ವರದಿ ಹಿಡಿದು ಅಲ್ಲಾಡಿಸುತ್ತಿದ್ದೀರಾ

| Published : Feb 25 2025, 12:46 AM IST

ಸಾರಾಂಶ

ನ್ನಗಿರಿಯ ಕಾಂಗ್ರೆಸ್‌ ಶಾಸಕರು ಜಾತಿ ಗಣತಿಗೆ ನಮ್ಮ ಮನೆಗೆ ಬಂದಿಲ್ಲ ಎನ್ನುತ್ತಾರೆ. ವರದಿ ಅವೈಜ್ಞಾನಿಕವಾಗಿದೆ ಎಂಬ ಬಗ್ಗೆ ಹಲವು ಮಂದಿಗೆ ಅನುಮಾನ ಇದೆ.

ಕನ್ನಡಪ್ರಭ ವಾರ್ತೆ ಮೈಸೂರುಹಿಂದುಳಿದ ವರ್ಗಗಳ ಆಯೋಗದ ವರದಿ ಜಾರಿಗೆ ಕುಮಾರಸ್ವಾಮಿ ಬಿಡಲಿಲ್ಲ ಎಂದು ಅಪಪ್ರಚಾರ ಮಾಡಿದ್ದ ಸಿದ್ದರಾಮಯ್ಯನವರು ಈಗ ವರದಿ ಹಿಡಿದುಕೊಂಡು ಅಳ್ಳಾಡಿಸುತ್ತಿದ್ದೀರಾ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಟಾಂಗ್‌ ನೀಡಿದರು.ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಟ್ಟರಂಗಶೆಟ್ಟಿ ವರದಿ ಬಗ್ಗೆ ಕೇಳಲು ಹೋದಾಗ ಕುಮಾರಸ್ವಾಮಿ ಗದರಿಸಿ ಕಳುಹಿಸಿದರು ಎಂದು ಊರೆಲ್ಲಾ ಅಪಪ್ರಚಾರ ಮಾಡಿದ ಸಿದ್ದರಾಮಯ್ಯನವರೇ ಈಗ ವರದಿ ಜಾರಿ ಮಾಡಬೇಡಿ ಎಂದು ಯಾರು ಹಿಡಿದುಕೊಂಡಿದ್ದಾರೆ ನಿಮ್ಮನ್ನು? ನೀವೇನು ವರದಿ ಹಿಡಿದುಕೊಂಡು ಅಳ್ಳಾಡಿಸುತ್ತಿದ್ದೀರಾ ಎಂದು ಖಾರವಾಗಿ ಟೀಕಿಸಿದರು.ಚನ್ನಗಿರಿಯ ಕಾಂಗ್ರೆಸ್‌ ಶಾಸಕರು ಜಾತಿ ಗಣತಿಗೆ ನಮ್ಮ ಮನೆಗೆ ಬಂದಿಲ್ಲ ಎನ್ನುತ್ತಾರೆ. ವರದಿ ಅವೈಜ್ಞಾನಿಕವಾಗಿದೆ ಎಂಬ ಬಗ್ಗೆ ಹಲವು ಮಂದಿಗೆ ಅನುಮಾನ ಇದೆ. ಇದಕ್ಕಾಗಿ 150 ಕೋಟಿ ಖರ್ಚು ಮಾಡಿದ್ದಾರೆ? ವರದಿಯ ಅಂಶಗಳು ಮಾಧ್ಯಮಗಳಲ್ಲಿ ಸೋರಿಕೆ ಮಾಡಿದ್ದು ಯಾರು? ಎಂದು ಅವರು ಪ್ರಶ್ನಿಸಿದರು.ಬೆಂಗಳೂರಿನಲ್ಲಿ ಮೆಟ್ರೋ ದರ ಹೆಚ್ಚಿಸಿರುವುದು ಕೇಂದ್ರ ಸರ್ಕಾರ ಎಂದು ಗೂಬೆ ಕೂರಿಸಲಾಗುತ್ತಿದೆ. ಇಡೀ ದೇಶದ ಇತರ ನಗರಗಳ ಮೆಟ್ರೋ ದರ ಹೆಚ್ಚಿಸದ ಕೇಂದ್ರ ಸರ್ಕಾರ, ಬೆಂಗಳೂರಿನಲ್ಲಿ ಮಾತ್ರ ಏಕೆ ಹೆಚ್ಚಿಸುತ್ತದೆ. ದರ ಹೆಚ್ಚಳಕ್ಕೆ ಮನವಿ ಮಾಡಿದ್ದು ಯಾರು? ರಾಜ್ಯದಲ್ಲಿ ಹಾಲು, ನೀರು, ಮದ್ಯ, ನೊಂದಣಿ ಶುಲ್ಕ ಹೀಗೆ ದರ ಹೆಚ್ಚಳ ಮಾಡುತ್ತಿರುವುದು ಯಾರು ಎಂದು ಪ್ರಶ್ನಿಸಿದರು.