ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕರ್ನಾಟಕ ರಾಜ್ಯದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಮನೆಯಲ್ಲಿ ಹೆಣ್ಣು ಮಗಳು ಕಾಲೇಜಿಗೆ ಹೋಗಿದ್ದರೆ ಸಂಜೆ ಮನೆಗೆ ತಡವಾಗಿ ಬಂದರೆ ಭಯವಾಗುತ್ತದೆ. ಕೆಲಸಕ್ಕೆ ಹೋದ ಹೆಣ್ಣು ಮಗಳು ಬರುತ್ತಾರೋ ಇಲ್ಲವೋ ಎನ್ನುವ ಆತಂಕದಲ್ಲಿ ತಾಯಂದಿರು ಬದುಕುತ್ತಿದ್ದಾರೆ. ಈ ವ್ಯವಸ್ಥೆ ಬದಲಾಗಬೇಕೆಂದರೆ ಕರ್ನಾಟಕ ಸರ್ಕಾರ ಬದಲಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಬಾಗಲಕೋಟೆಯ ಉಪಚುನಾವಣೆಯ ಹಿನ್ನೆಲೆಯಲ್ಲಿ ಇಂದು ನಗರದ ವಾರ್ಡ ನಂಬರ 28ರ ಪ್ರಕಾಶ ಹಂಡಿ ಅವರ ಮನೆ ಹಾಗೂ ವಾರ್ಡ ನಂಬರ್ 29ರಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಮತಯಾಚಿಸಿ ಮಾತನಾಡಿದರು. ಹೆಣ್ಣು ಮಕ್ಕಳ ಸುರಕತೆಯಲ್ಲಿ ತಾಯಂದಿರು ಬಹಳ ಆತಂಕದಲ್ಲಿದ್ದಾರೆ. ರಾಜ್ಯದಲ್ಲಿ ಹೆಣ್ಣು ಮಕ್ಕಳ ವಿಚಾರದಲ್ಲಿ ಸುರಕ್ಷತೆ ಇಲ್ಲ. ಬೆಳಗ್ಗೆ ಟಿವಿ ನೋಡಿದರೆ ರೇಪ್, ಮರ್ಡರ್, ಲವ್ ಜಿಹಾದ್ ಹೆಚ್ಚುತ್ತಿವೆ. ದುಷ್ಕೃತ್ಯ ಮಾಡವವರ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅವರಿಗೆ ಯಾವುದೇ ಭಯ ಇಲ್ಲ. ಅವರನ್ನು ರಕ್ಷಣೆ ಮಾಡಲು ಕೆಲವು ಜನರಿದ್ದಾರೆ. ಬಾಗಲಕೋಟೆ ಸೇರಿದಂತೆ ಎಲ್ಲ ಕಡೆ ಡ್ರಗ್ ಸೇವನೆ ಹೆಚ್ಚಾಗಿದೆ. ಇದರಿಂದ ಕಾನೂನು ಬಾಹಿರ ಚಟುವಟಿಕೆ ಹೆಚ್ಚಾಗಿದೆ. ಇಡೀ ಕರ್ನಾಟಕದ ಸಾಮಾಜಿಕ ವ್ಯವಸ್ಥೆಯನ್ನು ವಿಶೇಷವಾಗಿ ಹೆಣು ಮಕ್ಕಳ ಸುರಕ್ಷತೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಸಣ್ಣ ಮಕ್ಕಳು, ಕಾಲೇಜು ವಿದ್ಯಾರ್ಥಿನಿಯರು ಕೆಲಸಕ್ಕೆ ಹೋಗುವ ಹೆಣ್ಣು ಮಕ್ಕಳು ಸುರಕಿತವಾಗಿಲ್ಲ. ಇದರ ಜೊತೆಗೆ ಲವ್ ಜಿಹಾದ್ ಸೇರಿಕೊಂಡಿದೆ. ಅದು ಸಾಮಾಜಿಕ ಪಿಡುಗು. ಅವರಿಗೆ ಏನಾದರೂ ಕೇಳಿದರೆ ನಮ್ಮ ಸರ್ಕಾರ ಇದೆ ಅನ್ನುತ್ತಾರೆ. ಬಾಗಲಕೋಟೆ ಅಭಿವೃದ್ಧಿ ಆಗಬೇಕು. ಈ ವ್ಯವಸ್ಥೆ ಬದಲಾಗಬೇಕೆಂದರೆ ಕರ್ನಾಟಕ ಸರ್ಕಾರ ಬದಲಾಗಬೇಕು. ಅದಕ್ಕಾಗಿ ವೀರಣ್ಣ ಚರಂತಿಮಠ ಅವರನ್ನು ಆಯ್ಕೆ ಮಾಡಿದರೆ, ಈ ಸರ್ಕಾರದ ಪತನದ ಮೊದಲ ಹೆಜ್ಜೆ ಈ ಜಯವಾಗುತ್ತದೆ ಎಂದರು.
