ಕೃತಿ ಓದುಗರಿಗೆ ಚಿಂತನೆಗೆ ತರುವ ಜೊತೆಗೆ ಜೀವನದ ನೈತಿಕ ಮತ್ತು ತತ್ತ್ವಮೂಲಕ ಪಾಠ
ಕನ್ನಡಪ್ರಭ ವಾರ್ತೆ ಮೈಸೂರು
ಕಾಶಿಗೌ ಅವರ ಹೊಸ ಸಾಹಿತ್ಯ ಕೃತಿ ಮಸ್ತಕ ಅಸ್ತು, ಪುಸ್ತಕ ವಸ್ತು ಇತ್ತೀಚೆಗೆ ಹಸ್ತ ಬಿಡುಗಡೆಗೊಂಡಿದ್ದು, ವಿಶೇಷವಾಗಿ ಪುಟ್ಟ ಬಾಲಕ ಯಶ್ವಿನ್ ಕುಮಾರ್ ನೊಂದಿಗೆ ಈ ಸಂವಾದ ನಡೆಯಿತು.ಕೃತಿಯ ರಚನಾಕಾರರಾದ ಕಾಶಿಗೌ, ಕೆ.ಎಸ್. ಪ್ರಮೋದ್ ಕುಮಾರ್, ಅರ್ಚನಾ ಪ್ರಮೋದ್ ಕುಮಾರ್ ಮತ್ತು ರೇಣುಕಾ ಶಿವೇಗೌಡ, ಎ. ಗಗನ್ ಕುಮಾರ್ ಇದ್ದರು.
ಕೃತಿಯ ಕುರಿತು ಉಪನ್ಯಾಸಕ ಆನಂದ ಮಾತನಾಡಿ, ಈ ಪುಸ್ತಕವು ಯುವ ಪಾಠಕರಿಗೆ ಶ್ರದ್ಧೆ, ಜ್ಞಾನ ಮತ್ತು ಜೀವನದ ಮಹತ್ವವನ್ನು ತಿಳಿಸುವ ಮಹತ್ವಪೂರ್ಣ ಸಾಧನೆ. ಕೃತಿ ಓದುಗರಿಗೆ ಚಿಂತನೆಗೆ ತರುವ ಜೊತೆಗೆ ಜೀವನದ ನೈತಿಕ ಮತ್ತು ತತ್ತ್ವಮೂಲಕ ಪಾಠ ನೀಡಿದ್ದಾರೆ ಎಂದರು.