ಬೇವೂರು ಬೆಟ್ಟದ ತಿಮ್ಮಪ್ಪಸ್ವಾಮಿ ಬ್ರಹ್ಮರಥೋತ್ಸವ, ಜಾತ್ರೆ ಸಂಪನ್ನ

| Published : Oct 06 2025, 01:00 AM IST

ಬೇವೂರು ಬೆಟ್ಟದ ತಿಮ್ಮಪ್ಪಸ್ವಾಮಿ ಬ್ರಹ್ಮರಥೋತ್ಸವ, ಜಾತ್ರೆ ಸಂಪನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಬೇವೂರಿನ ಬೆಟ್ಟದ ತಿಮ್ಮಪ್ಪಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆ ಮತ್ತು ಶ್ರದ್ಧಾಭಕ್ತಿಯಿಂದ ನೆರವೇರಿತು.

ಚನ್ನಪಟ್ಟಣ: ತಾಲೂಕಿನ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಬೇವೂರಿನ ಬೆಟ್ಟದ ತಿಮ್ಮಪ್ಪಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆ ಮತ್ತು ಶ್ರದ್ಧಾಭಕ್ತಿಯಿಂದ ನೆರವೇರಿತು.

ಬೆಳಗ್ಗೆ ೯.೩೦ರಿಂದ ೧೦.೩೦ರವರೆಗೆ ರಥಶಾಂತಿ ಪೂಜೆ ನಡೆಯಿತು. ತಮಟೆ, ನಗಾರಿ ವಾದ್ಯ ಪೂಜಾಕುಣಿತ, ವೀರಗಾಸೆ, ಗಾರುಡಿ ಗೊಂಬೆ ಕುಣಿತ, ರಥಕ್ಕೆ ಹೂವಿನ ಅಲಂಕಾರ, ಜಂಡೆ ಕುಣಿತದ ಸೇವೆಯೊಂದಿಗೆ ಮಧ್ಯಾಹ್ನ ೧೨.೩೦ರಿಂದ ೧.೪೦ರ ಶುಭ ಧನಸ್ಸು ಲಗ್ನದಲ್ಲಿ ಆರಂಭವಾದ ಬ್ರಹ್ಮರಥೋತ್ಸವಕ್ಕೆ ಶಾಸಕ ಯೋಗೇಶ್ವರ ಹಾಗೂ ತಹಸೀಲ್ದಾರ್ ಗಿರೀಶ್ ಚಾಲನೆ ನೀಡಿದರು.

ಬ್ರಹ್ಮರಥೋತ್ಸವದಲ್ಲಿ ಬೇವೂರು ಮಠದ ಸ್ವಾಮೀಜಿ ಸೇರಿದಂತೆ ಅನೇಕ ಗಣ್ಯರು ದೇವರ ದರ್ಶನ ಪಡೆದರು. ದೇವಾಲಯದ ಆಡಳಿತಿ ಮಂಡಳಿಯಿಂದ ಶಾಸಕ ಯೋಗೇಶ್ವರ್ ಅವರನ್ನು ಸನ್ಮಾನಿಸಲಾಯಿತು.

ರಥೋತ್ಸವದ ವೇಳೆ ದೇವರಿಗೆ ಜೈಕಾರ ಹಾಕಿದ ಭಕ್ತರು ಹೂ-ಹಣ್ಣು, ಜವನ ಎಸೆದು ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದರು. ಬ್ರಹ್ಮ ರಥೋತ್ಸವ ತರುವಾಯ ಮಧ್ಯಾಹ್ನ ೨ ಗಂಟೆಗೆ ಗಜೋತ್ಸವ, ೩ ಗಂಟೆಗೆ ಗರಡೋತ್ಸವ, ಸಂಜೆ ೬.೩೦ಕ್ಕೆ ಬೆಳ್ಳಿ ಪಲ್ಲಕ್ಕಿ ಉತ್ಸವ ಜರುಗಿದವು. ಬೇವೂರು ಗ್ರಾಮದ ಸಮಸ್ತ ಕುಂಬಾರ್ ಶೆಟ್ಟರಿಂದ ಅನ್ನಸಂತರ್ಪಣೆ, ಸಿಡಿಮದ್ದು ಸೇವೆ, ಶಯನೋತ್ಸವ, ತೋಮಾಲೆ ಸೇವೆ ಕೂಡ ನಡೆಯಿತು.

ಪೋಟೊ೪ಸಿಪಿಟಿ೨:

ಚನ್ನಪಟ್ಟಣ ತಾಲೂಕಿನ ಬೇವೂರಿನ ಬೆಟ್ಟದ ತಿಮ್ಮಪ್ಪಸ್ವಾಮಿ ಬ್ರಹ್ಮರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೇರವೇರಿತು.