ಸಾರಾಂಶ
ನಾನು ರಾಷ್ಟ್ರೀಯ ಪಕ್ಷದ ರಾಜ್ಯ ಮಾಧ್ಯಮ ವಕ್ತಾರ. ನಮ್ಮ ಮೇಲೆ ಆರೋಪ ಬಂದಾಗ ಮಾತನಾಡುವುದೇ ನಮ್ಮ ಕೆಲಸ.
ಕನ್ನಡಪ್ರಭ ವಾರ್ತೆ ಮೈಸೂರು
ಬಿ.ಎಸ್ ಯಡಿಯೂರಪ್ಪ ಸಿಎಂ ಆಗಿದ್ದಾಗ ಶಾಸಕ ಶ್ರೀವತ್ಸ ಜಿ-ಕೆಟಗರಿ ನಿವೇಶನ ಪಡೆಡಿದ್ದಾರೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಲಿ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆಗ್ರಹಿಸಿದರು.ನನಗೆ ಲೀಗಲ್ ನೋಟೀಸ್ ಕೊಟ್ಟಿದ್ದಾರೆ. ಡಿಫರ್ಮೇಷನ್ ಕೇಸ್ ಅನ್ನೇ ಎದುರಿಸುತ್ತೇನೆ, ಇನ್ನೂ ನೋಟೀಸ್ ಗೆ ಹೆದರುತ್ತಿನಾ? ಐಮ್ ನಾಟ್ ಎ ಸೆಲ್ಫ್ ಸ್ಟೈಲ್ ಪೊಲಿಟಿಷಿಯನ್. ನಾನು ರಾಷ್ಟ್ರೀಯ ಪಕ್ಷದ ರಾಜ್ಯ ಮಾಧ್ಯಮ ವಕ್ತಾರ. ನಮ್ಮ ಮೇಲೆ ಆರೋಪ ಬಂದಾಗ ಮಾತನಾಡುವುದೇ ನಮ್ಮ ಕೆಲಸ. ಸಿದ್ದರಾಮಯ್ಯ ಹಾಗೂ ಅವರ ಕುಟುಂಬದ ವಿರುದ್ಧ ಬಾಯಿಗೆ ಬಂದಹಾಗೆ ಮಾತನಾಡಿದ್ರು ಸುಮ್ಮನಿರಬೇಕಾ? ಎಂದು ಅವರು ಪ್ರಶ್ನಿಸಿದರು.
ಆಟಿಐ ಕಾರ್ಯಕರ್ತರು ಸಿಎಂ ವಿರುದ್ಧದ ಮತ್ತೊಂದಷ್ಟು ದಾಖಲೆ ನೀಡಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಎಂ. ಲಕ್ಷ್ಮಣ್ ಅವರು, ಸಿಎಂ ಪತ್ನಿ 2014 ರಲ್ಲಿ ಆಯುಕ್ತರಿಗೆ ಪತ್ರ ಬರೆಯುತ್ತಾರೆ. ಪ್ರಾಧಿಕಾರ ಸೂಕ್ತ ಬದಲಿ ನಿವೇಶನ ಕೊಡುವಂತೆ ಕೋರಿದ್ದಾರೆ. ವೈಟ್ನರ್ ಹಾಕಿರುವುದರ ಕುರಿತು ಬಿಜೆಪಿ ಜೆಡಿಎಸ್ ನವರು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ವೈಟ್ನರ್ ಹಿಂದೆ ಏನಿದೆ ಅಂತ ಮೊದಲು ಸೂಕ್ಷ್ಮವಾಗಿ ನೋಡಿ. ದೇವನೂರು ಮೂರನೇ ಹಂತದಲ್ಲಿ ಅಥವಾ ಬೇರೆ ಕಡೆ ಸಮಾನಾಂತರ ಬಡಾವಣೆಯಲ್ಲಿ ನಿವೇಶನ ಕೊಡಿ ಅಂತ ಬರೆದಿದ್ದಾರೆ. ಇದು ತಪ್ಪಾಗಿದ್ದಕ್ಕೆ ವೈಟ್ನರ್ ಹಾಕಿದ್ದಾರೆ. ಅದನ್ನೇ ದೊಡ್ಡದೆಂದು ಬಿಂಬಿಸೋದು ಖಂಡನೀಯ ಎಂದು ಕಿಡಿಕಾರಿದರು.