ಸೊರಬದಲ್ಲಿ ಆಕಳು ಅಪಹರಿಸಿ ಪರಾರಿಯಾದ ದುಷ್ಕರ್ಮಿಗಳು

| Published : Sep 30 2024, 01:16 AM IST

ಸಾರಾಂಶ

ಪುರಸಭೆ ಸದಸ್ಯ ಪ್ರಸನ್ನಕುಮಾರ್ ದೊಡ್ಮನೆ ಅವರ ಮನೆಯ ಎದುರಿಗೆ ಮಲಗಿದ್ದ ಆಕಳನ್ನು ಖದೀಮರು ಕಳ್ಳತನ ಮಾಡಿದ್ದಾರೆ. ಆಕಳು ಗರ್ಭಾವಸ್ಥೆಯಲ್ಲಿದ್ದು, ಅನಾರೋಗ್ಯದಿಂದ ಬಳಲುತ್ತಿತ್ತು ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಸೊರಬ

ಪಟ್ಟಣದ ಚಿಕ್ಕಪೇಟೆಯಲ್ಲಿ ಶನಿವಾರ ರಾತ್ರಿ ಮಲಗಿದ್ದ ಆಕಳನ್ನು ದುಷ್ಕರ್ಮಿಗಳು ಅಪಹರಣ ಮಾಡಿ ಪರಾರಿಯಾದ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಪುರಸಭೆ ಸದಸ್ಯ ಪ್ರಸನ್ನಕುಮಾರ್ ದೊಡ್ಮನೆ ಅವರ ಮನೆಯ ಎದುರಿಗೆ ಮಲಗಿದ್ದ ಆಕಳನ್ನು ಖದೀಮರು ಕಳ್ಳತನ ಮಾಡಿದ್ದಾರೆ. ಆಕಳು ಗರ್ಭಾವಸ್ಥೆಯಲ್ಲಿದ್ದು, ಅನಾರೋಗ್ಯದಿಂದ ಬಳಲುತ್ತಿತ್ತು ಎನ್ನಲಾಗಿದೆ. ಶನಿವಾರ ಸಂಜೆ ೫ ಗಂಟೆಯಿಂದ ರಾತ್ರಿ ೧೨-೨೫ ರವರೆಗೆ ಎಷ್ಟೇ ಪ್ರಯತ್ನಿಸಿದರು ಹಣ್ಣು, ತರಕಾರಿ ಸೇರಿದಂತೆ ಯಾವುದೇ ಆಹಾರವನ್ನು ನೀಡಿದರೂ ಸೇವಿಸಿಲ್ಲ. ತಮ್ಮ ಮನೆಯ ಮುಂಭಾಗದಲ್ಲಿ ಮಲಗಿತ್ತು. ತಡ ರಾತ್ರಿ ತಾವು ಮನೆಯೊಳಗೆ ತೆರಳಿದ ಸ್ವಲ್ಪ ಹೊತ್ತಿನಲ್ಲಿಯೇ ಗೋ ಮಾತೆಯನ್ನು ಕಳ್ಳರು ಕದ್ದೊಯ್ದಿದ್ದಾರೆ ಎಂದು ಪುರಸಭಾ ಸದಸ್ಯ ಪ್ರಸನ್ನಕುಮಾರ್ ತಿಳಿಸಿದ್ದಾರೆ.

ಸಿನಿಮೀಯ ರೀತಿಯಲ್ಲಿ ಐದಾರು ಜನ ದುಷ್ಕರ್ಮಿಗಳು ಆಕಳನ್ನು ಕಳ್ಳತನ ಮಾಡಿ ಫಾರ್ಚುನರ್ ವಾಹನದಲ್ಲಿ ಎತ್ತಾಕಿಕೊಂಡು ತೆರಳಿದ್ದಾರೆ. ಇದನ್ನು ಗಮನಿಸಿದ ತಕ್ಷಣ ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದ ಎದುರು ಫಾರ್ಚುನರ್ ವಾಹನ ಅಡ್ಡಗಟ್ಟಲು ಪ್ರಯತ್ನಿಸಿದಾಗ ಗಾಡಿಯನ್ನು ಮೈ ಮೇಲೆ ಹರಸಿಲು ಯತ್ನಸಿ, ದುಷ್ಕರ್ಮಿಗಳು ತಪ್ಪಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಸಿಸಿ ಟಿವಿಯಲ್ಲಿ ಸೆರೆಯಾಗಿರುವ ಆಕಳು ಕಳ್ಳತನ ದೃಶ್ಯವನ್ನು ಕೂಡಲೇ ಪೊಲೀಸರಿಗೆ ನೀಡಿದ್ದು, ತಕ್ಷಣ ಆಕಳು ಅಪಹರಣಕ್ಕೆ ಬಳಸಿರುವ ಫಾರ್ಚುನರ್ ಕೆ.ಎ.೧, ಎಂಝಡ್ ೫೦೪೯ ನಂಬರಿನ ವಾಹನದ ಮಾಲೀಕರನ್ನು ಪತ್ತೆ ಹಚ್ಚಿ ಆಕಳನ್ನು ಬಂಧಮುಕ್ತವನ್ನಾಗಿ ಮಾಡಿ ಮತ್ತು ದುಷ್ಕರ್ಮಿಗಳನ್ನು ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅಲ್ಲದೇ ಪಟ್ಟಣದ ಕಾನಕೇರಿ ಬಡಾವಣೆಯಲ್ಲಿಯೂ ಇತ್ತೀಚೆಗೆ ಇದೇ ರೀತಿ ಇನೋವಾ ಕಾರಿನಲ್ಲಿ ಗೋಮಾತೆ ಕಳ್ಳತನ ನಡೆದಿದ್ದು, ಈ ಬಗ್ಗೆ ರಕ್ಷಣಾ ಇಲಾಖೆ ಯಾವುದೇ ಪತ್ತೆ ಕಾರ್ಯದಲ್ಲಿ ತೊಡಗದಿರುವುದು ಸಾರ್ವಜನಿಕರ ಹಾಗೂ ಗೋ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.