಿಮೆಯಾಗುತ್ತಿದೆ. ಗ್ರಾಮೀಣ ಜನರಿಗೆ ಮನರಂಜನೆ ನೀಡುವ ಜತೆಗೆ ಹಳ್ಳಿಯಲ್ಲಿ ಹಬ್ಬದ ವಾತಾವರಣ ನಿರ್ಮಿಸುತ್ತಿದ್ದು ನಾಟಕ ಕಲೆಗಳು ಇತ್ತೀಚೆಗೆ ಕಣ್ಮರೆಯಾಗುತ್ತಿರುವುದು ಬೇಸರದ ಸಂಗತಿ ಎಂದರು.

ಮಕ್ಕಳ್ಳಿಯ ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಈ ವೇಳೆ ಗ್ರಾಪಂ ಸದಸ್ಯರಾದ ಆದಿಬಸಪ್ಪ ಮಾಲಿಪಾಟೀಲ್, ಗುರಪ್ಪ ರಾಥೋಡ, ಈಶಪ್ಪ ಬಡಿಗೇರ, ಬಸಪ್ಪ ಕೋಳೂರು, ಮರೇಗೌಡ ಮಾಲಿಪಾಟೀಲ್, ಶಿವಪ್ಪ ಕೊಪ್ಪದ, ಮುತ್ತಣ್ಣ ಮುರುಡಿ, ರಮೇಶ ಮಾಲಿಪಾಟೀಲ್ ಮತ್ತಿತರರು ಇದ್ದರು.