ಪಟ್ಟಣದ ಎಲ್ಲಾ ಅಂಗನವಾಡಿಗಳನ್ನು ಒಗ್ಗೂಡಿಸಿ ಬಾಲ ಮೇಳ ನಡೆಸುವ ಚಿಂತನೆ: ಪ್ರಶಾಂತಶೆಟ್ಟಿ

| Published : Jan 07 2025, 12:15 AM IST

ಪಟ್ಟಣದ ಎಲ್ಲಾ ಅಂಗನವಾಡಿಗಳನ್ನು ಒಗ್ಗೂಡಿಸಿ ಬಾಲ ಮೇಳ ನಡೆಸುವ ಚಿಂತನೆ: ಪ್ರಶಾಂತಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ಪಟ್ಟಣ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಮಕ್ಕಳನ್ನು ಒಂದು ಗೂಡಿಸಿ, ಒಂದು ಅಂಗನವಾಡಿಯಲ್ಲಿ ಬಾಲ ಮೇಳ ಎಂಬ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಹೇಳಿದರು.

ಮೇದರಬೀದಿ ಅಂಗನವಾಡಿಯಲ್ಲಿ ಬಾಲ ಮೇಳ ಕಾರ್ಯಕ್ರಮ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಪಟ್ಟಣ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಮಕ್ಕಳನ್ನು ಒಂದು ಗೂಡಿಸಿ, ಒಂದು ಅಂಗನವಾಡಿಯಲ್ಲಿ ಬಾಲ ಮೇಳ ಎಂಬ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್.ಎಲ್.ಶೆಟ್ಟಿ ಹೇಳಿದರು.

ಶನಿವಾರ ಪಟ್ಟಣದ ಮೇದರಬೀದಿ ಅಂಗನವಾಡಿ ಕೇಂದ್ರದಲ್ಲಿ ನಡೆದ ಬಾಲಮೇಳದ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಮಕ್ಕಳಿಗೂ ಪ್ರತಿಭೆಗಳನ್ನು ಅನಾವರಣಕ್ಕೆ ವೇದಿಕೆ ದೊರಯುತ್ತವೆ. ಆದರೆ, ಅಂಗನವಾಡಿ ಮಕ್ಕಳಿಗೆ ಈ ಸೌಲಭ್ಯ ವಿಲ್ಲ ಹಾಗಾಗಿ ಪ.ಪಂ.ಯಿಂದ ಬಾಲ ಮೇಳ ಕಾರ್ಯಕ್ರಮದ ಬಗ್ಗೆ ತೀರ್ಮಾನ ಕೈಗೊಂಡು ಒಂದು ಸುಂದರ ಕಾರ್ಯಕ್ರಮ ನಡೆಸಲಾಗುವುದು. ಇಲ್ಲಿನ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಬರುತ್ತಿರುವುದರಿಂದ ಮೇದರಬೀದಿ ಅಂಗನವಾಡಿ ಕೇಂದ್ರಕ್ಕೆ ಉತ್ತಮ ಹೆಸರಿದೆ. ಮುಂದೆಯೂ ಸಹ ಇದೇ ರೀತಿಯಲ್ಲಿ ಮುಂದುವರಿಯಲಿ ಎಂದು ಹಾರೈಸಿದರು.ಸಿಡಿಪಿಒ ಇಲಾಖೆ ಮೇಲ್ವಿಚಾರಕಿ ಕಾವ್ಯಶ್ರೀ ಮಾತನಾಡಿ, ಕೋವಿಡ್ ಬರುವ ಹಿಂದೆ ಸರ್ಕಾರ ಪ್ರತಿ ವರ್ಷ ನವಂಬರ್ ತಿಂಗಳಲ್ಲಿ ಅಂಗನವಾಡಿ ಮಕ್ಕಳಿಗೆ ಬಾಲ ಮೇಳ ಆಯೋಜಿಸುತ್ತಾ ಬಂದಿತ್ತು. ಆದರೆ, ಕೋವಿಡ್ ನಂತರ ಈ ಕಾರ್ಯಕ್ರಮ ಸ್ಥಗಿತಗೊಂಡಿದೆ. ಈ ಕಾರ್ಯಕ್ರಮಕ್ಕೆ ಸರ್ಕಾರ ಯಾವುದೇ ಅನುದಾನ ನೀಡುವುದಿಲ್ಲ. ಆದರೆ, ಇಲ್ಲಿನ ಅಂಗನವಾಡಿ ಕಾರ್ಯಕರ್ತೆಯರು ತನ್ನ ಸ್ವಂತ ಹಣದೊಂದಿಗೆ, ದಾನಿಗಳ ಸಹಕಾರದಿಂದ ಇರುವಷ್ಟು ಅಂಗನವಾಡಿ ಜಾಗದಲ್ಲಿ ಅನುದಾನ ಕ್ರೋಢೀಕರಣ ಮಾಡಿ ಬಾಲಮೇಳ ಮಾಡಿರುವುದು ನಿಜಕ್ಕೂ ಶ್ಲಾಘನೀಯ. ಈ ಅಂಗನವಾಡಿ ಕೇಂದ್ರ ಇತರ ಅಂಗನವಾಡಿ ಕೇಂದ್ರಗಳಿಗೆ ಮಾದರಿ. ಮುಂದೆ ತಾಲೂಕು ಮಟ್ಟದ ಬಾಲಮೇಳ ಆಯೋಜಿಸುವ ಬಗ್ಗೆಯೂ ಚಿಂತಿಸಲಾಗುವುದು ಎಂದರು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರಯ್ಯಬಾನು ಉದ್ಘಾಟಿಸಿ ಮಾತನಾಡಿ, ಅಂಗನವಾಡಿಯಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಒಂದು ಪುಣ್ಯದ ಕೆಲಸ. ಪೋಷಕರು ತಮ್ಮ ಪುಟಾಣಿ ಮಕ್ಕಳ ಬಾಲ ಪ್ರತಿಭೆ ನೋಡಲೂ ಸಹ ಸಹಕಾರಿ ಎಂದರು.ಬಾಲ ಮೇಳದಲ್ಲಿ ಮೇದರಬೀದಿ ಅಂಗನವಾಡಿ ಕೇಂದ್ರ ಹಾಗೂ ರಾಘವೇಂದ್ರ ಬಡವಾಣೆ ಅಂಗನವಾಡಿ ಮಕ್ಕಳು ಪಾಲ್ಗೊಂಡಿದ್ದರು. ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಿ, ವಿಜೇತರಾದ ಪುಟಾಣಿಗಳಿಗೆ ಬಹುಮಾನ ವಿತರಿಸಲಾಯಿತು.ಇದೇ ಕಾರ್ಯಕ್ರಮದಲ್ಲಿ ಸ್ತ್ರೀ ಶಕ್ತಿ ಸಂಘದ ಸದಸ್ಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.ಕಾರ್ಯಕ್ರಮದಲ್ಲಿ ದಾನಿಗಳಾದ ಮೀರಾ ಸುಬ್ರಮಣ್ಯಶೆಟ್ಟಿ, ಅಂಗನವಾಡಿ ಕಾರ್ಯಕರ್ತೆಯರಾದ ಅನಿತಾ, ಶೈಲಾ, ಜಯಂತಿ, ಅಂಗನವಾಡಿ ಸಹಾಯಕಿ ಆಶಾ ಇದ್ದರು. ಆಶ್ರಿತ ಸ್ವಾಗತಿಸಿದರು. ಅನಿತ ನಿರೂಪಿಸಿದರು.