ಸಾರಾಂಶ
ಬೈಲಹೊಂಗಲ ಸಮೀಪದ ತಿಗಡಿ ಗ್ರಾಮದ ಹಿರೇಮಠದ ಶಿವಬಸಪ್ಪ ಅಜ್ಜನವರ ಮಠ (ಗದ್ದಗಿ ಅಜ್ಜ ಮಠ)ದ ಬಾಗಿಲದ ಕೊಂಡಿ ಮುರಿದು ಅಂದಾಜು ₹16 ಲಕ್ಷ ಮೌಲ್ಯದ 30 ಕೆಜಿಯ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಸಮೀಪದ ತಿಗಡಿ ಗ್ರಾಮದ ಹಿರೇಮಠದ ಶಿವಬಸಪ್ಪ ಅಜ್ಜನವರ ಮಠ (ಗದ್ದಗಿ ಅಜ್ಜ ಮಠ)ದ ಬಾಗಿಲದ ಕೊಂಡಿ ಮುರಿದು ಅಂದಾಜು ₹16 ಲಕ್ಷ ಮೌಲ್ಯದ 30 ಕೆಜಿಯ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾದ ಘಟನೆ ಶನಿವಾರ ರಾತ್ರಿ ನಡೆದಿದೆ.ದೇವಾಲಯದಲ್ಲಿನ ಬೆಳ್ಳಿಯ ಮೂರ್ತಿ, ನಂದಿ ಚಿತ್ರ, ಪಾದುಕೆ, ಗುಂಡಗಡಗಿ ಸೇರಿದಂತೆ ಬೆಳ್ಳಿಯ ಆಭರಣ ಕದ್ದು ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಬೆರಳುಚ್ಚು ತಜ್ಞರ ತಂಡ, ಶ್ವಾನ ದಳ ಭೇಟಿ ನೀಡಿ ಪರಿಶೀಲನೆ ನಡೆಸಿದವು.ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.