ಸಾರಾಂಶ
ಹಾವೇರಿ: ಶಿಸ್ತು ಇಲ್ಲದ ಶಾಲೆ, ಕೆಲಸವಿಲ್ಲದ ಬಾಳ್ವೆ, ಮೌಲ್ಯವಿಲ್ಲದ ಶಿಕ್ಷಣ, ವಿನಯವಿಲ್ಲದ ವಿದ್ಯೆ, ದುಡಿಮೆ ಇಲ್ಲದ ಸಂಪತ್ತು, ತತ್ವವಿಲ್ಲದ ರಾಜಕೀಯಗಳು ಹೆಚ್ಚುತ್ತಿರುವ ಈ ದಿನಗಳಲ್ಲಿ ಮೌಲ್ಯಗಳ ಬಗ್ಗೆ ಚಿಂತನೆ ಅಗತ್ಯ ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ತಿಳಿಸಿದರು.ತಾಲೂಕಿನ ಕನಕಪುರದಲ್ಲಿ ಗ್ರಾಮದ ನೌಕರರ ಬಳಗ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ, ಸಾಧಕರ ಹಾಗೂ ನಿವೃತ್ತ ನೌಕರರ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಎಷ್ಟೇ ಸಿನಿಮಾ ನೋಡಿದರು ತಂದೆಗಿಂತ ದೊಡ್ಡ ಹೀರೋ ಸಿಗುವುದಿಲ್ಲ. ಎಷ್ಟೇ ದೇವಸ್ಥಾನ ಸುತ್ತಾಡಿದರೂ ತಾಯಿಗಿಂತ ದೊಡ್ಡ ದೇವರು ಸಿಗುವುದಿಲ್ಲ ಎಂದರು. ಜಿಪಂ ಮಾಜಿ ಸದಸ್ಯ ಮಹದೇವಗೌಡ ಗಾಜೀಗೌಡ್ರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಯಾವ ಧರ್ಮ ಅಥವಾ ದೇವರು ನಮ್ಮನ್ನು ಉದ್ಧಾರ ಮಾಡುವುದಿಲ್ಲ. ನಮ್ಮನ್ನು ಉದ್ಧಾರ ಮಾಡುವುದು ಶಿಕ್ಷಣ ಮಾತ್ರ. ನಮ್ಮ ಉದ್ಧಾರಕ್ಕೆ ನಾವೇ ಜವಾಬ್ದಾರರು ಎಂದರು.ಸಹ ಶಿಕ್ಷಕ ಎಂ.ಎನ್. ಚಳಗೇರಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಗುರುತರ ಜವಾಬ್ದಾರಿ ಶಿಕ್ಷಕರದ್ದು ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್. ಗಾಜೀಗೌಡ್ರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗ್ರಾಮದ ನೌಕರರು, ಯುವಕರು ಒಗ್ಗಟ್ಟಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಭರಮಗೌಡ ಗಾಜಿಗೌಡ್ರ, ಅಶೋಕ ಬಣಕಾರ, ನಿವೃತ್ತ ಶಿಕ್ಷಕ ಎಲ್.ಡಿ. ಹಾವನೂರ, ನಿಂಗನಗೌಡ ಗಾಜಿಗೌಡ್ರು, ಸುಮಾ ಗಾಜಿಗೌಡ್ರ, ಚಂದ್ರಪ್ಪ ದೊಡ್ಡತಳವಾರ, ಶೇಖರಗೌಡ, ಕಾಂತೇಶ್ ಇತರರು ಪಾಲ್ಗೊಂಡಿದ್ದರು.
