- ಜಿಲ್ಲೆಯಲ್ಲಿವೇ ನೂರಾರು ಅನಧಿಕೃತ ಖಾಸಗಿ ಶಾಲೆಗಳು
ವಿಶ್ವನಾಥ ಮಲೇಬೆನ್ನೂರುಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಫೋಷಕರೇ ಎಚ್ಚರ, ಎಚ್ಚರ... ಕಾಫಿನಾಡು ಚಿಕ್ಕಮಗಳೂರು ಇಡೀ ಜಿಲ್ಲೆಯಲ್ಲಿವೇ ನೂರಾರು ಅನಧಿಕೃತ ಖಾಸಗಿ ಶಾಲೆಗಳು. ಈ ಅನಧಿಕೃತ ಖಾಸಗಿ ಶಾಲೆಗಳು ಯಾವುದೇ ಕ್ಷಣದಲ್ಲಿ ಬೇಕಾದರೂ ಬಂದ್ ಆಗಬಹುದು. ಇಂತಹ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಮುನ್ನ ಭಾರೀ ಎಚ್ಚರಿಕೆ ವಹಿಸಬೇಕಿದೆ. ಎಚ್ಚರ ತಪ್ಪಿದರೆ, ಮುಗ್ದ ಮಕ್ಕಳ ಭವಿಷ್ಯಕ್ಕೆ ದೊಡ್ಡ ಆಘಾತ ಉಂಟಾಗಬಹುದು.ಹೌದು. ಸೇವಾ ಕ್ಷೇತ್ರವಾದ ಶಿಕ್ಷಣ ಇತ್ತೀಚಿನ ದಿನಗಳಲ್ಲಿ ಅನಗತ್ಯ ಪೈಪೋಟಿ, ಇಂಗ್ಲಿಷ್‌ನ ಮೇಲಿನ ವ್ಯಾಮೋಹ, ಮಕ್ಕಳನ್ನು ಡಾಕ್ಟರ್, ಎಂಜಿನಿಯರ್‌ಗಳನ್ನಾಗಿ ಮಾಡಬೇಕೆಂಬ ಫೋಷಕರ ಒತ್ತಾಸೆಯನ್ನು ಬಂಡವಾಳವಾಗಿಸಿಕೊಂಡಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾದಿ ಬೀದಿಗೊಂದು ಶಾಲೆಗಳು ಆರಂಭಿಸಿವೆ.
ಐಟಿ-ಬಿಟಿ ಕಚೇರಿಗಳಂತೆ ಖಾಸಗಿ ಶಾಲಾ ಕೊಠಡಿ, ಹವಾನಿಯಂತ್ರಿತ ವ್ಯವಸ್ಥೆ, ಬಸ್ ಸೌಲಭ್ಯ, ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗೆ ಶಾಲಾ ಹಂತದಿಂದಲೇ ವಿದ್ಯಾರ್ಥಿಗಳನ್ನು ತಯಾರಿ ಮಾಡಲಾಗುವುದು ಎಂಬ ಶಿಕ್ಷಣ ಸಂಸ್ಥೆಯ ಬಣ್ಣದ ಮಾತಿಗೆ ಬೆರಗಾಗಿ ಲಕ್ಷ ಲಕ್ಷ ಕೊಟ್ಟು ಮಕ್ಕಳನ್ನು ಫೋಷಕರು ದಾಖಲು ಮಾಡುತ್ತಿದ್ದಾರೆ.ಮಕ್ಕಳ ಭವಿಷ್ಯ ಚನ್ನಾಗಿರಬೇಕೆಂಬ ಒಂದೇ ಒಂದು ಕಾರಣಕ್ಕೆ ಫೋಷಕರು ಸಾಲಸೋಲ ಮಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕೇಳಿದಷ್ಟು ಹಣ ಕೊಟ್ಟು ಶಾಲೆಗೆ ಸೇರಿಸುತ್ತಿದ್ದಾರೆ. ಆದರೆ, ಆ ಖಾಸಗಿ ಶಾಲೆ ಸರ್ಕಾರದಿಂದ ಮಾನ್ಯತೆ ಪಡೆದು ಕೊಂಡಿದೆಯಾ, ಆಡಳಿತ ಮಂಡಳಿ ಅಧಿಕೃತವಾಗಿ ಶಾಲೆ ನಡೆಸಲಾಗುತ್ತಿದೆಯಾ ಅಥವಾ ಶಾಲೆ ಅನಧಿಕೃತವೇ ಎಂಬುದನ್ನು ಪರಿಶೀಲನೆ ಮಾಡಬೇಕಾಗಿದೆ. ಒಂದು ವೇಳೆ ಮಕ್ಕಳನ್ನು ದಾಖಲು ಮಾಡಿದ ಶಾಲೆ ಅನಧಿಕೃತವಾಗಿದ್ದರೆ ಏಕಾಏಕಿ ಶಾಲೆ ಬಂದ್ ಆಗಬಹುದು. ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆ ಉಂಟಾಗಬಹುದಾಗಿದೆ. ಹೀಗಾಗಿ, ಫೋಷಕರು ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.ಕೇವಲ 11 ಖಾಸಗಿ ಶಾಲೆ ಮಾನ್ಯತೆ2025-26ನೇ ಸಾಲಿನಲ್ಲಿ ಶಿಕ್ಷಣ ಇಲಾಖೆಯಿಂದ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಕೆ ಮಾಡಿದ ಶಾಲೆಗಳ ಪೈಕಿ ಜಿಲ್ಲೆಯ ಕೇವಲ 11 ಶಾಲೆಗಳಿಗೆ ಮಾನ್ಯತೆ ಸಿಕ್ಕಿಲ್ಲ. ಉಳಿದಂತೆ 7 ಶಾಲೆಗಳ ಅರ್ಜಿ ಇನ್ನೂ ಪರಿಶೀಲನಾ ಹಂತದಲ್ಲಿ ಇದೆ. ಉಳಿದಂತೆ ಎಲ್ಲ ಖಾಸಗಿ ಶಾಲೆಗಳ ಅರ್ಜಿಗಳನ್ನು ಶಿಕ್ಷಣ ಇಲಾಖೆ ತಿರಸ್ಕಾರ ಮಾಡಿರುವ ಅಂಕಿ ಅಂಶ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ.61 ಶಾಲೆ ಮಾನ್ಯತೆ ನವೀಕರಣ ಅರ್ಜಿ ತಿರಸ್ಕಾರ2025-26ನೇ ಸಾಲಿನ ಖಾಸಗಿ ಅನುದಾನಿತ ಮತ್ತು ಖಾಸಗಿ ಅನುದಾನ ರಹಿತಿ ಶಾಲೆಗಳ ನವೀಕರಣಕ್ಕೆ ಒಟ್ಟು 79 ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಗಳ ಆಡಳಿತ ಮಂಡಳಿ ಅರ್ಜಿ ಸಲ್ಲಿಕೆ ಮಾಡಿದ್ದವು. ಸರಿಯಾದ ದಾಖಲೆ ಸಲ್ಲಿಕೆ ಮಾಡದಿರುವ ಹಿನ್ನೆಲೆಯಲ್ಲಿ 61 ಶಾಲೆಗಳಿಗೆ ಮಾನ್ಯತೆ ನವೀಕರಣ ಮಾಡಿಲ್ಲ. ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶ ಎಂದರೆ ಅರ್ಜಿ ಸಲ್ಲಿಕೆ ಮಾಡಿದ ಶಾಲೆಗಳು ಯಾವುದೇ ಹೊಸ ಶಾಲೆಗಳಲ್ಲಿ ಹಲವು ವರ್ಷದಿಂದ ಕಾರ್ಯ ನಿರ್ವಹಿಸುತ್ತಿರುವ ಶಾಲೆಗಳಾಗಿವೆ. ಆದರೂ ಈ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಸರಿಯಾದ ದಾಖಲೆಗಳಿಲ್ಲವಾಗಿದೆ.
---ಬಾಕ್ಸ್---
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮತ್ತಷ್ಟು ಶಾಲೆ ಅನಧಿಕೃತ?ಸದ್ಯ ಇನ್ನೂ ಸರ್ಕಾರ ಕಳೆದ ಅಂದರೆ. 2025-26ನೇ ಸಾಲಿನ ಖಾಸಗಿ ಮತ್ತು ಅನುದಾನಿತ ಶಾಲೆಗಳ ಮಾನ್ಯತೆ ನವೀಕರಣಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಮೇ 30ರ ವರೆಗೆ ಅವಕಾಶ ನೀಡಿದೆ. ಬಳಿಕ 2026-27ನೇ ಸಾಲಿನ ಮಾನ್ಯತೆ ನವೀಕರಣಕ್ಕೆ ಅರ್ಜಿ ಆಹ್ವಾನಿಸಲಿದೆ. ಮಾನ್ಯತೆ ಪಡೆಯಲು ಅರ್ಹತೆ ಇಲ್ಲದ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
----ಬಾಕ್ಸ್----ಮಾನ್ಯತೆ ಸಿಕ್ಕ ಶಾಲೆಗಳ ಪಟ್ಟಿಚಿಕ್ಕಮಗಳೂರು ನಗರದಲ್ಲಿರುವ ಶ್ರೀ ಆದಿಚುಂಚನಗಿರಿ ಹೈಸ್ಕೂಲ್, ಚಿಕ್ಕಮಗಳೂರಿನ ರೋಸ್ ಬಡ್ಸ್ ಶಾಲೆ, ಶೃಂಗೇರಿಯ ಜಯಭಾರತಿ ವಿದ್ಯಾಲಯ, ಚಿಕ್ಕಮಗಳೂರಿನ ಎಚ್‌ಪಿಎಸ್ ಅಂಡ್ ಎಚ್‌ಎಸ್ ಯುನಿಟೆಡ್, ಚಿಕ್ಕಮಗಳೂರಿನ ಸಂಜೀವಿನಿ ವಿದ್ಯಾಸಂಸ್ಥೆ, ಚಿಕ್ಕಮಗಳೂರಿನ ಪೂರ್ಣಪ್ರಜ್ಞಾ, ಆಲ್ದೂರಿನ ಸುಶಿಕ್ಷಿತ ಸ್ಕೂಲ್‌ಗೆ 1ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ ವರೆಗೆ ಮಾನ್ಯತೆ ನವೀಕರಣ ಮಾಡಲಾಗಿದೆ. ಚಿಕ್ಕಮಗಳೂರಿನ ಸಾಯಿ ಎಕ್ಸ್‌ಪರ್ಟ್ ಪಬ್ಲಿಕ್ ಸ್ಕೂಲ್ (1 ರಿಂದ 8 ನೇ ತರಗತಿ ವರೆಗೆ) , ತರೀಕೆರೆಯ ಶ್ರೀಗುರುಕುಟೀರ ಪ್ರೈಮರಿ ಸ್ಕೂಲ್ (5ನೇ ತರಗತಿ ವರೆಗೆ), ಕಡೂರಿನ ಪ್ರೇಮಜ್ಯೋತಿ ಹೈಸ್ಕೂಲ್ (8 ರಿಂದ 10ನೇ ತರಗತಿ) ಹಾಗೂ ಕಡೂರಿನ ಪ್ರೇಮಜ್ಯೋತಿ ಕಾನ್ವೆಂಟ್ (7ನೇ ತರಗತಿ ವರೆಗೆ) ಮಾನ್ಯತೆ ನವೀಕರಣ ಮಾಡಲಾಗಿದೆ.
---ಕೋಟ್---ಖಾಸಗಿ ಶಾಲೆಗೆ ಮಾನ್ಯತೆ ನೀಡಲು ಸಾಕಷ್ಟು ಮಾನದಂಡಗಳಿವೆ. ಆ ಮಾನದಂಡ ಅನುಸರಿಸುವ ಖಾಸಗಿ ಶಿಕ್ಷಣ ಸಂಸ್ಥೆಗೆ ಮಾತ್ರ ಮಾನ್ಯತೆ ನವೀಕರಣ ನೀಡಲಾಗುವುದು. ಇಲ್ಲವಾದರೆ, ಮಾನ್ಯತೆ ನೀಡುವುದಿಲ್ಲ.
- ತಿಮ್ಮರಾಜು, ಡಿಡಿಪಿಐ, ಚಿಕ್ಕಮಗಳೂರು