ನನ್ನ ಐಶ್ವರ್ಯಗೌಡ ನಡುವೆ ವ್ಯವಹಾರ ನಡೆದಿಲ್ಲ: ಮಾಜಿ ಶಾಸಕ ಡಾ.ಕೆ.ಅನ್ನದಾನಿ

| Published : Feb 11 2025, 12:45 AM IST

ಸಾರಾಂಶ

ನನಗೆ ಅರಳೋ-ಮರುಳೋ ಎಂದು ಹೇಳಿದ್ದಾರೆ. ಭಾಷೆ ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ನನ್ನಂತಹವರಿಗೆ ಈ ಭಾಷೆಯನ್ನು ಬಳಸುವಂತಹದ್ದಲ್ಲ. ನನಗೆ ೬೦ ವರ್ಷವಾದರೂ ಕ್ರಿಯಾಶೀಲವಾಗಿದ್ದೇನೆ. ನಾನಿನ್ನೂ ಅರಳೋ- ಮರಳೋ ಆಗಿಲ್ಲ. ನನಗೆ ಐಶ್ವರ್ಯಗೌಡ ೨೦೧೨ರಿಂದ ಪರಿಚಯವಿದ್ದರೂ ಆಗ ಆಕೆ ೪೨೦ ಕೆಲಸ ಮಾಡುತ್ತಿರಲಿಲ್ಲ..!

ಕನ್ನಡಪ್ರಭ ವಾರ್ತೆ ಮಂಡ್ಯ

ನನ್ನ ಮತ್ತು ಐಶ್ವರ್ಯಗೌಡ ನಡುವೆ ಯಾವುದೇ ರೀತಿಯ ವ್ಯವಹಾರವೂ ನಡೆದಿಲ್ಲ. ಆಕೆ ಸುಳ್ಳು ಹೇಳುತ್ತಿದ್ದಾರೆ. ಆ ವ್ಯವಹಾರವೇನು ಎಂದು ಹೇಳದಿದ್ದರೆ ಐಶ್ವರ್ಯಗೌಡ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಎಚ್ಚರಿಕೆ ನೀಡಿದರು.

ನನ್ನ ಮೇಲೆ ಮಾಡಿರುವ ಆರೋಪಕ್ಕೆ ಏನಾದರೂ ತಿರುಳು ಇರಬೇಕಲ್ಲ. ನಾನು ಐಶ್ವರ್ಯಗೌಡ ಅವರಂತೆ ೪೨ ಕೆಲಸ ಮಾಡಿಲ್ಲ. ನನ್ನೊಂದಿಗೆ ನಡೆಸಿದ ವ್ಯವಹಾರವೇನು ಎಂಬುದನ್ನು ಬಹಿರಂಗಪಡಿಸಬೇಕು ಎಂದು ಐಶ್ವರ್ಯಗೌಡಗೆ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ನನಗೆ ಅರಳೋ-ಮರುಳೋ ಎಂದು ಹೇಳಿದ್ದಾರೆ. ಭಾಷೆ ಬಳಸುವಾಗ ಎಚ್ಚರಿಕೆಯಿಂದ ಇರಬೇಕು. ನನ್ನಂತಹವರಿಗೆ ಈ ಭಾಷೆಯನ್ನು ಬಳಸುವಂತಹದ್ದಲ್ಲ. ನನಗೆ ೬೦ ವರ್ಷವಾದರೂ ಕ್ರಿಯಾಶೀಲವಾಗಿದ್ದೇನೆ. ನಾನಿನ್ನೂ ಅರಳೋ- ಮರಳೋ ಆಗಿಲ್ಲ. ನನಗೆ ಐಶ್ವರ್ಯಗೌಡ ೨೦೧೨ರಿಂದ ಪರಿಚಯವಿದ್ದರೂ ಆಗ ಆಕೆ ೪೨೦ ಕೆಲಸ ಮಾಡುತ್ತಿರಲಿಲ್ಲ.. ನನ್ನೊಬ್ಬನ ಹೆಸರನ್ನು ಹೇಳುವ ಆಕೆ ಕಾಂಗ್ರೆಸ್‌ನವರ ವ್ಯವಹಾರಿಕ ಸಂಬಂಧದ ಬಗ್ಗೆ, ಡಿ.ಕೆ.ಸುರೇಶ್‌ಗೆ ಐಶ್ವರ್ಯಗೌಡ ಏನಾಗಬೇಕೆಂದು ಮೊದಲು ಹೇಳಲಿ ಎಂದರು.

ಐಶ್ವರ್ಯಗೌಡ ಪ್ರಕರಣವನ್ನು ಇದುವರೆಗೂ ರಾಜ್ಯ ಸರ್ಕಾರ ಸಿಬಿಐ, ಇಡಿ ತನಿಖೆಗೆ ಒಪ್ಪಿಸಿಲ್ಲ. ಕಾಂಗ್ರೆಸ್ ಪಕ್ಷದ ಪ್ರಭಾವಿ ಶಾಸಕರು ಪ್ರಕರಣದಲ್ಲಿ ಇರುವುದರಿಂದ ಅವರನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ. ಸುಮಾರು ೧೦೦ ಕೋಟಿ ರು. ವಹಿವಾಟು ನಡೆದಿದ್ದರೂ ಯಾರೋ ಪೊಲೀಸರಿಂದ ಬೇಕಾಬಿಟ್ಟಿ ತನಿಖೆ ಮಾಡಿಸುತ್ತಿದ್ದಾರೆ ಎಂದು ದೂರಿದರು.