ಕಲ್ಬೆಟ್ಟದ ಸಾಲುಮರದ ತಿಮ್ಮಕ್ಕ ಪಕ್ಷಿಧಾಮದಲ್ಲಿ ರಾಷ್ಟ್ರೀಯ ಪಕ್ಷಿ ದಿನಾಚರಣೆ

| Published : Jan 08 2025, 12:18 AM IST

ಕಲ್ಬೆಟ್ಟದ ಸಾಲುಮರದ ತಿಮ್ಮಕ್ಕ ಪಕ್ಷಿಧಾಮದಲ್ಲಿ ರಾಷ್ಟ್ರೀಯ ಪಕ್ಷಿ ದಿನಾಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಿಗೆ ಜೀವ ವೈವಿಧ್ಯತೆಯಲ್ಲಿ ಪಕ್ಷಿಗಳ ಮಹತ್ವ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಫರ್ಧೆ

ಕನ್ನಡಪ್ರಭ ವಾರ್ತೆ ಹುಣಸೂರು

ತಾಲೂಕಿನ ಕಲ್ಬೆಟ್ಟದ ಸಾಲುಮರದ ತಿಮ್ಮಕ್ಕ ಪಕ್ಷಿಧಾಮದಲ್ಲಿ ಅರಣ್ಯ ಇಲಾಖೆ ಹಾಗೂ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಬಾಲಕರ ಪದವಿ ಪೂರ್ವ ಕಾಲೇಜು ಸಹಭಾಗಿತ್ವದಲ್ಲಿ ರಾಷ್ಟ್ರೀಯ ಪಕ್ಷಿ ದಿನ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಇಲಾಖೆಯ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಪಕ್ಷಿ ವೀಕ್ಷಣೆಗೆ ಸಹಕರಿಸಿ ಮಾರ್ಗದರ್ಶನ ನೀಡಿದರು. ನಂತರ ಎನ್.ಎಸ್.ಎಸ್. ವಿದ್ಯಾರ್ಥಿಗಳಿಗೆ ಜೀವ ವೈವಿಧ್ಯತೆಯಲ್ಲಿ ಪಕ್ಷಿಗಳ ಮಹತ್ವ ಕುರಿತು ರಂಗನತಿಟ್ಟಿನ ಸಿಬ್ಬಂದಿ ಪ್ರವೀಣ್ ಜೇವರ್ಗಿ ಉಪನ್ಯಾಸ ನೀಡಿದರು.

ಅಲ್ಲದೆ ವಿದ್ಯಾರ್ಥಿಗಳಿಗೆ ಜೀವ ವೈವಿಧ್ಯತೆಯಲ್ಲಿ ಪಕ್ಷಿಗಳ ಮಹತ್ವ ವಿಷಯದ ಕುರಿತು ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಫರ್ಧೆ ಏರ್ಪಡಿಸಿ, ವಿಜೇತರಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಬಹುಮಾನ ಮತ್ತು ಫಲಕ ವಿತರಿಸಿದರು.

ಅರಣ್ಯ ಇಲಾಖೆಯ ಆರ್.ಎಫ್.ಓ. ನಂದಕುಮಾರ್, ಇಲಾಖೆಯ ಸಿಬ್ಬಂದಿ ಹಾಗೂ ಎನ್.ಎಸ್. ಎಸ್. ಕಾರ್ಯಕ್ರಮಾಧಿಕಾರಿ ಸಿ. ದೇವರಾಜು, ಚಂದ್ರಶೇಖರ್ , ಸೋಮಶೇಖರ್, ಎನ್.ಎಸ್.ಎಸ್. ವಿದ್ಯಾರ್ಥಿಗಳು ಭಾಗವಹಿಸಿದ್ದರು.