ವೃಷಭಾವತಿ ಸಂಸ್ಕರಿಸಿದ ನೀರಿನಿಂದ ಅಪಾಯವಿಲ್ಲ: ಶಾಸಕ ವಿಶ್ವನಾಥ್

| Published : Mar 26 2025, 01:34 AM IST

ವೃಷಭಾವತಿ ಸಂಸ್ಕರಿಸಿದ ನೀರಿನಿಂದ ಅಪಾಯವಿಲ್ಲ: ಶಾಸಕ ವಿಶ್ವನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ವೃಷಭಾವತಿಯನ್ನು ನೇರವಾಗಿ ನೋಡಿದರೆ ಆತಂಕವಾಗುತ್ತದೆ. ಆದರೆ ನಮ್ಮ ಭಾಗಕ್ಕೆ ಬರುವುದು ಸಂಸ್ಕರಣೆ ಮಾಡುವ ನೀರು, ಕ್ಷೇತ್ರದ ಶಾಸಕರು ಕೆರೆ ತುಂಬಿಸುವ ಯೋಜನೆ ತಂದು ಕೆರೆಗೆ ನೀರು ಬಂದರೆ ಶಾಸಕರಿಗೆ ಏನು ಅನುಕೂಲವಿಲ್ಲ, ಅನುಕೂಲವಾಗುವುದು ಆ ಭಾಗದ ರೈತರು ಮತ್ತು ಜನರಿಗೆ ಮಾತ್ರ, ನಾನಂತು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ಜನರ ಒಳಿತಿನ ಯೋಜನೆಗೆ ಪಕ್ಷಾತೀತವಾಗಿ ಬೆಂಬಲಿಸುತ್ತೇನೆ ಎಂದರು.

ಕನ್ನಡಪ್ರಭ ವಾರ್ತೆ ದಾಬಸ್‍ಪೇಟೆ

ಸಿಂಗನಾಯಕನಹಳ್ಳಿ ಕೆರೆಗೆ ಎಚ್.ಎನ್ ವ್ಯಾಲಿ ಸಂಸ್ಕರಿಸಿದ ನೀರು ಬಂದು ಕೆರೆ ತುಂಬಿದೆ, ಮೀನುಗಳು, ಪಕ್ಷಿಗಳನ್ನು ಕಾಣುವ ಜೊತೆಗೆ ಬಾವಿಯಲ್ಲಿಯೂ ನೀರು ಕಾಣಬಹುದು, ಅಂತರ್ಜಲ ವೃದ್ಧಿಗೆ ಸಂಸ್ಕರಿಸಿದ ವೃಷಭಾವತಿ ನೀರನ್ನು ಸ್ವಾಗತಿಸುತ್ತೇನೆ, ವೃಷಭಾವತಿಯ ಸಂಸ್ಕರಿಸಿದ ನೀರು ವಿರೋಧಿಸುವವರು ನನ್ನೂರಿನ ಕೆರೆಯನ್ನು ನೋಡ ಬನ್ನಿ ಎಂದು ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ತಿಳಿಸಿದರು.

ಪಟ್ಟಣದಲ್ಲಿ ವೃಷಭಾವತಿ ಯೋಜನೆಯ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೆಲಮಂಗಲದಲ್ಲಿ ವೃಷಭಾವತಿ ಯೋಜನೆ ವಿರೋಧಿಸುವವರು ರಾಜಕೀಯಕ್ಕೆ ಮಾತನಾಡುತ್ತಿದ್ದಾರಾ ಅಥವಾ ಬೇರೆ ವಿಚಾರವಾ ಗೊತ್ತಿಲ್ಲ, ನಾನು ಅದರ ಬಗ್ಗೆ ಮಾತನಾಡಲ್ಲ, ಆದರೆ ದೇಶದಲ್ಲಿ ಯಾವ ಸ್ಥಳೀಯ ಕೆರೆಗೆ ಸಂಸ್ಕರಿಸಿದ ನೀರು ಸಂಗ್ರಹಣೆ ಆಗುತ್ತಿದೆ, ನೆಲಮಂಗಲದ ಕೆರೆಗಳಲ್ಲಿ ತುಂಬಿರುವ ಕಲುಷಿತ ನೀರು ನೇರವಾಗಿ ದಾಸನಪುರಕ್ಕೆ ಬರುತ್ತಿದೆ, ಈ ನೀರಿನ ಬಗ್ಗೆ ಮಾತನಾಡದವರು ಸಂಸ್ಕರಿಸಿ ಕೆರೆಗೆ ಬರುವ ನೀರಿನ ಬಗ್ಗೆ ಮಾತನಾಡಬಾರದು. ಯಾವ ಸರ್ಕಾರಗಳು ಜನರಿಗೆ ತೊಂದರೆ ಆಗುವ ಯೋಜನೆ ತರುವುದಿಲ್ಲ, ವ್ಯವಸ್ಥೆಯಲ್ಲಿ ಸಣ್ಣಪುಟ್ಟ ವ್ಯತ್ಯಾಸವಾಗುತ್ತದೆ, ಅದರ ಬದಲಾವಣೆ ನಮ್ಮ ಕೈನಲ್ಲಿ ಇರಲಿದೆ ಎಂದರು.

ಜನರಿಗೆ ಮಾತ್ರ ಅನುಕೂಲ: