ದಾಬಸ್‍ಪೇಟೆ: ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಅಪರಿಚಿತ ಕಳ್ಳರು ಬೇಕರಿ ಮುಂದೆ ನಿಂತಿದ್ದ ಮಹಿಳೆ ಕೊರಳಿನಲ್ಲಿದ್ದ 60 ಗ್ರಾಂ ಮೌಲ್ಯದ ಚಿನ್ನದ ಸರ ಕಿತ್ತು ಪರಾರಿಯಾಗಿದ್ದಾರೆ. ನೆಲಮಂಗಲ ತಾಲೂಕಿನ ಗುಡೇಮಾರನಹಳ್ಳಿ ಹ್ಯಾಂಡ್ ಪೋಸ್ಟ್ ಗ್ರಾಮದ ಅಂಬಿಕಾ ಶುಕ್ರವಾರ ಮಧ್ಯಾಹ್ನ 2 ಗಂಟೆಯಲ್ಲಿ ಅದೇ ಗ್ರಾಮದ ಬಸ್ ನಿಲ್ದಾಣದ ಬೇಕರಿ ಬಳಿ ನಿಂತು ಬೇಕರಿಯವರೊಂದಿಗೆ ಮಾತನಾಡುವಾಗ ಇಬ್ಬರು ಅಪರಿಚಿತರು ಜ್ಯೂಸ್ ತೆಗೆದುಕೊಂಡು ಕುಡಿಯುತ್ತಾ ಮಹಿಳೆಯ ಕೊರಳಿಗೆ ಕೈ ಹಾಕಿ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಮಹಿಳೆ ಕಿರುಚಿದ್ದು ಸ್ಥಳೀಯರು ಕಳ್ಳರ ಬೆನ್ನತ್ತಿದ್ದರೂ ಕೈಗೆ ಸಿಗದೇ ಬೈಕಿನಲ್ಲಿ ಪರಾರಿಯಾಗಿದ್ದಾರೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.