ಕುದೂರು: ಅತ್ಯಂತ ಕಡಿಮೆ ಅವಧಿಯಲ್ಲಿ ಅಧ್ಯಕ್ಷೆಯಾಗಿದ್ದೆ. ನನಗೆ ಸಿಕ್ಕಿದ್ದು ಕೇವಲ ಎರಡು ತಿಂಗಳು ಮಾತ್ರ ಇಷ್ಟು ಅವಧಿಯಲ್ಲಿ ಹೆಚ್ಚು ಕೆಲಸ ಮಾಡುವ ಪ್ರಯತ್ನ ಮಾಡಿದೆ. ಆದರೂ ಮನಸು ಸಮಾಧಾನದಿಂದಿಲ್ಲ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸಂಧ್ಯಲಕ್ಷ್ಮಣ್ ವಿಷಾದಿಸಿದರು.
ಕುದೂರು ಗ್ರಾಪಂನಲ್ಲಿ ಏರ್ಪಡಿಸಿದ್ದ ಸದಸ್ಯರ ಕೊನೆಯ ಸಭೆಯಲ್ಲಿ ಅವರು ಮಾತನಾಡಿದರು. ಉಪಾಧ್ಯಕ್ಷೆ ರಮ್ಯ ಜ್ಯೋತಿ ಮಾತನಾಡಿ, ಉಪಾಧ್ಯಕ್ಷೆಯಾಗಿ ಮತ್ತು ಪ್ರಭಾರಿ ಅಧ್ತಕ್ಷೆಯಾಗಿ ಕಾರ್ಯನಿರ್ವಹಿಸಿದೆ. ನಮ್ಮ ಕನಸುಗಳಿಗೆ ನಮ್ಮ ಕೆಲಸಗಳ ವೇಗಕ್ಕೆ ಅವಕಾಶ ಸಿಗದಂತಾಯಿತು. ಇರುವುದರಲ್ಲೇ ಶಕ್ತಿಮೀರಿ ಕೆಲಸ ಮಾಡಿದ್ದೇನೆ ಎಂದರು.ಗ್ರಾಪಂ ಸದಸ್ಯೆ ಲತಾಗಂಗಯ್ಯ ಮಾತನಾಡಿ, ಉತ್ತಮ ಕೆಲಸ ಮಾಡಬೇಕೆಂದು ರಾಜಕಾರಣಕ್ಕೆ ಬಂದೆ. ಸಿಸಿ ಕ್ಯಾಮೆರಾ, ಕನ್ನಡ ನಾಮಫಲಕ, ಬೀದಿದೀಪಗಳಿಗೆ ಸೋಲಾರ್ ಅಳವಡಿಕೆ, ಸುಸಜ್ಜಿತ ಸ್ಮಶಾನ, ಹೀಗೆ ಹಲವಾರು ವಿಷಯಗಳನ್ನು ಪಂಚಾಯ್ತಿ ಸಭೆಯಲ್ಲಿ ಮಂಡಿಸಿದರೂ ಅದಕ್ಕೆ ಪ್ರೋತ್ಸಾಹ ಸಿಗದೆ ಅವುಗಳೆಲ್ಲವೂ ಕನಸಾಗಿಯೇ ಉಳಿಯಿತು ಎಂದು ವಿಷಾದಿಸಿದರು.
ಸದಸ್ಯರಾದ ರೇಖಾ, ಸದಸ್ಯ ಕೆ.ಬಿ.ಬಾಲಾಜ್ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರನ್ನು ಪಂಚಾಯ್ತಿ ಅಧಿಕಾರಿ ವರ್ಗದವರು ಸನ್ಮಾನಿಸಿದರು.8ಕೆಆರ್ ಎಂಎನ್ 3.ಜೆಪಿಜಿ
ಕುದೂರು ಗ್ರಾಮ ಪಂಚಾಯ್ತಿ ಸದಸ್ಯರ ಅವಧಿ ಮುಗಿದ ಕಾರಣ ಅವರುಗಳನ್ನು ಪಂಚಾಯ್ತಿ ಅಧಿಕಾರಿ ವರ್ಗದವರು ಸನ್ಮಾನಿಸಿದರು.