ಮೂಡಿಗೆರೆಮಲೆನಾಡಿನ ವಿಭಿನ್ನ ಹಾಗೂ ವಿಶಿಷ್ಟ ಆಚರಣೆಗಳು, ಆಹಾರ ಪದ್ಧತಿ, ಜೀವನ ಶೈಲಿ, ಸಂಸ್ಕೃತಿ ಮತ್ತು ಜಾನಪದ ಶೈಲಿ ಗಳನ್ನು ಮುಂದಿನ ತಲೆಮಾರುಗಳಿಗೆ ತಲುಪಿಸಿ ಉಳಿಸುವ ಅವಶ್ಯಕತೆ ಇದೆ ಎಂದು ಮಾಜಿ ಸಚಿವೆ ಡಾ.ಮೋಟಮ್ಮ ಹೇಳಿದರು.

ಕನ್ನಡಪ್ರಭ ವಾರ್ತೆ ಮೂಡಿಗೆರೆ

ಮಲೆನಾಡಿನ ವಿಭಿನ್ನ ಹಾಗೂ ವಿಶಿಷ್ಟ ಆಚರಣೆಗಳು, ಆಹಾರ ಪದ್ಧತಿ, ಜೀವನ ಶೈಲಿ, ಸಂಸ್ಕೃತಿ ಮತ್ತು ಜಾನಪದ ಶೈಲಿ ಗಳನ್ನು ಮುಂದಿನ ತಲೆಮಾರುಗಳಿಗೆ ತಲುಪಿಸಿ ಉಳಿಸುವ ಅವಶ್ಯಕತೆ ಇದೆ ಎಂದು ಮಾಜಿ ಸಚಿವೆ ಡಾ.ಮೋಟಮ್ಮ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಆಧುನಿಕ ಜೀವನ ಶೈಲಿಯ ಪರಿಣಾಮ ಜನರ ಆಹಾರ ಪದ್ಧತಿ ಮತ್ತು ಜೀವನದ ರೀತಿ ನೀತಿಗಳು ಬಹಳ ಮಟ್ಟಿಗೆ ಬದಲಾಗಿವೆ ಎಂದು ವಿಷಾದಿಸಿದರು. ಹಳೆ ಕಾಲದ ಕಳಲೆ, ಏಡಿ ಮುಂತಾದ ಆರೋಗ್ಯಕರ ಆಹಾರ ಪದ್ಧತಿಗಳ ಬದಲಾಗಿ ಇಂದಿನ ಯುವಜನತೆ ಪಿಜ್ಜಾ, ಬರ್ಗರ್ ಮುಂತಾದ ಆಧುನಿಕ ಆಹಾರಗಳಿಗೆ ಹೆಚ್ಚು ಒಲವು ತೋರಿಸುತ್ತಿದ್ದು, ಇದರಿಂದ ಆರೋಗ್ಯದ ಮೇಲೆ ದುಷ್ಪಾರಿಣಾಮ ಉಂಟಾಗುತ್ತಿದೆ ಎಂದರು.

ಹಿರಿಯರು ಅನುಸರಿಸುತ್ತಿದ್ದ ಆರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನ ಶೈಲಿಯನ್ನು ಇಂದಿನ ತಲೆಮಾರು ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸಲು ಏ,3 ರ ಶುಕ್ರವಾರ ಮೂಡಿಗೆರೆ ಅಡ್ಯಾಂತಾಯ ರಂಗಮಂದಿರದಲ್ಲಿ “ಮಲೆನಾಡು ಮಹಿಳಾ ಸುಗ್ಗಿ ಉತ್ಸವ-ಹಿರಿಯರ ಜೀವನೋತ್ಸವ ಸಂಭ್ರಮ” ಎಂಬ ವಿಶಿಷ್ಟ ಮತ್ತು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಧ್ಯಕ್ಷೆ ನಿರ್ಮಲಾ ಮಂಚೇಗೌಡ ಮಾತನಾಡಿ, ಹಿರಿಯರಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ಆದರ್ಶ ಹಿರಿಯ ದಂಪತಿ ಸ್ಪರ್ಧೆ, ಆಟೋಟ ಸ್ಪರ್ಧೆ ಹಾಗೂ ಹಿರಿಯರ ಪ್ರತಿಭೆ ಗುರುತಿಸುವ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಕಾರ್ಯಕ್ರಮಕ್ಕೆ ಹಾಸ್ಯ ಕಲಾವಿದರಾದ ಗೋಪಾಲ್, ಎಚ್. ಪದ್ಮಶ್ರೀ ಪುರಸ್ಕೃತೆ ಸುಶೀಲಮ್ಮ. ಸಮೃದ್ಧಿ ಹೀಲಿಂಗ್ ಹಾಗೂ ಔಷಧ ರಹಿತ ಚಿಕಿತ್ಸಾ ಸಂಸ್ಥೆ ಸಂಸ್ಥಾಪಕ ಪೂರ್ವಿ ಜಯರಾಜ್. ರೂಪದರ್ಶಿ ರೇಷ್ಮಾ ಇತರ ಗಣ್ಯರು ಅಗಮಿಸುತ್ತಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮನ್ನು ಯಶಸ್ವಿಗೊಳಿಸಬೇಕು ಎಂದರು.

ಈ ವೇಳೆ ಸಂಚಾಲಕಿ ಅಶ್ವಿನಿ ಸಂತೋಷ್ ಉಪಸ್ಥಿತರಿದ್ದರು.

ಫೋಟೋ: ಮೋಟಮ್ಮ ಫೋಟೋ ಬಳಸುವುದು