ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಚೆಕ್‌ಪೋಸ್ಟ್‌

| Published : Mar 21 2024, 01:00 AM IST

ಸಾರಾಂಶ

ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಅಣ್ಣಿಗೇರಿ, ಶಿರಗುಪ್ಪಿ ಹಾಗೂ ಹುಬ್ಬಳ್ಳಿ ಗ್ರಾಮಾಂತರಕ್ಕೆ ಒಳಪಟ್ಟಿವೆ. ಈಗಾಗಲೇ ಇಲ್ಲಿ ಲೋಕಸಭೆ ಚುನಾವಣೆಗೆ ಬೇಕಾಗುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನವಲಗುಂದ:ನವಲಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಅಣ್ಣಿಗೇರಿ, ಶಿರಗುಪ್ಪಿ ಹಾಗೂ ಹುಬ್ಬಳ್ಳಿ ಗ್ರಾಮಾಂತರಕ್ಕೆ ಒಳಪಟ್ಟಿವೆ. ಈಗಾಗಲೇ ಇಲ್ಲಿ ಲೋಕಸಭೆ ಚುನಾವಣೆಗೆ ಬೇಕಾಗುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ವಿಧಾನಸಭಾ ಕ್ಷೇತ್ರದಲ್ಲಿ 2,11,000 ಮತದಾರರಿದ್ದಾರೆ. ಹೊಸದಾಗಿ ಚುನಾವಣೆ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸುವವರು ಏ. 9ರೊಳಗೆ ಸಲ್ಲಿಸಬೇಕೆಂದು ಸಹಾಯಕ ಚುನಾವಣಾಧಿಕಾರಿ ದೇವರಾಜ ಆರ್. ಹೇಳಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 234 ಮತಗಟ್ಟೆಗಳು ನಮ್ಮ ವ್ಯಾಪ್ತಿಯಲ್ಲಿ ಬರುತ್ತವೆ. ತಹಸೀಲ್ದಾರ್‌ ಮತ್ತು ಚುನಾವಣಾ ಅಧಿಕಾರಿಗಳು ವೀಕ್ಷಿಸಿದ್ದು ನೀರು, ರ್‍ಯಾಂಪ್‌, ವಿದ್ಯುತ್, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಮತಗಟ್ಟೆಗಳಿಗೆ ಒದಗಿಸಲು ಆದ್ಯತೆ ನೀಡಲಾಗಿದೆ. ಶಾಲೆಗಳ ಮೇಲ್ಚಾವಣಿ ಇಲ್ಲದಿದ್ದರೆ ಶಾಮಿಯಾನ್‌ ವ್ಯವಸ್ಥೆ ಮಾಡಲಾಗುವುದು. ಪ್ರತಿ ಮತಗಟ್ಟೆಗೆ ಬಿಎಲ್‌ಒ ನೇಮಿಸಿದ್ದು ಜನವರಿ ತಿಂಗಳಿನಲ್ಲಿ ಮತದಾರರ ಪಟ್ಟಿ ಪರಿಶೀಲಿಸಿ ಆಯಾ ಪಕ್ಷದ ಮುಖಂಡರಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ನವಲಗುಂದ ಮತ್ತು ಅಣ್ಣಿಗೇರಿ ತಾಲೂಕುಗಳಲ್ಲಿ ಗದಗ-ಅಣ್ಣಿಗೇರಿ, ನವಲಗುಂದ-ನರಗುಂದ ಹಾಗೂ ಅಣ್ಣಿಗೇರಿ-ಹುಬ್ಬಳ್ಳಿ ಮಧ್ಯೆ ಚೆಕ್‌ಪೋಸ್ಟ್‌ ನಿರ್ಮಿಸಿದ್ದು 2 ತಂಡ ರಚಿಸಲಾಗಿದೆ ಎಂದರು.ರಾಜಕೀಯ ಬ್ಯಾನರ್ ಅಥವಾ ಪೋಸ್ಟರ್‌ ತೆಗೆಯದೇ ಹಾಗೆ ಬಿಟ್ಟಿದ್ದರೆ, ವಾಹನಗಳಲ್ಲಿ ಲಂಚ, ಉಡುಗೊರೆ, ಮದ್ಯ ಸೇರಿದಂತೆ ಅನೇಕ ರೀತಿಯ ಮಾಹಿತಿಗಳನ್ನು ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತರಬೇಕು. ತಕ್ಷಣ ಕ್ರಮಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.ಈ ವೇಳೆ ನವಲಗುಂದ ತಹಸೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗಣ್ಣವರ, ಅಣ್ಣಿಗೇರಿ ತಹಸೀಲ್ದಾರ್‌ ಮಾವರ್ಕರ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.