ಹೊನ್ನಾಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಅ.27ಕ್ಕೆ ಮುಕ್ತಾಯಗೊಂಡು ಇದೀಗ ಜಿಲ್ಲಾಧಿಕಾರಿ ಕಚೇರಿಯಿಂದ ಪರಿಷ್ಕೃತ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಂತೆ ನಗರ ಪ್ರದೇಶದಲ್ಲಿ 18 ಹಾಗೂ ಗ್ರಾಮಾಂತರದ 230 ಸೇರಿ ಒಟ್ಟು 248 ಬೂತ್‌ಗಳಿದ್ದು, ಎಸ್ಐಆರ್ ಪ್ರಕ್ರಿಯೆ ಪೂರ್ವದಲ್ಲಿ 200033 ಮತದಾರರಿದ್ದರು. ಎಸ್.ಐ,ಆರ್. ಪ್ರಕ್ರಿಯೆ ಮುಗಿದ ನಂತರದಲ್ಲಿ ಈಗ 186616 ಮತದಾರರಿದ್ದಾರೆ ಎಂದು ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ ತಿಳಿಸಿದ್ದಾರೆ.

- ಡಿಸಿ ಕಚೇರಿಯಿಂದ ಪರಿಷ್ಕೃತ ಮತದಾರರ ಪಟ್ಟಿ ಬಿಡುಗಡೆ

- - -

ಹೊನ್ನಾಳಿ: ಹೊನ್ನಾಳಿ ಕ್ಷೇತ್ರ ವ್ಯಾಪ್ತಿಯಲ್ಲಿ ಎಸ್‌ಐಆರ್ ಪ್ರಕ್ರಿಯೆ ಅ.27ಕ್ಕೆ ಮುಕ್ತಾಯಗೊಂಡು ಇದೀಗ ಜಿಲ್ಲಾಧಿಕಾರಿ ಕಚೇರಿಯಿಂದ ಪರಿಷ್ಕೃತ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅದರಂತೆ ನಗರ ಪ್ರದೇಶದಲ್ಲಿ 18 ಹಾಗೂ ಗ್ರಾಮಾಂತರದ 230 ಸೇರಿ ಒಟ್ಟು 248 ಬೂತ್‌ಗಳಿದ್ದು, ಎಸ್ಐಆರ್ ಪ್ರಕ್ರಿಯೆ ಪೂರ್ವದಲ್ಲಿ 200033 ಮತದಾರರಿದ್ದರು. ಎಸ್.ಐ,ಆರ್. ಪ್ರಕ್ರಿಯೆ ಮುಗಿದ ನಂತರದಲ್ಲಿ ಈಗ 186616 ಮತದಾರರಿದ್ದಾರೆ ಎಂದು ಉಪವಿಭಾಗಾಧಿಕಾರಿ ಎಚ್.ಬಿ.ಚನ್ನಪ್ಪ ತಿಳಿಸಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಎಸ್.ಆರ್.ಐ. ಮತದಾರರ ಪಟ್ಟಿ ಕುರಿತು ಕರೆಯಲಾಗಿದ್ದ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಮತದಾರರ ಹೊಸ ಪಟ್ಟಿಯ ಪ್ರಕಾರ 93588 ಪುರುಷ ಮತದಾರರು, 93024 ಮಹಿಳಾ ಮತದಾರರು ಹಾಗೂ 04 ತೃತೀಯಲಿಂಗ ಮತದಾರರು ಎಲ್ಲ ಸೇರಿ ಒಟ್ಟು 186616 ಮತದಾರರಿದ್ದಾರೆ ಎಂದು ಮಾಹಿತಿ ನೀಡಿದರು.

ಸರ್ವೀಸ್ (ಸೇನೆಯಲ್ಲಿರುವ) ಮತದಾರರ ಪೈಕಿ 56 ಪುರುಷರು ಹಾಗೂ 01 ಮಹಿಳಾ ಮತದಾರರಿದ್ದು, ಒಟ್ಟು 57 ಮತದಾರರು ಇದ್ದಾರೆ. 18ರಿಂದ 19 ವಯೋಮಾನದ ಮತರಾರರ ಪೈಕಿ 1771 ಪುರುಷರು, 1687 ಮಹಿಳಾ ಒಟ್ಟು 3458 ಮತದಾರರಿದ್ದಾರೆ. ಇನ್ನು 85 ವರ್ಷ ಅಥವಾ ಹೆಚ್ಚು ವಯೋಮಾನದ ಮತದಾರರು 1576 ಇದ್ದು, ಈ ಪೈಕಿ 666 ಪುರುಷರು, 910 ಮಹಿಳಾ ಮತದಾರರು ಇದ್ದಾರೆ. ದಿವ್ಯಾಂಗ ಮತದಾರರು ಒಟ್ಟು 4492 ಇದ್ದು, ಇದರಲ್ಲಿ 2659 ಪುರುಷರು, 1835 ಮಹಿಳಾ ಮತದಾರರು ಇದ್ದಾರೆ ಎಂದು ವಿವರಿಸಿದರು.

ಎಸ್.ಐ.ಆರ್. ಪ್ರಕ್ರಿಯೆಯಲ್ಲಿ ಸೇರ್ಪಡೆಯಾದವರು 3010 ಜನ. ಮತದಾರರ ಪಟ್ಟಿಯಿಂದ ಕೈ ಬಿಟ್ಟವರು 399 ಇದ್ದು, ಪರಿಷ್ಕರಣೆಗೊಳಗಾದ ಮತದಾರರು 2188. ವಿವಿಧ ಕಾರಣ ಮತ್ತು ಹೆಚ್ಚಿನ ಮಾಹಿತಿಗಾಗಿ 1024 ಜನರಿಗೆ ನೋಟಿಸ್ ನೀಡಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಹೊನ್ನಾಳಿ ಗ್ರೇಡ್-2 ತಹಸೀಲ್ದಾರ್ ಸುರೇಶ್, ನ್ಯಾಮತಿ ತಹಸೀಲ್ದಾರ್ ವಿಶ್ವನಾಥ ಮರಡಿ, ಬಿಜೆಪಿ ಪಕ್ಷದಿಂದ ಎಂ.ಆರ್. ಮಹೇಶ್, ಬಡಾವಣೆ ರಂಗಪ್ಪ, ಕಾಂಗ್ರೆಸ್ ಪಕ್ಷದಿಂದ ಆರ್.ನಾಗಪ್ಪ, ಆಮ್ ಆದ್ಮಿ ಪಕ್ಷದಿಂದ ಲಕ್ಷ್ಮೀಕಾಂತ್ ಕಂದಾಯ ಇಲಾಖೆ ನೌಕರರಾದ ಶಿರಸ್ತೇದಾರ ಮಂಜುನಾಥ ನ್ಯಾಮತಿ ಶಿರಸ್ತೇದಾರ ಸಂತೋಷ್, ಚುನಾವಣೆ ಶಾಖೆಯ ಮಂಜು, ಚಂದ್ರಪ್ಪ ಇತರರು ಇದ್ದರು.

- - -

-29ಎಚ್.ಎಲ್.ಐ1: