ಸಾರಾಂಶ
ತ್ಯಾಗರ್ತಿ ವಿವೇಕಾನಂದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಜೋಷಿ ಫೌಂಡೇಶನ್ ವತಿಯಿಂದ ಉಚಿತವಾಗಿ ನೋಟ್ ಪುಸ್ತಕ ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಸಾಗರ
ಈಗ ಶಿಕ್ಷಣಕ್ಕೆ ಆರ್ಥಿಕ ಸಮಸ್ಯೆ ತೊಡಕಾಗುತ್ತಿಲ್ಲ. ಶಿಕ್ಷಣ ಪಡೆಯಲೇಬೇಕೆಂದು ಸಂಕಲ್ಪ ಮಾಡಿದವರಿಗೆ ಉತ್ತಮ ನೆರವು ಸಿಗುತ್ತಿದೆ ಎಂದು ಜೋಷಿ ಫೌಂಡೇಶನ್ ಸಂಸ್ಥಾಪಕ ಅಬಸೆ ದಿನೇಶಕುಮಾರ್ ಜೋಷಿ ಅಭಿಪ್ರಾಯಪಟ್ಟರು.ತಾಲ್ಲೂಕಿನ ತ್ಯಾಗರ್ತಿ ವಿವೇಕಾನಂದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶುಕ್ರವಾರ ಜೋಷಿ ಫೌಂಡೇಶನ್ ವತಿಯಿಂದ ಉಚಿತ ನೋಟ್ ಪುಸ್ತಕ ವಿತರಣೆ ಮಾಡಿ ಅವರು ಮಾತನಾಡಿ, ಹಿಂದೆ ಶಿಕ್ಷಣ ಪಡೆಯುವುದೇ ಸವಾಲು ಎನ್ನುವ ವಾತಾವರಣ ಇತ್ತು. ಈಗ ಎಲ್ಲ ಭಾಗಗಳಲ್ಲೂ ಶಾಲೆ ಇದೆ. ಓದುವ ಆಸೆ ಇರುವ ಮಕ್ಕಳಿಗೆ ಪುಸ್ತಕದ ಜೊತೆಗೆ ವಿವಿಧ ಸೌಲಭ್ಯ ಸರ್ಕಾರದ ಜೊತೆಗೆ ದಾನಿಗಳು ನೀಡುತ್ತಿದ್ದಾರೆ ಎಂದರು.
ಶಿಕ್ಷಣವೊಂದಿದ್ದರೆ ಎಂತಹ ಸವಾಲನ್ನಾದರೂ ಎದುರಿಸುವ ಶಕ್ತಿ ಬರುತ್ತದೆ. ಶಿಕ್ಷಣಕ್ಕಿಂತ ದೊಡ್ಡ ಸಂಪತ್ತು ಯಾವುದೂ ಇಲ್ಲ. ಮಕ್ಕಳಿಗೆ ಆಸ್ತಿ ಮಾಡುತ್ತೇವೆ ಎಂದು ಹೇಳುವುದ ಕ್ಕಿಂತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಅವರನ್ನೇ ದೇಶದ ಆಸ್ತಿಯನ್ನಾಗಿ ರೂಪಿಸುವ ಹೊಣೆಗಾರಿಕೆ ಪೋಷಕರ ಮೇಲೆ ಇದೆ. ಜೋಷಿ ಫೌಂಡೇಶನ್ ಕಲಿಕೆಯಲ್ಲಿ ಆಸಕ್ತಿ ಇರುವ ಮಕ್ಕಳಿಗೆ ನೆರವು ನೀಡುವ ಸಣ್ಣ ಪ್ರಯತ್ನ ಲಾಗಾಯ್ತಿನಿಂದ ಮಾಡಿಕೊಂಡು ಬರುತ್ತಿದೆ. ಇಲ್ಲಿ ಸೌಲಭ್ಯ ಪಡೆದು ಉನ್ನತ ಸ್ಥಾನಕ್ಕೆ ಹೋದ ವಿದ್ಯಾರ್ಥಿಗಳು ಇತರರಿಗೆ ತಮ್ಮ ನೆರವಿನ ಹಸ್ತ ಚಾಚಬೇಕು ಎಂದು ಹೇಳಿದರು.ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ಮೂರ್ತಿ ಕಾನುಗೋಡು ಮಾತನಾಡಿದರು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಗಣಪತಿ, ಕಾರ್ಯದರ್ಶಿ ಸದಾಚಾರಿ ಗೌಡ, ಪ್ರಮುಖೃಅದ ಜಯಕುಮಾರ್, ತೊಳಜಾ ನಾಯ್ಕ್, ವಿಶ್ವನಾಥ್, ಸರ್ವೇಶ್, ಶಾಂತಿ, ಸುಹಾನಾ ಇನ್ನಿತರರು ಹಾಜರಿದ್ದರು.