ಸಾರಾಂಶ
ಅಕ್ರಮ ಗಣಿಗಾರಿಕೆ ಸರ್ವೇ ನಡೆಸಲು ಹಾಗೂ ಓವರ್ ಟಿಪ್ಪರ್ ಹಾವಳಿ ತಡೆಯಲು ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭರವಸೆ ನೀಡಿದರು.
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಅಕ್ರಮ ಗಣಿಗಾರಿಕೆ ಸರ್ವೇ ನಡೆಸಲು ಹಾಗೂ ಓವರ್ ಟಿಪ್ಪರ್ ಹಾವಳಿ ತಡೆಯಲು ಎಲ್ಲಾ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಭರವಸೆ ನೀಡಿದರು.ಪಟ್ಟಣದ ಪ್ರಜಾ ಸೌಧ ಕಚೇರಿ ಮುಂದೆ ಸಾಮೂಹಿಕ ನಾಯಕತ್ವದ ರೈತ ಸಂಘ ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ರೈತರ ಮನವಿ ಆಲಿಸಿ ಮಾತನಾಡಿದರು. ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದರೆ ಸರ್ವೇ ನಡೆಸಲು ಸೂಚನೆ ನೀಡುತ್ತೇನೆ. ಸವಾರರು ಕೂಡ ಹೆಲ್ಮೆಟ್ ಧರಿಸಿ ಬೈಕ್ ಚಲಾಯಿಸಬೇಕು. ಅಲ್ಲದೆ ಓವರ್ ಟಿಪ್ಪರ್ ಗಳ ಹಾವಳಿಗೆ ತಡೆಗೆ ಚಿಂತನೆ ನಡೆಸಿದ್ದೇನೆ. ಅಲ್ಲದೆ ಅಕ್ರಮವಾಗಿ ಹೆಚ್ಚು ಕಲ್ಲು ತೆಗೆದಿದ್ದರೆ ದಂಡ ಹಾಗೂ ಕೇಸು ಹಾಕುತ್ತಾರೆ. ಕೆಲವು ಲೀಸ್‌ದಾರರು ದಂಡ ಕಟ್ಟಲ್ಲ ಎಂದು ನ್ಯಾಯಾಲಯಕ್ಕೂ ಹೋಗಿದ್ದಾರೆ ಎಂದರು. ಡ್ರಿಂಕ್ ಆ್ಯಂಡ್ ಡ್ರೈವ್ ಹಾಗೂ ಹೆಲ್ಮೆಟ್ ಇಲ್ಲದೆ ಪೊಲೀಸರು ಹಿಡಿದಾಗ ನನಗೂ ಪೋನ್ ಹಾಕುತ್ತಾರೆ ಏನು ಮಾಡೋದು ಎಂದಾಗ ಪ್ರತಿಭಟನಾಕಾರರು ಶಾಸಕರಿಗೆ ಸಪೋರ್ಟ್ ಮಾಡಬೇಡಿ ಸರ್ ಎಂದು ಕೂಗಿದರು.
ರೈತ ಸಂಘದ ನಾಗಪ್ಪ, ಜಗದೀಶ್, ತಹಸೀಲ್ದಾರ್ ಟಿ.ರಮೇಶ ಬಾಬು, ಪುರಸಭೆ ಅಧ್ಯಕ್ಷ ಕಿರಣ್ ಗೌಡ ಇದ್ದರು.