ಪ್ರತಿಷ್ಠೆಯ ಚುನಾವಣೆ: ಈ ಚುನಾವಣೆ ಬಹಳ ಪ್ರತಿಷ್ಠೆಯ ಚುನಾವಣೆ, ಅದಕ್ಕೆ ಹಲವು ಕಾರಣಗಳಿವೆ. ರಾಜ್ಯದಲ್ಲಿ ಪ್ರಾಮಾಣಿಕತೆಯ ವಿಚಾರ ತೆಗೆದುಕೊಂಡಾಗ ಬೆರಳೆಣಿಕೆಯ ಜನರನ್ನು ನಾವು ಪ್ರಾಮಣಿಕರು ಎಂದು ಹೇಳಬಹುದು. ಅದರಲ್ಲಿ ಪ್ರಮುಖರು ವೀರಣ್ಣ ಚರಂತಿಮಠ, ಶುದ್ಧ ಮನಸ್ಸು, ಶುದ್ಧ ಹಸ್ತ, ಇಷ್ಟು ದೊಡ್ಡ ಸಂಸ್ಥೆ ಕಟ್ಟಿ ನಿಸ್ವಾರ್ಥ ಸೇವೆಯಿಂದ ಮಾಡಿ ಅವರು ಬೆಂಗಳೂರಿನವರೆಗೆ ಬೆಳೆಸಿದ್ದಾರೆ. ಅದೇ ರೀತಿ ಬಾಗಲಕೋಟೆ ಬೆಳೆಯಬೇಕು ಬಸವೇಶ್ವರ ಶಿಕ್ಷಣ ಸಂಸ್ಥೆ ಬೆಳೆದಂತೆ ಮುಳುಗಡೆಯಾಗಿರುವ ಬಾಗಲಕೋಟೆ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು. ಅದಕ್ಕೆ ಬದ್ಧತೆ ಇರುವ ಜನಪ್ರತಿನಿಧಿ ಇದ್ದರೆ ಮಾತ್ರ ಸಾಧ್ಯ ವೀರಣ್ಣ ಚರಂತಿ ಮಠ ಅವರು ಶಾಸಕರಾಗಿದ್ದಾಗ ಮತ್ತು ಇಲ್ಲದಿರುವಾಗ ಏನಾಗುತ್ತದೆ ಎನ್ನುವುದನ್ನು ನೀವು ನೋಡಿದ್ದೀರಿ, ಅಭಿವೃದ್ಧಿಯ ಹಳಿ ತಪ್ಪಿ ಎರಡು ವರ್ಷ ವಿಳಂಬವಾದರೆ ವೆಚ್ಚ ಹೆಚ್ಚಾಗುತ್ತದೆ. ಆಗ ಯಾವುದೇ ಸರಕಾರ ಬಂದರೂ ಮಾಡುವುದು ಕಷ್ಟವಾಗುತ್ತದೆ. ಆಗಿನ ಖರ್ಚಿನಲ್ಲಿಯೇ ಆದರೆ ಮುಗಿಯುತ್ತದೆ ಎಂದರು.ಬಿಜೆಪಿ ಅವಧಿಯಲ್ಲಿ ಅಭಿವೃದ್ಧಿಗೆ ಹಣ:ಭ್ರಷ್ಟ ಸರ್ಕಾರ: ಈಗಿನದು ಅತ್ಯಂತ ಭ್ರಷ್ಟ ಸರಕಾರ, ಸಬ್ ರಿಜಿಸ್ಟ್ರಾರ್ ಆಫೀಸಿಗೆ ಹೋದರೆ ಎಲ್ಲವೂ ಗೊತ್ತಾಗುತ್ತದೆ. ಎಲ್ಲದಕ್ಕೂ ದರ ನಿಗದಿ ಮಾಡಿದ್ದಾರೆ. ಇಲ್ಲಿ ರೆಜಿಸ್ಟ್ರೇಶನ್ ಆಗಬೇಕೆಂದರೆ ಬೆಂಗಳೂರಿನಲ್ಲಿ ಒಪ್ಪಿಗೆ ಕೊಟ್ಟರೆ ಮಾತ್ರ ರೆಜಿಸ್ಟ್ರೇಶನ್ ಆಗುತ್ತದೆ. ಒಂದು ದಿನದಲ್ಲಿ ಪ್ರತಿ ಸಣ್ಣ ಹಳ್ಳಿಯಲ್ಲಿ ಖರೀದಿ ಮತ್ತು ಮಾರಾಟ ಮಾಡುವುದಿದ್ದರೆ ದುಡ್ಡು ಬೆಂಗಳೂರಿಗೆ ಹೋಗುತ್ತದೆ. ಇಂತಹ ಕೆಟ್ಟ ವ್ಯವಸ್ಥೆ ಇದೆ. ಇದು ಹೋಗಬೇಕು ಎಂದು ಹೇಳಿದರು. ಈ ವೇಳೆ ವಾರ್ಡ್ ನ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.