ನಾವು ನಿಜಕ್ಕೂ ಪುಣ್ಯ ಮಾಡಿದ್ದೇವೆ. ಅದೇನು ಅದ್ಭುತ. 8,10 ಲಕ್ಷ ಭಕ್ತರು ಸೇರಿರುವ ಜಾತ್ರಾಮಹೋತ್ಸವದಲ್ಲಿ ನಾವು ಪಾಲ್ಗೊಂಡಿರುವುದು ನಿಜಕ್ಕೂ ಪುಣ್ಯದ ಕೆಲಸ

ಕೊಪ್ಪಳ: ಈ ಜಗತ್ತಿನಲ್ಲಿ ಗವಿಸಿದ್ಧೇಶ್ವರ ಜಾತ್ರೆಗಿಂತ ಮತ್ತೊಂದು ಅದ್ಭುತ ಇಲ್ಲ ಎಂದು ಉಪ್ಪಿನ ಬೆಟಗೇರಿ ಕುಮಾರ ವಿರುಪಾಕ್ಷ ಮಹಾಸ್ವಾಮೀಜಿ ಹೇಳಿದರು.

ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ಅಂಗವಾಗಿ ನಡೆದ ಭಕ್ತ ಹಿತ ಚಿಂತನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ನಾವು ನಿಜಕ್ಕೂ ಪುಣ್ಯ ಮಾಡಿದ್ದೇವೆ. ಅದೇನು ಅದ್ಭುತ. 8,10 ಲಕ್ಷ ಭಕ್ತರು ಸೇರಿರುವ ಜಾತ್ರಾಮಹೋತ್ಸವದಲ್ಲಿ ನಾವು ಪಾಲ್ಗೊಂಡಿರುವುದು ನಿಜಕ್ಕೂ ಪುಣ್ಯದ ಕೆಲಸ. ನಾವು ಜಗತ್ತಿನ 8-10 ಅದ್ಭುತ ಕೇಳಿದ್ದೇವೆ.ಆದರೆ, ಕೊಪ್ಪಳ ಜಾತ್ರೆಯ ಅದ್ಭುತ ಮತ್ತೊಂದು ಇಲ್ಲ ಎಂದರು.

ನೋಡು ನೋಡುತ್ತಿದಂತೆ ನಮ್ಮ ಅಭಿನವನ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳು ಕೊಪ್ಪಳವನ್ನು ಕೈಲಾಸ ಮಾಡಿದ್ದಾರೆ ಎಂದು ಭಕ್ತರು ಉಚ್ಛರಿಸುತ್ತಿರುವುದು ನನಗೆ ಜಾತ್ರೆಯಲ್ಲಿ ಕೇಳಿ ಬಂದಿತು.

ನಾನು ಗವಿಮಠದ ಬೆಟ್ಟ ಏರುವಾಗ ಅನೇಕ ಭಕ್ತರು ಈ ರೀತಿ ಮಾತನಾಡಿಕೊಳ್ಳುತ್ತಿದ್ದರು. ಅದೆಲ್ಲವನ್ನು ನೋಡಿದ ನನಗೆ ನಿಜವೂ ಅನಿಸಿತು ಎಂದು ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಕುರಿತು ಕವನ ವಾಚಿಸಿದರು.

12 ನೇ ಶತಮಾನದಲ್ಲಿ ಬಸವಣ್ಣ ಅವರ ಕುರಿತು ಮಡಿವಾಳ ಮಾಚಿದೇವರು ಬರೆದ ವಚನ ಈಗ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳಿಗೆ ಅನ್ವಯವಾಗುತ್ತದೆ ಎಂದು ಮಡಿವಾಳರ ವಚನವನ್ನು ಶ್ರೀಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಕುರಿತು ತಾವೇ ಹೋಲಿಕೆ ಮಾಡಿ ವಚನ ವಾಚನ ಮಾಡಿದರು.

