ಮರಗಳನ್ನೇ ಮಕ್ಕಳಂತೆ ಬೆಳೆಸಿದ ತಿಮ್ಮಕ್ಕ

| Published : Nov 17 2025, 03:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಅಥಣಿ ಸಾಲುಮರದ ತಿಮ್ಮಕ್ಕ, ನಾಡಿನ ವೃಕ್ಷಮಾತೆ ಅವರ ನಿಧನ ಹಿನ್ನೆಲೆಯಲ್ಲಿ ಇಲ್ಲಿನ ಎಚ್.ಶಿವರಾಮೇಗೌಡ ಸಾರಥ್ಯದ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ವೃಕ್ಷಮಾತೆ ತಿಮ್ಮಕ್ಕನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಕನ್ನಡಪ್ರಭ ವಾರ್ತೆ ಅಥಣಿ

ಸಾಲುಮರದ ತಿಮ್ಮಕ್ಕ, ನಾಡಿನ ವೃಕ್ಷಮಾತೆ ಅವರ ನಿಧನ ಹಿನ್ನೆಲೆಯಲ್ಲಿ ಇಲ್ಲಿನ ಎಚ್.ಶಿವರಾಮೇಗೌಡ ಸಾರಥ್ಯದ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ವೃಕ್ಷಮಾತೆ ತಿಮ್ಮಕ್ಕನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿ ಶ್ರದ್ಧಾಂಜಲಿ ಅರ್ಪಿಸಿದರು.ಈ ವೇಳೆ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಣ್ಣಾಸಾಹೇಬ ತೆಲಸಂಗ ಮಾತನಾಡಿ, ಸಾಲುಮರದ ತಿಮ್ಮಕ್ಕನ ನಿಧನದಿಂದ ಪರಿಸರ ಲೋಕ ಅನಾಥವಾಗಿದೆ. ಅವರು ನೆಟ್ಟು ಪೋಷಿಸಿದ ಗಿಡಮರಗಳು ಮುಂದಿನ ಜನಾಂಗಕ್ಕೆ ಆಮ್ಲಜನಕ ನೀಡಲು ಸಹಕಾರಿಯಾಗಿದೆ. ಮಕ್ಕಳಿಲ್ಲ ಎಂದು ಕೊರಗದೆ ಸಾವಿರಾರು ಗಿಡಗಳನ್ನ ನೆಟ್ಟು ಅವುಗಳನ್ನೇ ತನ್ನ ಮಕ್ಕಳೆಂದು ಸಂರಕ್ಷಣೆ ಮಾಡಿದ ಮಹಾತಾಯಿ ಎಂದರು.ಈ ಸಂದರ್ಭದಲ್ಲಿ ಸಾಲುಮರದ ತಿಮ್ಮಕ್ಕನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನಾಚರಣೆ ಸಲ್ಲಿಸಲಾಯಿತು. ಈ ವೇಳೆ ಕರವೇ ತಾಲೂಕ ಘಟಕದ ಅಧ್ಯಕ್ಷ ಉದಯ ಮಾಕಾಣಿ, ಸಿದ್ದಪ್ಪ ಹಂಡಗಿ, ಶಂಕರ್ ಮಗದುಮ, ಜಗನ್ನಾಥ ಬಾಮನೆ, ಕುಮಾರ್ ಬಡಿಗೇರ, ವಿನಯಗೌಡ ಪಾಟೀಲ, ವಿಲಾಸರಾವ ಕುಲಕರ್ಣಿ, ಸುಕುಮಾರ ಕಾಂಬಳೆ, ಸಿದ್ದು ಮಾಳಿ, ಸಿರಾಜ್ ಸನದಿ, ಜಬ್ಬರ ಚಿಂಚಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಫೋಟೋ ಶೀರ್ಷಿಕೆ : ಅಥಣಿ ಪಟ್ಟಣದಲ್ಲಿ ಕರವೇ ಕಾರ್ಯಕರ್ತರು ಸಾಲುಮರದ ತಿಮ್ಮಕ್ಕನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಾರ್ವಜನಿಕರಿಗೆ ಸಸಿಗಳನ್ನು ವಿತರಿಸಿದರು.