ಸಾರಾಂಶ
ದೇಶದಲ್ಲಿ ದಸರಾ ಹಬ್ಬದ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿವೆ. ಹಬ್ಬದ ನಿಜವಾದ ಅರ್ಥ ಏನೆಂದರೆ, ದುಷ್ಟ ಶಕ್ತಿ ಹೋಗಬೇಕು. ಮನುಷ್ಯನ ಕೋಪ, ತಾಪ, ಆಸೆ ಗೆಲ್ಲಬೇಕು. ಮನುಷ್ಯನಿಗೆ ಶಾಂತಿ, ಸುಖ, ನೆಮ್ಮದಿ ಬೇಕು. ಅದೇ ದೃಷ್ಟಿಯಿಂದ ಇವೆಲ್ಲ ಆಚರಣೆಗಳಿವೆ.
ಧಾರವಾಡ:
ಸದ್ಯದ ಮಟ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರಕ್ಕೆ ಯಾವುದೇ ಭಯವಿಲ್ಲ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.ದಸರಾ ಹಬ್ಬದ ಹಿನ್ನೆಲೆಯಲ್ಲಿ ಬುಧವಾರ ಧಾರವಾಡಕ್ಕೆ ಆಗಮಿಸಿದ್ದ ಸ್ವಾಮೀಜಿ, ಸಂಕ್ರಮಣದ ವರೆಗೆ ಏನೂ ಹೇಳಲ್ಲ. ಆದರೆ, ಸದ್ಯ ಸರ್ಕಾರಕ್ಕೆ ಭಯವಿಲ್ಲ. ಉಳಿದಿದ್ದು ಸಂಕ್ರಾಂತಿ ನಂತರ ಸ್ಥಿತಿ-ಗತಿ ನೋಡಿ ಹೇಳುತ್ತೇನೆ ಎಂದ ಅವರು, ಬಯಲು ಸೀಮೆಯಲ್ಲಿ ಮಲೆನಾಡು ಮಳೆ ಎಂದು ಈ ಹಿಂದೆ ಹೇಳಿದ್ದು, ಅದೇ ರೀತಿ ಮಳೆಯೂ ಆಗುತ್ತಿದೆ ಎಂದರು.
ರಾಜ್ಯದಲ್ಲಿ ಜಾತಿ ಸಮೀಕ್ಷೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸ್ವಾಮೀಜಿ, ಜನರು ಬುದ್ಧಿವಂತರಿದ್ದಾರೆ. ಸಾಕಷ್ಟು ಜ್ಞಾನಿಗಳಿದ್ದಾರೆ. ಅವರಿಗೆ ಯಾವುದು ಬೇಕೋ ಅದನ್ನು ಮಾಡುತ್ತಾರೆ ಎಂದು ಹೇಳಿದರು.ದೇಶದಲ್ಲಿ ದಸರಾ ಹಬ್ಬದ ಹಿನ್ನೆಲೆ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿವೆ. ಹಬ್ಬದ ನಿಜವಾದ ಅರ್ಥ ಏನೆಂದರೆ, ದುಷ್ಟ ಶಕ್ತಿ ಹೋಗಬೇಕು. ಮನುಷ್ಯನ ಕೋಪ, ತಾಪ, ಆಸೆ ಗೆಲ್ಲಬೇಕು. ಮನುಷ್ಯನಿಗೆ ಶಾಂತಿ, ಸುಖ, ನೆಮ್ಮದಿ ಬೇಕು. ಅದೇ ದೃಷ್ಟಿಯಿಂದ ಇವೆಲ್ಲ ಆಚರಣೆಗಳಿವೆ. ಇದು ನಮ್ಮ ಪರಂಪರೆಯ ದೊಡ್ಡ ಸಂಕೇತ ಎಂದು ಸ್ವಾಮೀಜಿ ನುಡಿದರು.
ಈ ವೇಳೆ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸಿಮರದ ಇದ್ದರು.