ನಿಮ್ಮ ಅವಧಿಯಲ್ಲಿ ಎಷ್ಟು ಬಾರಿ ಮದ್ಯದ ದರ ಹೆಚ್ಚಿಸಿದ್ದೀರಿ? ಕೆಪಿಟಿಸಿಎಲ್‌ ಗೆ ನಾವು ಹಣ ತುಂಬದ ಹಿನ್ನೆಲೆಯಲ್ಲಿ ಗ್ರಾಹಕರಿಂದಲೇ ಮುಂಗಡ ವಸೂಲು ಮಾಡುವುದಾಗಿ ಎಸ್ಕಾಂಗಳು ಹೇಳುತ್ತಿವೆ. ವಿದ್ಯುತ್‌ ಒಂದರಿಂದಲೇ 40 ಸಾವಿರ ಕೋಟಿ ಸಾಲ ಮಾಡಿದ್ದೀರಿ. ನೀವು ಕೇಂದ್ರದ ಬಗ್ಗೆ ಮಾತನಾಡುತ್ತೀರಾ ಎಂದು ಟೀಕಿಸಿದರು.ನೀರಾವರಿ ಕಾರ್ಯಕ್ರಮ ಇಲ್ಲ. ಕುಡಿಯುವ ನೀರಿನ ಸಮಸ್ಯೆ ಎದುರಿಸಲಾಗುತ್ತಿದೆ. ಈಗ ಇ ಖಾತೆ, ಬಿ ಖಾತೆ ಮಾಡುವಂತೆ ಸೂಚಿಸಿದ್ದೀರಿ? ಇಷ್ಟು ವರ್ಷ ಇಲ್ಲದ್ದು ಈಗ ಯಾಕೆ ಅಕ್ರಮ, ಸಕ್ರಮ ತಂದರು. ಖಜಾನೆಯಲ್ಲಿ ದುಡ್ಡು ಇಲ್ಲವಲ್ಲ ಅದಕ್ಕೆ ಮಾಡುತ್ತಿದ್ದಾರಾ? ಏಕೆ ತರಾತುರಿಯಲ್ಲಿ ಮಾಡುವುದು. ಇದನ್ನು ಇಲ್ಲಿನ ಶಾಸಕರೊಬ್ಬರು ಸಮರ್ಥಿಸಿಕೊಂಡಿದ್ದಾರೆ. ಬಹುಶಃ ಅವರಿಗೆ ವೈಯುಕ್ತಿಕವಾಗಿ ಕೆಲಸ ಆಗಿರಬೇಕು.ನಾನು ಮುಖ್ಯಮಂತ್ರಿ ಆಗಿದ್ದಾಗ ರೈತರ ಸಾಲ ಮನ್ನಾ ಮಾಡಿದೆ. ಸಾಲ ಮನ್ನಾ ಮಾಡಿದ್ದೇವೆ ದಿಡ್ಡು ಕೊಡಿ ಎಂದು ಕೇಂದ್ರದ ಮುಂದೆ ಹೋಗಿದ್ದೆನ? ನಿಮ್ಮ ಹಾಗೆ ಎಲ್ಲಾ ದರ ಹೆಚ್ಚಿಸಿ 2 ಸಾವಿರ ನೀಡುವುದಾದರೆ, ನಾನು 10 ಸಾವಿರ ನೀಡುತ್ತೇನೆ ಎಂದರು. ಅಮಾಯಕರು ಬಲಿಲೋಕಾಯುಕ್ತ ವರದಿಯನ್ನು ತಮಗೆ ಇಷ್ಟ ಬಂದ ಹಾಗೆ ಬರೆಸಿಕೊಂಡಿದ್ದಾರೆ. ಲೂಟಿ ಹೊಡೆಯುವವರು ಬಲಿ ಆಗುವುದಿಲ್ಲ. ಅಮಾಯಕರು ಬಲಿ ಆಗುತ್ತಾರೆ. ನಾನು ಜಮೀನು ಒತ್ತುವರಿ ಮಾಡಿಕೊಂಡಿದ್ದೇನೆ ಎಂದು ಹೇಳಿ 45 ಮಂದಿ ಎಸ್.ಐ.