ಧಾರ್ಮಿಕ ಆಚರಣೆಗಳಿಂದಾಗಿ ಈ ಕ್ಷೇತ್ರ ಪುಣ್ಯ ಭೂಮಿಯಾಗಿದೆ

| N/A | Published : Sep 01 2025, 01:04 AM IST

ಧಾರ್ಮಿಕ ಆಚರಣೆಗಳಿಂದಾಗಿ ಈ ಕ್ಷೇತ್ರ ಪುಣ್ಯ ಭೂಮಿಯಾಗಿದೆ
Share this Article
  • FB
  • TW
  • Linkdin
  • Email

ಸಾರಾಂಶ

ಗುರುಭಕ್ತಿ, ಧಾರ್ಮಿಕ ಆಚರಣೆ, ಸಂಸ್ಕೃತಿ, ಪರಂಪರೆಗಳಿಂದಾಗಿ, ಸಾಧು ಸಂತರಿಂದಾಗಿ ನಮ್ಮ ಭೂಮಿ ಅತ್ಯಂತ ಪವಿತ್ರವಾಗಿದೆ. ಇಂತಹ ನೆಲದಲ್ಲಿ ಬದುಕಿ, ಬಾಳುವುದೇ ಪುಣ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

  ಬೆಳಗಾವಿ : ಗುರುಭಕ್ತಿ, ಧಾರ್ಮಿಕ ಆಚರಣೆ, ಸಂಸ್ಕೃತಿ, ಪರಂಪರೆಗಳಿಂದಾಗಿ, ಸಾಧು ಸಂತರಿಂದಾಗಿ ನಮ್ಮ ಭೂಮಿ ಅತ್ಯಂತ ಪವಿತ್ರವಾಗಿದೆ. ಇಂತಹ ನೆಲದಲ್ಲಿ ಬದುಕಿ, ಬಾಳುವುದೇ ಪುಣ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ತಾರಿಹಾಳ ಗ್ರಾಮದ ಅಡವಿ ಸಿದ್ದೇಶ್ವರ ಮಠದಲ್ಲಿ ಶನಿವಾರ ಸಂಜೆ ತಾರಿಹಾಳ ಉತ್ಸವ-2025ರ ಮೌನ ಅನುಷ್ಠಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಶ್ರಾವಣ ಮಾಸದ ನಿಮಿತ್ತ ಲೋಕ ಕಲ್ಯಾಣಾರ್ಥ, ಭಕ್ತರ ಹಿತಕ್ಕಾಗಿ ಉತ್ತರಾಖಂಡದ ದೇವಭೂಮಿ ಹಿಮಾಲಯದಲ್ಲಿ ಪೂಜ್ಯ ಅಡವೀಶ್ವರ ದೇವರು ಒಂದು ತಿಂಗಳ ಮೌನ ಅನುಷ್ಠಾನ ಕೈಗೊಂಡ ಪ್ರಯುಕ್ತ ನಡೆದ ಪ್ರವಚನ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಸಂಪ್ರದಾಯ ಹಿಂದಿನಿಂದ ನಡೆದು ಬಂದಿದೆ. 

ನಮ್ಮ ಗ್ರಾಮೀಣ ಕ್ಷೇತ್ರ ಸಜ್ಜನರಿಂದಾಗಿ, ಮಠಾಧೀಶರಿಂದಾಗಿ, ನೂರಾರು ಮಂದಿರಗಳಿಂದಾಗಿ ಪುಣ್ಯ ಕ್ಷೇತ್ರವಾಗಿದೆ. ನಿಮ್ಮೆಲ್ಲರ ಸಹಕಾರದಿಂದಾಗಿ ನಾನು ರಾಜ್ಯದಲ್ಲಿ ಮಂತ್ರಿಯಾಗಿರುವೆ. ರಾಜ್ಯದೆಲ್ಲೆಡೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೆಸರನ್ನು ಬೆಳಗುವ ಅವಕಾಶ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆ ಮಾಡುವ ಭಾಗ್ಯ ನನ್ನದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಮುರುಘೇಂದ್ರ ಮಹಾಸ್ವಾಮಿಗಳು, ಮುನವಳ್ಳಿ ಸೋಮಶೇಖರ ಮಠದ ಪ್ರಭುನೀಲಕಂಠ ಮಹಾಸ್ವಾಮಿಗಳು, ಮೈಸೂರಿನ ನಿರಂಜನ ದೇವರು, ಕಲಬುರ್ಗಿ ಮೇಳಕುಂದದ ಶಶಿಕುಮಾರ್ ದೇವರು, ನಿರುಪಾದಿ ದೇವರು, ಗುಳೇದಗುಡ್ಡದ ರೇವಣಸಿದ್ಧೇಶ್ವರ ದೇವರು, ಬೈಲವಾಡದ ಶಂಕರಲಿಂಗ ದೇವರು, ಗದಗದ ವೇದಮೂರ್ತಿ ಸದಾನಂದ ಶಾಸ್ತ್ರೀಜಿ, ಸೋಮನಾಳದ ಶರಣಬಸವ ಹಿರೇಮಠ, ಪಂಚಾಕ್ಷರಿ ಹೂಗಾರ, ತಾರಿಹಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಭಾಗವಹಿಸಿದ್ದರು.

 ಗುರುಭಕ್ತಿ, ಧಾರ್ಮಿಕ ಆಚರಣೆ, ಸಂಸ್ಕೃತಿ, ಪರಂಪರೆಗಳಿಂದಾಗಿ, ಸಾಧು ಸಂತರಿಂದಾಗಿ ನಮ್ಮ ಭೂಮಿ ಅತ್ಯಂತ ಪವಿತ್ರವಾಗಿದೆ. ಇಂತಹ ನೆಲದಲ್ಲಿ ಬದುಕಿ, ಬಾಳುವುದೇ ಪುಣ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

Read more Articles on