ಭವಾನಿ, ಮೇಘಾ, ಅರುಣ್ ಪ್ರಾರ್ಥಿಸಿದರು. ಹನುಮಂತಗೌಡ ಗಾಜಿಗೌಡ್ರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್.ಎಚ್. ಬಣಕಾರ ನಿರೂಪಿಸಿದರು. ಸಂಜೀವಗೌಡ ವಂದಿಸಿದರು.ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರರಾಣಿಬೆನ್ನೂರು: ಇಂದಿನ ದಿನಗಳಲ್ಲಿ ಪಾಲಕರು ತಮ್ಮ ಮಕ್ಕಳನ್ನು ಕಷ್ಟಪಟ್ಟು ಬೆಳೆಸುತ್ತಿದ್ದು, ಮಕ್ಕಳು ತಮ್ಮ ಜವಾಬ್ದಾರಿಯನ್ನು ಅರಿತು ಶಿಕ್ಷಣದಲ್ಲಿ ಮುಂದೆ ಬರಬೇಕು ಎಂದು ಪುರವರ್ಗ ಮಠ ಅವರಗೊಳ್ಳದ ಓಂಕಾರ ಶಿವಾಚಾರ್ಯರು ನುಡಿದರು.ನಗರದ ದೊಡ್ಡಪೇಟೆಯ ಪಂಚಾಚಾರ್ಯ ಗುರುಕಾರುಣ್ಯ ಮಂಗಲ ಮಂದಿರದಲ್ಲಿ ಸ್ಥಳೀಯ ಲಿಂಗವಂತ ವಧು- ವರರ ವೇದಿಕೆ ಹಾಗೂ ತಾಲೂಕು ಲಿಂಗವಂತ ನೌಕರರ ವೇದಿಕೆ ಆಶ್ರಯದಲ್ಲಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಬಡತನದ ಕಾರಣದಿಂದಾಗಿ ಶಿಕ್ಷಣ ವಂಚಿತರಾಗುತ್ತಿರುವ ಮಕ್ಕಳಿಗೆ ಲಿಂಗಾಯತ ನೌಕರರ ವೇದಿಕೆಯು ಆಶಾಕಿರಣವಾಗಿದೆ. ಶ್ರದ್ಧೆ, ಭಕ್ತಿ, ನಿಷ್ಠೆಯಿಂದ ಇಲ್ಲಿಂದ ಪಡೆದಿರುವ ಸಹಾಯವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ನಗರಸಭಾ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಮಾತನಾಡಿ, ಸಮಾಜದ ಯಾವ ಮಗುವೂ ಶಿಕ್ಷಣದಿಂದ ವಂಚಿತವಾಗಬಾರದು ಎನ್ನುವ ಉದ್ದೇಶದಿಂದ ಈ ವೇದಿಕೆಗಳ ಮೂಲಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಹೆಮ್ಮೆಯ ಸಂಗತಿ ಎಂದರು.
ನಿವೃತ್ತ ಮುಖ್ಯಶಿಕ್ಷಕ ಎಸ್.ಸಿ. ಷಡಕ್ಷರಿಮಠ ಮಾತನಾಡಿದರು. ಸಿ.ಬಿ. ಪ್ರಸಾದಿಮಠ, ಫಕ್ಕೀರೇಶ ಬಸ್ಮಾಂಗಿಮಠ, ಕಸಾಪ ಕಾರ್ಯದರ್ಶಿ ಜಗದೀಶ ಮಳಿಮಠ, ಚಂದ್ರಣ್ಣ ರಾಮಾಳದ, ಬಿದ್ದಾಡೆಪ್ಪ ಚಕ್ರಸಾಲಿ, ನಿವೃತ್ತ ಮುಖ್ಯಶಿಕ್ಷಕ ಎನ್.ಎನ್. ಸಿದ್ಧಾಳ, ಎಂ.ಎಂ. ಪಾಟೀಲ, ರಾಜಶೇಖರಯ್ಯ ಬೆಳವಿಗಿಮಠ, ಶಂಕ್ರಮ್ಮ ಅಸುಂಡಿ, ಕರಬಸಣ್ಣ ಜಂಬಗಿ, ಪ್ರಕಾಶ ಗಚ್ಚಿನಮಠ ಮತ್ತಿತರರಿದ್ದರು. ವಾಗೀಶ ಪಂಡಿತಾರಾಧ್ಯ ಸಂಸ್ಕೃತ ಪಾಠಶಾಲೆಯ ವಟುಗಳು ವೇದಘೋಷ ಮಾಡಿದರು.