ಸರ್ಕಾರಿ ಶಾಲೆಗಳಲ್ಲಿ ಶೇ.30 ಶಿಕ್ಷಕರ ಕೊರತೆ: ಬಿ.ಎನ್.ಬಚ್ಚೇಗೌಡ

| Published : Oct 27 2024, 02:34 AM IST

ಸಾರಾಂಶ

ತಾಲೂಕಿನಲ್ಲಿ ಶೇ.30ರಷ್ಟು ಶಿಕ್ಷಕರ ಕೊರತೆ ಇದೆ, ಸರ್ಕಾರ ಕೂಡಲೇ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಬೇಕು ಹಾಗೂ ಶಾಸಕ ಶರತ್ ಬಚ್ಚೇಗೌಡ ಸದನದಲ್ಲಿ ಶಿಕ್ಷಕರ ನೇಮಕಾತಿ ಬಗ್ಗೆ ಧ್ವನಿ ಎತ್ತಬೇಕು ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು. ಹೊಸಕೋಟೆಯಲ್ಲಿ ಶಾಲಾ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.

₹1.25 ಕೋಟಿ ವೆಚ್ಚದ 6 ಕೊಠಡಿ ಉದ್ಘಾಟನೆ ಕನ್ನಡಪ್ರಭ ವಾರ್ತೆ ಹೊಸಕೋಟೆ

ರಾಜ್ಯ ಸರ್ಕಾರಿ ಶಾಲೆಗಳಲ್ಲಿ ಶೇ. 15ಕ್ಕೂ ಹೆಚ್ಚು ಶಿಕ್ಷಕರ ಕೊರತೆಯಿದ್ದು, ತಾಲೂಕಿನಲ್ಲಿ ಶೇ.30ರಷ್ಟು ಶಿಕ್ಷಕರ ಕೊರತೆ ಇದೆ, ಸರ್ಕಾರ ಕೂಡಲೇ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಬೇಕು ಹಾಗೂ ಶಾಸಕ ಶರತ್ ಬಚ್ಚೇಗೌಡ ಸದನದಲ್ಲಿ ಶಿಕ್ಷಕರ ನೇಮಕಾತಿ ಬಗ್ಗೆ ಧ್ವನಿ ಎತ್ತಬೇಕು ಎಂದು ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ತಿಳಿಸಿದರು.

ನಗರದ ಜಿಕೆಬಿಎಂಎಸ್ ಶಾಲಾ ಆವರಣದಲ್ಲಿ ಬಿ.ಎನ್.ಬಚ್ಚೇಗೌಡ ಶಾಲಾ ಸಂಕೀರ್ಣ ಉದ್ಘಾಟಿಸಿ ಮಾತನಾಡಿ, ಆರ್ಡನ್ ಸಿಟಿ ಯೂನಿವರ್ಸಿಟಿಯ ವೈಸ್ ಚಾನ್ಸಲರ್ ಡಾ.ಜೋಸೆಪ್ ವಿಜಿ 1.25 ಕೋಟಿ ರು. ವೆಚ್ಚದಲ್ಲಿ ನನ್ನ ಹೆಸರಿನ ಶಾಲಾ ಸಂಕೀರ್ಣ ಕೊಡುಗೆಯಾಗಿ ನೀಡಿದ್ದಾರೆ. 1925ರಲ್ಲಿ ಚಟೆ ಬಸಪ್ಪ ೫ ಎಕರೆ ಸ್ವಂತ ಜಾಗ ಸರ್ಕಾರಿ ಶಾಲಾ ನಿರ್ಮಾಣಕ್ಕೆ ದಾನವಾಗಿ ನೀಡಿದ್ದರು. ಅಂದು ಶುರುವಾದ ಈ ಶಾಲೆ ಮುಂದಿನ 2025ರಲ್ಲಿ ಶತಮಾನೋತ್ಸವ ಆಚರಣೆ ಮಾಡಿಕೊಳ್ಳಲಿದೆ, ಇದೇ ಶಾಲೆಯಲ್ಲಿ ಕಲಿತ ನಾನು ವಕೀಲನಾಗಿ ರಾಜಕಾರಣಿಯಾಗಿ ಇಂದು ರಾಜಕೀಯದಿಂದ ನಿವೃತ್ತಿಯಾಗಿದ್ದೇನೆ. ಶಿಕ್ಷಣ ಎಂದೂ ಕಳೆದು ಹೋಗುವ ಆಸ್ತಿಯಲ್ಲ. ಇಂದಿನ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದರು.

ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಹಾಗೂ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕು. ಕನ್ನಡ ಮಾಧ್ಯಮದ ಜತೆ ಆಂಗ್ಲ ಮಾದ್ಯಮ ಶಾಲೆಗಳ ಸಂಖ್ಯೆ ಹೆಚ್ಚಿಸಿದರೆ ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳ ಸಂಖೈ ಹೆಚ್ಚುತ್ತದೆ ಎಂದರು.

ಗಾರ್ಡನ್ ಸಿಟಿ ಕಾಲೇಜಿನ ಕುಲಪತಿ ಡಾ ಜೋಸಪ್ ವಿಜಿ, ಶಾಲಾ ಅಭಿವೃದ್ದಿ ಸಮಿತಿಯ ಗೌರವಾಧ್ಯಕ್ಷ ಡಿ.ಎಸ್.ರಾಜ್ ಕುಮಾರ್, ಬಿಎಂಆರ್‌ಡಿಎ ಅಧ್ಯಕ್ಷ ಕೇಶವ್ ಮೂರ್ತಿ, ನಿರ್ದೇಶಕ ಡಾ.ಸುಬ್ಬರಾಜ್, ಗಾರ್ಡನ್ ಸಿಟಿ ಯೂನಿವರ್ಸಿಟಿಯ ನಿರ್ದೇಶಕ ಕ್ರಿಷ್ಟೋ ಜೋಸೆಪ್, ನಗರಸಭೆ ಸದಸ್ಯೆ ಗಾಯತ್ರಿ, ನಾಮಿನಿ ಸದಸ್ಯರಾದ ರಮಾ, ಅಂಜು, ಸ್ಥಳ ದಾನಿಗಳಾದ ಶಿವಶಂಕರ್, ಟೌನ್ ಬ್ಯಾಂಕ್ ನಿರ್ದೇಶಕ ಮೋಹನ್, ಬಿಇಒ ಪಧ್ಬನಾಬ್, ಇಒ ನಾರಾಯಣಸ್ವಾಮಿ, ಮುಖಂಡರಾದ ವಾಸುದೇವಯ್ಯ, ಮುನಿಯಪ್ಪ, ರೋಟರಿ ಅಧ್ಯಕ್ಷ ಮುನಿರಾಜ್ ಹಾಜರಿದ್ದರು.