ಸಾರಾಂಶ
ಶಿವಮೊಗ್ಗ: ಕಾಂಗ್ರೆಸ್ ಪಕ್ಷದಲ್ಲಿ ಮೂರು ರೀತಿಯ ಹುಚ್ಚರಿದ್ದಾರೆ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿನ ಆಪರೇಷನ್ ಸಿಂದೂರ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರು, ಮನಸ್ಸಿಗೆ ಬಂದಂತೆ ಹುಚ್ಚಾಟದ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್‌ನಲ್ಲಿ ಕೆಲವರು ಅರೆ ಹುಚ್ಚರು, ಕೆಲವರು ಪೂರ್ಣ ಹುಚ್ಚರು, ಮತ್ತೆ ಕೆಲವರಿಗೆ ಹುಚ್ಚು ಬಿಟ್ಟಿದೆ. ಹೀಗೆ ಹುಚ್ಚುಬಿಟ್ಟವರ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇರುವುದು ಸಂತೋಷ. ಯಾವಾಗ ಅವರು ಹಣೆಗೆ ಸಿಂದೂರವನ್ನಿಟ್ಟುಕೊಂಡರೋ ಆಗ ಅವರಿಗಿದ್ದ ಹುಚ್ಚು ಬಿಟ್ಟು ಹೋಗಿದೆ. ಹಾಗಾಗಿ ಸಿದ್ದರಾಮಯ್ಯನವರು ಮಾತ್ರ ಬುದ್ಧಿಭ್ರಮಣೆಯಿಂದ ಗುಣವಾಗಿದ್ದಾರೆ ಎಂದರು.ಮುಸ್ಲಿಂರನ್ನು ಓಲೈಸುವುದನ್ನು ಕಾಂಗ್ರೆಸ್‌ನ ನಾಯಕರು ಇನ್ನೂ ಬಿಟ್ಟಿಲ್ಲ. ಪಾಕಿಸ್ತಾನದ ವಿರುದ್ಧ ಯುದ್ಧ ಸಾರಿದಾಗ ದೇಶದ ಜೊತೆ ನಾವಿರುತ್ತೇವೆ. ಮೋದಿಯವರಿಗೆ ಬೆಂಬಲ ಕೊಡುತ್ತೇವೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ನಂತರ ಅವರ ಮಾತಿನ ರೀತಿಯೇ ಬದಲಾವಣೆಯಾಯಿತು. ಏಕೆ ಹೀಗೆ ವಿರೋಧಬಾಸದ ಹೇಳಿಕೆಗಳನ್ನು ಕೊಡುತ್ತಾರೋ ಗೊತ್ತಿಲ್ಲ. ಪ್ರಿಯಾಂಕ ಗಾಂಧಿಯವರನ್ನು ಮರಿ ಖರ್ಗೆ ಎಂದು ಹೇಳಿದ ಈಶ್ವರಪ್ಪ ಅವರು, ಆತನೊಬ್ಬ ಅರೆ ಹುಚ್ಚ. ಇನ್ನು ಹರಿಪ್ರಸಾದ್, ಸಂತೋಷ್ ಲಾಡ್, ದಿನೇಶ್ ಗುಂಡೂರಾವ್, ಕೊತ್ತೂರು ಮಂಜುನಾಥ್ ಮುಂತಾದವರೆಲ್ಲಾ ಅರೆ ಹುಚ್ಚರೇ ಆಗಿದ್ದಾರೆ ಎಂದು ಟೀಕಿಸಿದರು.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ದೇಶದ ಜೊತೆಗೆ ಒಟ್ಟಿಗೆ ಇರುತ್ತೇವೆ ಎಂದವರು ಇದ್ದಕ್ಕಿದ್ದ ಹಾಗೆ ಚೇಂಜ್ ಆಗಿದ್ದಾರೆ. ಯಾರೋ ರಾಷ್ಟ್ರ ದ್ರೋಹಿ ಮುಸಲ್ಮಾನರು ಇದ್ದಕ್ಕಿದ್ದ ಹಾಗೆ ಮೋದಿ ಮತ್ತು ಸೈನಿಕರನ್ನು ಹೊಗಳುತ್ತಿದ್ದೀರಿ ಎಂದು ಹೇಳಿದ್ದರಿಂದ ಟಕ್ ಅಂತ ಬದಲಾವಣೆ ಆಗಿದ್ದಾರೆ ಎಂದು ಕಿಡಿಕಾರಿದರು.ಸೈನಿಕರು ನಮ್ಮ ದೇಶದ ಶಸ್ತ್ರಾಗಳನ್ನು ಬಳಸಿಕೊಂಡು ಪಾಕಿಸ್ತಾನವನ್ನು ಧ್ವಂಸ ಮಾಡಿದ್ದಾರೆ. ಬೇರೆ ದೇಶದವರು ನಮ್ಮ ಶಶಸ್ತ್ರಗಳನ್ನು ಖರೀದಿ ಮಾಡಲು ಬರುತ್ತಿದ್ದಾರೆ. ಪ್ರಪಂಚ ಮೋದಿಯವರ ಜೊತೆ ಇದ್ದ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಏನು ಬಂತೋ ಗೊತ್ತಿಲ್ಲ. ತಮ್ಮ ಕ್ಷೇತ್ರದಲ್ಲಿ ಮುಸಲ್ಮಾನರಿದ್ದರೆ ಅದಕ್ಕೆ ಅವರ ವೋಟ್ ಬೇಕು ಎಂದು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ದೇಶದ ಸೈನಿಕರು ಹಾಗೂ ದೇಶದ ಬಗ್ಗೆ ಹಗುರವಾಗಿ ಮಾತನಾಡುವವರಿಗೆ ಗುಂಡಿಟ್ಟು ಹೊಡೆಯುವ ಕಾನೂನು ತರಬೇಕು ಎಂದರು.
ಕೋಟ್ಯಾಂತರ ರುಪಾಯಿ ಬಂಗಾರದ ಕಳ್ಳಿ ನಟಿ ರನ್ಯಾರಾವ್ ಅವರಿಗೆ ಹೇಗೆ ಜಾಮೀನು ಸಿಕ್ಕಿತು ಎಂಬುದು ನನಗೆ ಅರ್ಥವಾಗುತ್ತಿಲ್ಲ. ಕೋಟಿಗಟ್ಟಲೇ ಹಣ, ಒಡವೆ ಎಲ್ಲವೂ ಸಿಕ್ಕಿದೆ ಇದು ನ್ಯಾಯಾಂಗಕ್ಕೆ ಬಿಟ್ಟ ವಿಚಾರವಾದರೂ ಇಂತಹ ವಿಚಾರದಲ್ಲಿ ಜಾಮೀನೇ ಸಿಗದಂತಹ ಕಾನೂನುಗಳು ಬರಬೇಕಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.