ಸಾರಾಂಶ
ಸಾವರ್ಕರ್ ವಿಚಾರಗಳಿಗೆ ಸಾವಿಲ್ಲ:ಡಾ.ಜಿ.ಬಿ ಹರೀಶಸಾವರ್ಕರ್ ಸತ್ಯ ಹೇಳಿದರಿಂದ ಅವರ ವಿಚಾರ ಇಂದಿಗೂ ಉಳಿದಿವೆ ಎಂದು ಡಾ.ಜಿ.ಬಿ ಹರೀಶ ಹೇಳಿದರು.
ವಿಜಯಪುರ: ಸಾವರ್ಕರ್ ಸತ್ಯ ಹೇಳಿದರಿಂದ ಅವರ ವಿಚಾರ ಇಂದಿಗೂ ಉಳಿದಿವೆ ಎಂದು ಡಾ.ಜಿ.ಬಿ ಹರೀಶ ಹೇಳಿದರು.
ನಗರದ ಪಿಡಿಜೆ ಸಭಾಭವನದಲ್ಲಿ ನಡೆದ ಮಂಥನ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಸಂಯುಕ್ತಾಶ್ರಯದಲ್ಲಿ ಸಾವರ್ಕರ್ ಕುರಿತ ಆರೋಪಗಳು ಸತ್ಯವೋ .. ಮಿಥ್ಯವೋ ? ಎಂಬ ವಿಷಯ ಕುರಿತು ಅವರು ಮಾತನಾಡಿದರು.ಸ್ವಾತಂತ್ರ್ಯ ವೀರ ಸಾವರ್ಕರ್ ಹಿಂದು ಮಹಾಸಭಾದ ಜನಪ್ರಿಯ ನೇತಾರ. ಸಾವರ್ಕರ್ ಕಂಡು, ತನ್ನ ಪ್ರತಿಸ್ಪರ್ಧಿ ಆಗಬಹುದೆಂದು ಪಂಡಿತ ನೆಹರು ಗಾಂಧೀಜಿ ಹತ್ಯೆಯಲ್ಲಿ ಅವರ ಪಾತ್ರವಿದೆಯಂದು ಬಿಂಬಿಸಲಾಯಿತು. ಸಾವರ್ಕರ್ ಕ್ಷಮಾಪಣೆ ಪತ್ರ ಎನ್ನುವುದು ಜೈಲಿನಿಂದ ಹೊರಬರಲು ಸಾವರ್ಕರ್ ಹೂಡಿದ ತಂತ್ರ ಎಂದರು.
ಸಾವರ್ಕರ ಸಾಹಿತ್ಯ ಹತ್ತು ಸಂಪುಟಗಳಲ್ಲಿ ಮರಾಠಿ ಭಾಷೆಯಲ್ಲಿದೆ. ಪ್ರಯತ್ನಪಟ್ಟು ಈಗ ಸಂಪುಟ ಒಂದು ಮತ್ತು ಆರು ಸಿದ್ಧವಾಗಿದೆ ಇನ್ನು ಎಂಟು ಸಂಪುಟಗಳ ಪ್ರಕಾಶನ ಸದ್ಯದಲ್ಲೇ ಆಗಲಿದೆ. ಸಾವರ್ಕರ ಸಾಹಿತ್ಯ ಕನ್ನಡದ ಎಲ್ಲ ಜನರಿಗೂ ಮುಟ್ಟಬೇಕು ಎಂಬ ಆಶಯ ಸಾವರ್ಕರ ಸಾಹಿತ್ಯ ಸಂಘದ್ದು ಇದೆ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಸಮೃದ್ಧ ಸಾಹಿತ್ಯ ಪ್ರಕಟಣೆಯ ವೀರ ಸಾವರ್ಕರ್ ಸಂಪುಟ ೧ ಮತ್ತು ೬ ಹಾಗೂ ಸುಭಾಷ್ ಚಂದ್ರ ಬೋಸ್ ಜೀವನಾಧರಿತ ಕಾದಂಬರಿ ''''''''ಮಹಾಕಾಲ'''''''' ಪುಸ್ತಕಗಳು ಬಿಡುಗಡೆಗೊಳಿಸಲಾಯಿತು.
ಸಾನ್ನಿಧ್ಯ ಜ್ಞಾನ ಯೋಗ್ರಾಶ್ರಮದ ಬಸವಲಿಂಗ ಸ್ವಾಮಿಗಳು ವಹಿಸಿದ್ದರು.ವಿ.ಸಿ ನಾಗಠಾಣ, ಜಂಬುನಾಥ ಕಂಚ್ಯಾಣಿ, ಎ.ಡಿ ದೇಶಪಾಂಡೆ, ವಿನಾಯಕ ಗ್ರಾಮಪುರೋಹಿತ, ಬಸವರಾಜ ಕೌಲಗಿ, ಶಿವಾನಂದ ಕೇಲೂರ, ಸುರೇಶ ಗೆಜ್ಜಿ, ಶೀಲಾ ಸುರೇಶ ಬಿರಾದಾರ, ಸುಮಾ ಬೋಳರೆಡ್ಡಿ, ಸುಷ್ಮಾ ಶಿವಮಠ, ಉಜ್ವಲಾ ಸರ್ನಾಡಗೌಡ, ರವಿಶಂಕರ ಹೂಗಾರ, ರಾಜೇಂದ್ರ ಸಂಕಣ್ಣವರ, ಈರಣ್ಣ ಛಾಗಶೆಟ್ಟಿ ಮುಂತಾದವರು ಇದ್ದರು.