ಸಿ.ಟಿ. ರವಿ ತಪ್ಪಿಗೆ ಕ್ಷಮೆಯಿಲ್ಲ, ಸದಸ್ಯತ್ವ ರದ್ದಾಗಬೇಕು

| Published : Dec 21 2024, 01:16 AM IST

ಸಾರಾಂಶ

ಸಿ.ಟಿ. ರವಿ ಬಂಧನ ವಿರೋಧಿಸಿ ಬಿಜೆಪಿಯವರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವುದನ್ನು ನೋಡಿದರೆ ಬಿಜೆಪಿಯವರಿಗೆ ನಾಚಿಕೆ ಆಗಬೇಕು. ದೇಶಕ್ಕಾಗಿ ಹೋರಾಡಿ ಅರೆಸ್ಟ್‌ಆಗಿದ್ದಾರಾ? ಹೆಣ್ಣು ಮಗಳು ಯಾರೇ ಆಗಿದ್ದರೂ ಈ ರೀತಿ ಪದ ಬಳಸುವುದು ಸಮರ್ಥಿಸಿಕೊಳ್ಳುವುದಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಕುರಿತು ಅಶ್ಲೀಲ ಪದ ಬಳಸುವ ಮೂಲಕ ಸಿ.ಟಿ. ರವಿ ಇಡೀ ರಾಜ್ಯದ ಮಹಿಳೆಯರನ್ನು ಅವಮಾನಿಸಿದ್ದು, ಅವರ ಈ ವರ್ತನೆ ಕ್ಷಮಿಸುವಂಥದ್ದಲ್ಲ. ಕೂಡಲೇ ವಿಧಾನ ಪರಿಷತ್‌ಸಭಾಪತಿಗಳು ಅವರ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ರಾಜ್ಯಾಧ್ಯಕ್ಷ ಬಿ. ಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ.

ಸಿ.ಟಿ. ರವಿ ಬಂಧನ ವಿರೋಧಿಸಿ ಬಿಜೆಪಿಯವರು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿರುವುದನ್ನು ನೋಡಿದರೆ ಬಿಜೆಪಿಯವರಿಗೆ ನಾಚಿಕೆ ಆಗಬೇಕು. ದೇಶಕ್ಕಾಗಿ ಹೋರಾಡಿ ಅರೆಸ್ಟ್‌ಆಗಿದ್ದಾರಾ? ಹೆಣ್ಣು ಮಗಳು ಯಾರೇ ಆಗಿದ್ದರೂ ಈ ರೀತಿ ಪದ ಬಳಸುವುದು ಸಮರ್ಥಿಸಿಕೊಳ್ಳುವುದಿಲ್ಲ. ಬಿಜೆಪಿ ನಾಯಕರು ಮಹಿಳೆಯರಿಗೆ ಗೌರವ ನೀಡುವುದಿಲ್ಲ. ಇದು ಅವರ ಮನುಸ್ಮೃತಿ ಧೋರಣೆ ತೋರಿಸುತ್ತದೆ. ಆ ಧೋರಣೆ ಈಗ ಸಿ.ಟಿ. ರವಿ ಅವರಿಂದ ಹೊರಗೆ ಬಂದಿದೆ. ಅವರಿಗೆ ಮರ್ಯಾದೆ ಇದ್ದರೆ, ಕೂಡಲೇ ರಾಜೀನಾಮೆ ಕೊಡಬೇಕು. ಇಡೀ ಸದನದ ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.