ತರೀಕೆರೆರಾಜ್ಯಾದ್ಯಂತ ಕುರುಬರ ಸಂಘಟನೆ ಆಗಿದೆ ಎಂದು ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದ್ದಾರೆ.
- ತರೀಕೆರೆಯಲ್ಲಿ ಶ್ರೀ ಗುರು ರೇವಣಸಿದ್ದೇಶ್ವರಸ್ವಾಮಿ ಪ್ರಥಮ ವರ್ಷದ ನೂತನ ರಥೋತ್ಸವ
ಕನ್ನಡಪ್ರಭ ವಾರ್ತೆ, ತರೀಕೆರೆರಾಜ್ಯಾದ್ಯಂತ ಕುರುಬರ ಸಂಘಟನೆ ಆಗಿದೆ ಎಂದು ರಾಜ್ಯ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಹೇಳಿದ್ದಾರೆ.
ಬುಧವಾರ ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ, ಶ್ರೀ ಗುರು ರೇವಣಸಿದ್ದೇಶ್ವರ ಭಜನಾ ಮಂಡಳಿಯಿಂದ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆದ ಶ್ರೀ ಗುರು ರೇವಣಸಿದ್ದೇಶ್ವರಸ್ವಾಮಿ ಪ್ರಥಮ ವರ್ಷದ ನೂತನ ರಥೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುರುಬರ ಸಮಾಜ ರಾಜ್ಯದಲ್ಲಿ 3ನೇ ಅತಿ ದೊಡ್ಡ ಸಮಾಜ ರಾಜ್ಯಕ್ಕೆ ಮಾದರಿ. 1944ರಲ್ಲೇ ಕುರುಬರ ಹಾಸ್ಟೆಲ್ ಪ್ರಾರಂಭಿಸಲಾಗಿತ್ತು, ತರೀಕೆರೆ ರಾಜಕೀಯ ಮತ್ತು ಸಹಕಾರಿ ಕ್ಷೇತ್ರದಲ್ಲಿ ಮಹತ್ತರ ಸ್ಥಾನ ಪಡೆದಿದೆ. ರಾಜ್ಯದಲ್ಲಿ ಶ್ರೀ ಗುರು ರೇವಣ ಸಿದ್ದೇಶ್ವರ ಸ್ವಾಮಿಗೆ ನೂತನ ರಥ ನಿರ್ಮಾಣದ ಕೀರ್ತಿ ಶ್ರೀ ಗುರು ರೇವಣ ಸಿದ್ದೇಶ್ವರ ಕುರುಬರ ಸಮಾಜ ಅಧ್ಯಕ್ಷ ಟಿ.ಎಸ್.ರಮೇಶ್ ಅವರಿಗೆ ಸಲ್ಲುತ್ತದೆ. ಹೊಸದುರ್ಗದಲ್ಲಿ ಏಕಶಿಲಾ ಶ್ರೀ ಕನಕ ಮೂರ್ತಿ ಸಿದ್ದಪಡಿಸಲಾಗುತ್ತಿದ್ದು, ಕನಕ ಮೂರ್ತಿ ನಿರ್ಮಾಣಕ್ಕೆ ಸರ್ವರೂ ಸಹಕಾರ ನೀಡಬೇಕೆಂದು ಕೋರಿದರು. ಶಾಸಕ ಜಿ.ಎಚ್.ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿ ಮಕರ ಸಂಕ್ರಾಂತಿ ಪ್ರಯುಕ್ತ ಶ್ರೀ ಗುರು ರೇವಣ ಸಿದ್ದೇಶ್ವರಸ್ವಾಮಿ ಪೂಜಾ ಕಾರ್ಯಕ್ರಮ ನಡೆಯುತ್ತಿತ್ತು, ಇದೀಗ ಪ್ರಥಮ ವರ್ಷದ ದಿವ್ಯ ರಥೋತ್ಸವ ನಡೆಯುತ್ತಿರುವುದು ತರೀಕೆರೆ ಪಟ್ಟಣದ ವಿಶೇಷ. ಶ್ರೀ ಗುರು ರೇವಣಸಿದ್ದೇಶ್ವರಸ್ವಾಮಿ ರಥ ಅದ್ಭುತವಾಗಿದೆ ಎಂದು ಹೇಳಿದರು.ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ ಅಧ್ಯಕ್ಷ ಟಿ.ಎಸ್.ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅಕ್ಕಿ ನಿಂಗಪ್ಪ ಒಡೆಯರ್ ಮಠ ಸ್ಥಾಪನೆ ಮಾಡಿದರು. ನಂತರ 1944ರಲ್ಲಿ ಕುರುಬರ ಸಂಘ ಸ್ಥಾಪನೆಯಾಯಿತು, ಅಲ್ಲಿಂದ ಇಲ್ಲಿಯ ತನಕ ಧಾರ್ಮಿಕ ಕಾರ್ಯಕ್ರಮ ನಡೆಯುತ್ತ ಬಂದಿದೆ. ಅಕ್ಕಿ ನಿಂಗಪ್ಪ ಪವಾಡ ಪುರುಷರಾಗಿದ್ದರು, ಆವರು ಹಾಕಿ ಕೊಟ್ಟ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಇದೀಗ ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ದಿವ್ಯ ರಥ ನಿರ್ಮಾಣಕ್ಕೆ ಸಮುದಾಯದವರ ಆಶಯದಂತೆ ನಿರ್ಮಾಣವಾಗಿದೆ, ರಥ ನಿರ್ಮಾಣಕ್ಕೆ ಸರ್ವರೂ ಸಹಕರಿಸಿದ್ದಾರೆ, ಸರ್ವರಿಗೂ ಕೃತಜ್ಞತೆಗಳು ಎಂದು ಅವರು ಹೇಳಿದರು. ಹೊಸದುರ್ಗ ಕನಕ ಗುರು ಪೀಠ ಶಾಖಾಮಠ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ ದ್ವೇಷ ಅಸೂಯೆ ಬಿಡಬೇಕು. ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕು, ಹೊಸದುಗ್ರದಲ್ಲಿ ಏಕಶಿಲೆಯ ಕನಕ ಮೂರ್ತಿ ನಿರ್ಮಾಣವಾಗುತ್ತಿದ್ದು ಸರ್ವರೂ ಆರ್ಥಿಕ ಸಹಾಯ ನೀಡಬೇಕು ಎಂದು ಹೇಳಿದರು.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಎನ್.ಮಹೇಶ್, ಪುರಸಭಾ ಮಾಜಿ ಅಧ್ಯಕ್ಷ ಎಂ.ನರೇಂದ್ರ, ಅಮೆರಿಕಾ ಕುರುಬರ ಸಮಾಜ ಅಧ್ಯಕ್ಷ ಸತೀಶ್ ನಂಜಪ್ಪಮತ್ತಿತರರು ಮಾತನಾಡಿದರು.ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ ಉಪಾಧ್ಯಕ್ಷ ಟಿ.ವಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಟಿ.ಜಿ.ಹರೀಶ್ ಕುಮಾರ್, ಕಾರ್ಯದರ್ಶಿ ಟಿ.ಎಸ್.ಪ್ರಕಾಶ್, ಖಚಾಂಚಿ ಟಿ.ಎನ್.ಸೋಮಶೇಖರಯ್ಯ,ಶ್ರೀಧರ್, ಪದಾಧಿಕಾರಿಗಳು, ಸದಸ್ಯರು, ಕನಕ ಮಹಿಳಾ ಸಮಾಜದ ಅದ್ಯಕ್ಷ ಲಕ್ಷ್ಮೀವಿಶ್ವನಾಥ್, ಭಜನಾ ಮಂಡಳಿ ಅಧ್ಯಕ್ಷ ಕಿರಣ್ , ಪುರಸಭೆ ಉಪಾಧ್ಯಕ್ಷೆ ಗೀತಾ ಗಿರಿರಾಜ್, ಸದಸ್ಯರಾದ ಟಿ.ಜಿ.ಶಶಾಂಕ, ಚೇತನ್, ವಸಂತ ರಮೇಶ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ, ಟಿ.ಎಸ್.ಧರ್ಮರಾಜ್, ಡಿ.ವಿ. ಪದ್ಮರಾಜ್, ಎಂ.ರಂಗಪ್ಪ, ಕೃಷ್ಣಮೂರ್ತಿ, ಟಿ.ಸಿ.ದರ್ಶನ್, ಗ್ಯಾರಂಟಿ ಯೋಜನೆ ಅನುಷ್ಠಾನ ಉಸ್ತುವಾರಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಸಮೀವುಲ್ಲಾ ಷರೀಫ್ ಮತ್ತಿತರರು ಭಾಗವಹಿಸಿದ್ದರು.-
14ಕೆಟಿಆರ್.ಕೆ 2ಃತರೀಕೆರೆಯಲ್ಲಿ ನಡೆದ ಶ್ರೀ ಗುರು ರೇವಣಸಿದ್ದೇಶ್ವರಸ್ವಾಮಿ ಪ್ರಥಮ ವರ್ಷದ ನೂತನ ರಥೋತ್ಸವದಲ್ಲಿ ಹೊಸದುರ್ಗ ಕನಕ ಗುರು ಪೀಠ ಶಾಖಾಮಠ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕ ಜಿ.ಎಚ್.ಶ್ರೀನಿವಾಸ್, ಶ್ರೀ ಗುರು ರೇವಣಸಿದ್ದೇಶ್ವರ ಕುರುಬರ ಸಮಾಜ ಅಧ್ಯಕ್ಷ ಟಿ.ಎಸ್.ರಮೇಶ್ ಮತ್ತಿತರರು ಭಾಗವಹಿಸಿದ್ದರು.