ಗವಿಮಠದಲ್ಲಿ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮೀಜಿಗಳ ಫೋಟೋ ಇಲ್ಲ. ಭಕ್ತರು ಅದನ್ನು ಕೇಳಿದರೇ ಮಠದೊಳಗೆ ಮಾಲೀಕರ ಫೋಟೋ ಇರುತ್ತದೆ. ಆಳಿನ ಫೋಟೋ ಇರುತ್ತದೆಯೇನು ಎಂದು ಪ್ರಶ್ನೆ ಮಾಡುತ್ತಾರೆ. ನಾನು ಗವಿಮಠದೊಳಗಿನ ಆಳು ಎಂದು ಹೇಳುತ್ತಾರೆ ಎಂದರೇ ಅರ್ಥ ಮಾಡಿಕೊಳ್ಳಬೇಕು ನಾವು. ಇದೊಂದು ದೊಡ್ಡ ಪುಣ್ಯದ ಕಾಲ, ಅವರ ಕಾಲವಧಿಯಲ್ಲಿ ಇರುವ ಸಮಯದಲ್ಲಿ ನಾವು ಇರುವುದೇ ಪುಣ್ಯ ಎಂದರು.

ಅವರು ಭಕ್ತ ಹಿತಚಿಂತನೆ ಸಭೆ ನಡೆಸುವ ಮೂಲಕ ಭಕ್ತರ ಚಿಂತನೆ ಮಾಡುತ್ತಾರೆಯೇ ಹೊರತು ತಮ್ಮ ಚಿಂತನೆ ಮಾಡುತ್ತಿಲ್ಲ ಎಂದರು.

ಹೈದ್ರಾಬಾದ್ ನಿಜಾಮನಿಗೆ ಕುಷ್ಟ ರೋಗ ಬಂದಾಗ ಶ್ರೀ ಗವಿಮಠಕ್ಕೆ ಬಂದು ಇಲ್ಲಿಯ ವಿಭೂತಿ ಹಚ್ಚಿಕೊಳ್ಳುತ್ತಿದ್ದಂತೆ ಕುಷ್ಟ ರೋಗ ನಿವಾರಣೆಯಾದ ಪವಾಡ ನಡೆದಿದೆ. ಇಂಥ ಶಕ್ತಿ ಕೊಪ್ಪಳ ಗವಿಮಠಕ್ಕೆ ಇದೆ ಎಂದರು.

ಮನಸೂರೆಗೊಂಡ ಪಿಟೀಲು, ತಬಲಾ, ಘಟಂ ನಾದ

ಕೊಪ್ಪಳ: ಶ್ರೀಗವಿಸಿದ್ಧೇಶ್ವರ ಜಾತ್ರಾಮಹೋತ್ಸವದ ನಿಮಿತ್ತ ಕೈಲಾಸ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ವಿದ್ವಾನ್ ಅಂಬಿಸುಬ್ರಮಣ್ಯ ಅವರ ಪಿಟೀಲು ವಾದ, ಓಜಸ್ ಆದಿಯಾ ತಬಲಾ ಹಾಗೂ ಗಿರಧರ ಉಡುಪ ಅವರ ಘಟಂ ನಾದಕ್ಕೆ ಸೇರಿದ್ದ ಜನಸ್ತೋಮ ಮೂಕವಿಸ್ಮಿತವಾಗಿರುವುದು ಕಂಡುಬಂದಿತು.

ವಾದ್ಯಗಳ ಜುಗುಲಬಂದಿಯ ಮೂಲಕ ಸೇರಿದ್ದ ಜನಸ್ತೋಮದ ಮನಸೂರೆಗೊಂಡರು. ವಾದ್ಯಗಳ ಮೂಲಕವೇ ಪರಸ್ಪರ ಜುಗುಲ್ ಬಂಧಿಯಲ್ಲಿ ಪರಸ್ಪರ ಮಾತನಾಡಿಸಿದಂತೆ, ಪೈಪೋಟಿಯಲ್ಲಿ ನುಡಿಸಿದ್ದರಿಂದ ಸೇರಿದ್ದ ಜನ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ಬಳಿಕ ಬೆಂಗಳೂರಿನ ಸಿದ್ಧಾರ್ಥ ಬೆಳ್ಮಣ್ಣು ಅವರ ಉಳ್ಳುವರು ಶಿವಾಲಯ ಮಾಡುವರು, ನಾನೇನು ಮಾಡಲಯ್ಯ ಬಡವನಯ್ಯ ಎನ್ನುವ ಗಾಯನವೂ ಅತ್ಯುತ್ತಮವಾಗಿ ಮೂಡಿಬಂದಿತು.