ಶೋಷಿತರ ಪರ ಕಲಸ ಮಾಡಿದಕ್ಕೆ ಆತ್ಮತೃಪ್ತಿ ಇದೆ

| Published : May 03 2024, 01:02 AM IST

ಸಾರಾಂಶ

ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಒಂದು ಪುಣ್ಯದ ಕೆಲಸವಾಗಿದೆ. ಶೋಷಿತ ಸಮುದಾಯಗಳಿಗೆ ಸರ್ಕಾರ ಸಲವತ್ತು ತಲುಪಿಸಿದ ಅತ್ಮತೃಪ್ತಿ ಸಿಗುತ್ತದೆ ಎಂದು ನಿವೃತ್ತ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಒಂದು ಪುಣ್ಯದ ಕೆಲಸವಾಗಿದೆ. ಶೋಷಿತ ಸಮುದಾಯಗಳಿಗೆ ಸರ್ಕಾರ ಸಲವತ್ತು ತಲುಪಿಸಿದ ಅತ್ಮತೃಪ್ತಿ ಸಿಗುತ್ತದೆ ಎಂದು ನಿವೃತ್ತ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚಿಕ್ಕಬಸವಯ್ಯ ತಿಳಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಯೋನಿವೃತ್ತಿ ಹೊಂದಿದ ಚಿಕ್ಕಬಸವಯ್ಯ ಅವರಿಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಯೋಜನೆಮಾಡಿದ್ದ ಬೀಳ್ಕೊಡುಗಡೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅಂಬೇಡ್ಕರ್‌ ಸಂವಿಧಾನ ರಚನೆ ಮಾಡುವ ಜೊತೆಗೆ ದೇಶದ ಸರ್ವಾಂಗೀಣ ಅಭಿವೃದ್ದಿಯನ್ನು ಬಯಸಿ, ಸರ್ಕಾರದ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಬೇಕೆಂಬ ಆಶಯವನ್ನು ಹೊಂದಿದ್ದರು. ಇದರ ಫಲವಾಗಿ ಸಮಾಜ ಕಲ್ಯಾಣ ಮೂಲಕ ಶೋಷಿತ ಸಮುದಾಯಗಳ ಏಳಿಗೆಗೆ ಅನೇಕ ಯೋಜನೆಗಳನ್ನು ಜಾರಿಯಾದವು. ಇಂಥ ಬಹಳಷ್ಟು ಯೋಜನೆಗಳನ್ನು ಶೋಷಿತ ಸಮುದಾಯಗಳಿಗೆ ತಲುಪಿಸಿದ ತೃಪ್ತಿ ಇದೆ. ಈ ಹಿಂದೆ ಇದ್ದ ಬಹಳಷ್ಟು ಯೋಜನೆಗಳು ಈಗ ಕಡಿತಗೊಂಡಿವೆ. ಆಗ ಇದ್ದ ಯೋಜನೆಗಳು ಹಾಗೂ ಸವಲತ್ತುಗಳು ಪರಿಪೂರ್ಣವಾಗಿ ಇಲಾಖೆಯ ಮುಖಾಂತರ ಅರ್ಹ ಫಲಾನುಭವಿಗಳಿಗೆ ತಲುಪಿಸಿದ ತೃಪ್ತಿ ಇದೆ ಎಂದರು. ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಿಕ್ಕಬಸವಯ್ಯ ಅವರ ಸೇವೆ ಅನನ್ಯ. ಇಲಾಖೆಯಲ್ಲಿ ಬಹಳ ಅನುಭವನ್ನು ಹೊಂದಿದ್ದ ಅವರಲ್ಲಿದ್ದ ಸಹನೆ ಹಾಗೂ ತಾಳ್ಮೆ ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದೆ. ಇತ್ತಿಚೆಗೆ ನಡೆದ ಸಂವಿಧಾನ ಜಾಗೃತಿ ಜಾಥಾದಲ್ಲಿ ಅವರು ನಿರ್ವಹಿಸಿದ ಕಾರ್ಯ ಯಶಸ್ಸು ಕಂಡಿತ್ತು. ಹೀಗಾಗಿ ನಮ್ಮ ಜಿಲ್ಲೆಯ ಪ್ರಥಮ ಸ್ಥಾನವನ್ನು ಪಡೆಯಲು ಸಾಧ್ಯವಾಯಿತು. ಇಂಥ ಅಧಿಕಾರಿಗಳು ಹಾಗೂ ನೌಕರರ ಶ್ರಮದ ಫಲ ಜಿಲ್ಲೆಗೆ ಕೀರ್ತಿ ಬಂದಿದೆ ಎಂದರು.

ಇತ್ತಿಚಿನ ದಿನಗಳಲ್ಲಿ ಬರ ಅವರಿಸಿದೆ. ನೀರಿಗಾಗಿ ಹಾಹಾಕಾರ ಉಂಟಾಗಿದೆ. ಹಾಸ್ಟೆಲ್‌ಗಳಿಗೆ ನೀರು ಕೇಳಿಕೊಂಡು ಬಂದರೆ ಅವರಿಗೆ ನಿಲಯ ಪಾಲಕರು ಸಹಾಯ ಮಾಡಿ ಎಂದು ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ಚಿಕ್ಕಬಸಯ್ಯ ಅವರನ್ನು ಇಲಾಖೆಯ ಪರವಾಗಿ ನೌಕರರರು ನೆನಪಿನ ಕಾಣಿಕೆ ನೀಡಿ, ಶಾಲುಹೊದಿಸಿ ಅಭಿನಂದಿಸಿ, ಅತ್ಮೀಯವಾಗಿ ಬಿಳ್ಕೋಟ್ಟರು. ದಲಿತಪರ ಸಂಘಟನೆಗಳ ಮುಖಂಡರು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪರಿಶಿಷ್ಟ ಪಂಗಡಗಳ ಇಲಾಖೆಯ ಉಪ ನಿರ್ದೇಶಕಿ ಮಂಜುಳಾ, ಪೌರಾಯುಕ್ತ ರಾಮದಾಸ್, ತಾಪಂ ಇಓ ಕೃಷ್ಣಪ್ಪ, ಸಹಾಯಕ ನಿರ್ದೇಶಕರಾದ ಗುಂಡ್ಲುಪೇಟೆಯ ಮೋಹನ್‌ಕುಮಾರ್, ಯಳಂದೂರು ರಾಜೇಶ್, ದಲಿತ ಸಂಘಟನೆಗಳ ಮುಖಂಡರಾದ ಬಸವನಪುರ ರಾಜಶೇಖರ್, ಅರಕಲವಾಡಿ ನಾಗೇಂದ್ರ, ಕೆ.ಎಂ. ನಾಗರಾಜು, ಸಿಎಂ ಶಿವಣ್ಣ, ಸಿಎಂ ಕೃಷ್ಣಮೂರ್ತಿ, ಬ್ಯಾಡಮೂಡ್ಲು ಬಸವಣ್ಣ, ಆಲೂರು ನಾಗೇಂದ್ರ, ಹಾಗೂ ಜಿಲ್ಲೆಯ ತಾಲೂಕು ವ್ಯಾಪ್ತಿಯ ನಿಲಯ ಪಾಲಕರು, ಅಧಿಕಾರಿಗಳು ಮತ್ತು ನೌಕರರರು ಇದ್ದರು.