ಟಿ ಅಧಿಕಾರಿಗಳನ್ನು ಕಳುಹಿಸಿದ್ದಾರೆ. ಒತ್ತುವರಿ ಆಗಿರುವ ಬಗ್ಗೆ ಯಾವುದೇ ಮೂಲ ದಾಖಲೆಗಳು ಇಲ್ಲ ಎಂದಿದ್ದ ಸರ್ಕಾರ, ಈಗ ಯಾರನ್ನೂ ಕರೆದುಕೊಂಡು ಬರಲು ಮುಂದಾಗಿದೆ. ಇದರಿಂದ ನನ್ನನ್ನು ಎದುರಿಸಲು ಸಾಧ್ಯವೇ? ಎಂದು ಅವರು ಪ್ರಶ್ನಿಸಿದರು. ಯಾರ ರಕ್ಷಣೆ ಮಾಡುತ್ತಿದೆಈ ಸರ್ಕಾರ ಯಾರಿಗೆ ರಕ್ಷಣೆ ಕೊಡುತ್ತಿದೆ ಗೊತ್ತಿಲ್ಲ. ನೀವು ಯಾವ ಸಂದೇಶ ಕೊಡುತ್ತಿದ್ದೀರಿ ಹೇಳಿ? ಈಗ ಪೊಲೀಸರ ವಾಹನ ಮತ್ತು ಠಾಣೆ ಮೇಲೆ ದಾಳಿ ನಡೆಸಿದ್ದಾರೆ, ಮುಂದೆ ಪೊಲೀಸರ ಮನೆಗೆ ನುಗ್ಗಿ ಹೊಡೆಯುತ್ತಾರೆ ಎಚ್ಚರ ಎಂದರು.ಕರ್ನಾಟಕ ಸರ್ವಜನಾಂಗದ ಶಾಂತಿಯ ತೋಟವಾಗಬೇಕು ನಿಜ. ಆದರೆ ಎಷ್ಟು ದಿನ ಸಹಿಸಿಕೊಳ್ಳಬೇಕು. ಪೊಲೀಸ್ ವಾಹನದ ಮೇಲೆ ಕಲ್ಲು ತೂರಿದವರ ಬಲಿ ಹಾಕಬೇಕು. ಕಾನುನು ಬಾಹಿರವಾಗಿ ನಡೆದುಕೊಂಡವರ ಮೇಲೆ ಕ್ರಮ ಜರುಗಿಸಬೇಕು. ಗೃಹ ಸಚಿವರಿಗೆ ವೈರಾಗ್ಯ ಬಂದಹಾಗೆ ಇದೆ. ರಾಜೀನಾಮೆಯ ಮಾತನಾಡುತ್ತಿದ್ದಾರೆ. ಪ್ರತಿನಿತ್ಯ ಸಚಿವರ ಹೇಳಿಕೆಗೆ ನಿಯಂತ್ರಣವೇ ಇಲ್ಲ. ಸಚಿವ ಮಹದೇವಪ್ಪ ಅವರು ಸಿದ್ದರಾಮಯ್ಯ ಆಡಳಿತ ದಾಖಲೆ ಎಂದು ಹೇಳುತ್ತಾರೆ. ಎಷ್ಟು ವರ್ಷ ರಾಜ್ಯ ಆಳ್ವಿಕೆ ನಡೆಸಿದೆ ಎಂಬುದು ಮುಖ್ಯವಲ್ಲ, ಜನರಿಗೆ ಏನು ಕೊಟ್ಟಿರಿ ಎಂಬುದು ಹೇಳಿ ಎಂದು ಪ್ರಶ್ನಿಸಿದರು.ಸಂವಿಧಾನ ರಕ್ಷಕರು ಎನ್ನುವವರು ಚುನಾವಣೆಯನ್ನೇ ನಡೆಸುತ್ತಿಲ್ಲ. ಕೆಪಿಎಸ್ಸಿ ಏನಾಯಿತು ಒಬ್ಬರಿಗಾಗಿ ಎಷ್ಟು ಮಂದಿ ಬೀದಿಗೆ ತಂದಿದ್ದೀರಿ? ಬೇವಿನ ಮರ ನೆಟ್ಟು ಮಾವು ಕೇಳಿದರೆ ಸಾಧ್ಯವೇ? ಕೆಪಿಎಸ್ಸಿ ಮೂಲಕ ಎಷ್ಟು ನೇಮಕಾತಿ ನಡೆದಿದೆ. ನಿಮ್ಮ ಸದಸ್ಯರು ಎಂಥವರು ಎಂದರು.ಮೈಸೂರಿನಲ್ಲಿ ನಮ್ಮ ನಾಯಕರು ಎಂದರೆ ನಮ್ಮ ಕಾರ್ಯಕರ್ತರು. ಇಲ್ಲಿ ನನ್ನ ಜತೆ ಕುಳಿತಿದ್ದಾರಲ್ಲಾ ಅವರು ನಮ್ಮ ನಾಯಕರು. ಫ್ರೆಂಡ್ಲಿ ಫೈಟ್ ಗೂ ಇತಿಮಿತಿ ಇದೆ. ಗಂಡ ಹೆಂಡತಿ ಜಗಳ ಎಂದು ಹೇಳಿದ್ದು ನಿಜ. ಆದರೆ ಈಗ ಗಂಡ ಹೆಂಡತಿ ಜಗಳ ಎಲ್ಲಿ ಹೋಗಿ ಮುಟ್ಟಿತ್ತಿದೆ ಎಂಬುದನ್ನು ಮಾಧ್ಯಮಗಳಲ್ಲಿ ನೋಡುತ್ತಿಲ್ಲವೇ ಎಂದು ಅವರು ಪ್ರಶ್ನಿಸಿದರು.-------------------eom/mys/dnm/