ಸಾರಾಂಶ
ದೇಶದಲ್ಲಿ ಶೇ.35ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಆರೋಗ್ಯವಂತರನ್ನಾಗಿ ಮಾಡಲು ಶಾಲೆಗಳಲ್ಲಿ ಮೊಟ್ಟೆ, ಚಿಕ್ಕಿ, ಬಿಸಿಯೂಟ, ಹಾಲು ಸೇರಿದಂತೆ ನ್ಯೂಟ್ರಿಷಿಯನ್ ಆಹಾರ ಪದಾರ್ಥ ವಿತರಿಸಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ: ದೇಶದಲ್ಲಿ ಶೇ.35ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಆರೋಗ್ಯವಂತರನ್ನಾಗಿ ಮಾಡಲು ಶಾಲೆಗಳಲ್ಲಿ ಮೊಟ್ಟೆ, ಚಿಕ್ಕಿ, ಬಿಸಿಯೂಟ, ಹಾಲು ಸೇರಿದಂತೆ ನ್ಯೂಟ್ರಿಷಿಯನ್ ಆಹಾರ ಪದಾರ್ಥ ವಿತರಿಸಲಾಗುತ್ತಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ಜಿಕೆಬಿಎಂಎಸ್ ಶಾಲೆ ಆವರಣದಲ್ಲಿ ವೋಲ್ವೋ ಕಂಪನಿ ಸಿಎಸ್‌ಆರ್ ಅನುದಾನ ಹಾಗೂ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ಸಹಯೋಗದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರಿ ಶಾಲಾ ಮಕ್ಕಳ ಆರೋಗ್ಯ ಕಾಪಾಡಲು ಕಾಂಗ್ರೆಸ್ ಸರ್ಕಾರ ಖಾಸಗಿ ಕಂಪನಿಗಳ ಸಹಕಾರದಲ್ಲಿ ಪೌಷ್ಟಿಕ ಆಹಾರ ನೀಡಲು ಯೋಜನೆ ರೂಪಿಸಿದೆ ಎಂದರು.
ಡಿಡಿಪಿಐ ಬೈಲಾಂಜಿನಪ್ಪ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳ ಆರೋಗ್ಯ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಶಾಸಕರು ಆದ್ಯತೆ ನೀಡುತ್ತಿದ್ದಾರೆ. ಅಜೀಂ ಫೌಂಡೇಷನ್‌ನಿಂದ 1950 ಕೋಟಿ ರು. ವೆಚ್ಚದಲ್ಲಿ ವಾರದಲ್ಲಿ 6 ದಿನ ಮೊಟ್ಟೆ ವಿತರಣೆಗೆ ಮುಂದಾಗಿದೆ. ಮಕ್ಕಳನ್ನು ಸದೃಢರನ್ನಾಗಿಸಲು ದೃಢ ಹೆಜ್ಜೆ ಇಟ್ಟಿದ್ದಾರೆಂದರು.
ಬಿಇಒ ಬೈಲಾಂಜಿನಪ್ಪ ಮಾತನಾಡಿ, ವಿವೇಕ ಯೋಜನೆಯಡಿ ಸರ್ಕಾರ ಪ್ರತಿ ಜಿಲ್ಲೆಗೆ 8ರಿಂದ 10 ಕಂಪನಿಗಳನ್ನು ಒಗ್ಗೂಡಿಸಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಗೆ ಮುಂದಾಗಿದೆ. ತಾಲೂಕಿನಲ್ಲಿ ವೋಲ್ವೋ, ಪ್ರೆಸ್ಟೀಜ್ ಕಂಪನಿಗಳು ಶಾಲೆಗಳ ಅಭಿವೃದ್ಧಿಗೆ ಸಹಕರಿಸುತ್ತಿವೆ ಎಂದು ತಿಳಿಸಿದರು.
ಅನ್ನಪೂರ್ಣ ಟ್ರಸ್ಟ್ ನಿರ್ದೇಶಕ ಜಯಪ್ರಕಾಶ್, ವೋಲ್ವೋ ಮುಖ್ಯಸ್ಥ ಜಿವಿ ರಾವ್, ಸಂಪನ್ಮೂಲ ವ್ಯಕ್ತಿ ಕಿಶನ್, ಅನ್ನಪೂರ್ಣ ಟ್ರಸ್ಟ್ ನಿರ್ದೇಶಕ ಜಯಪ್ರಕಾಶ್, ಆಶೀಶ್ ಭಾರದ್ವಜ್, ಎಸ್ ಡಿಎಂಸಿ ಗೌರವಾಧ್ಯಕ್ಷ ಡಿ.ಎಸ್ ರಾಜ್ ಕುಮಾರ್, ನಗರಸಭೆ ಸದಸ್ಯ ಗೌತಮ್, ನಾಮ ನಿರ್ದೇಶಿತ ನಗರಸಭೆ ಸದಸ್ಯರಾದ ರಮಾದೇವಿ, ಅಮ್ಜದ್ ಪಾಷಾ, ಗಣೇಶ್, ಡಿಡಿಪಿಐ ಬೈಲಾಂಜಿನಪ್ಪ, ಬಿಇಒ ಪದ್ಮನಾಭ, ಪೌರಾಯುಕ್ತ ನೀಲಲೋಚನಾ ಪ್ರಭು, ಬೋಧನ ಹೊಸಹಳ್ಳಿ ಪ್ರಕಾಶ್, ಬಚ್ಚಣ್ಣ, ಮಲ್ಲಸಂದ್ರ ಶೇಷಪ್ಪ ಇತರರಿದ್ದರು.