ದೃಷ್ಟಿ ವಿಶೇಷಚೇತನರು ಪ್ಯಾಕೇಜಿಂಗ್‌ಕಾರಣದಿಂದ ನಾನಾ ತೊಂದರೆ ಎದುರಿಸುತ್ತಿದ್ದಾರೆ
ಕನ್ನಡಪ್ರಭ ವಾರ್ತೆ ಮೈಸೂರು
ಔಷಧಗಳ ಕುರಿತು ಮಾಹಿತಿ ನೀಡುವ ಕ್ಯೂ ಆರ್‌ಕೋಡ್‌ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ಗುಂಡೂರಾವ್ ತಿಳಿಸಿದರುನಗರದ ಜೆಎಸ್‌ಎಸ್‌ಫಾರ್ಮಸಿ ಕಾಲೇಜಿನಲ್ಲಿ ಜೆಎಸ್‌ಎಸ್‌ಐಎಚ್‌ಎಆರ್‌ಜಪಾನ್- ಭಾರತ ಸಹಯೋಗದಲ್ಲಿ ಜಿಕಾ ಬೆಂಬಲಿತ ಇಂಪ್ಯಾಕ್ಟ್‌ವಿಐಪಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಯಾವ ಔಷಧ ಯಾವುದಕ್ಕೆ ಉಪಯೋಗ ಎಂಬುದನ್ನು ಅಂಧರಿಗೆ ತಿಳಿಸಿಕೊಡಲು ಕ್ಯುಆರ್. ಕೋಡ್‌ಆಧಾರಿತ ವ್ಯವಸ್ಥೆ ಜಾರಿಗೊಳಿಸುವ ಸಂಬಂಧ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಇಂದರಿಂದ ದೃಷ್ಟಿದೋಷವುಳ್ಳವರಿಗೆ ನೆರವಾಗುತ್ತದೆ. ಅವರು ಔಷಧವನ್ನು ಸುರಕ್ಷಿತವಾಗಿ ಬಳಸಲು ನೆರವಾಗುತ್ತದೆ ಎಂದರು.
ದೃಷ್ಟಿ ವಿಶೇಷಚೇತನರು ಪ್ಯಾಕೇಜಿಂಗ್‌ಕಾರಣದಿಂದ ನಾನಾ ತೊಂದರೆ ಎದುರಿಸುತ್ತಿದ್ದಾರೆ. ಔಷಧಿ ಲೇಬಲ್‌ಗಳು, ಸೂಚನೆಗಳು ಮತ್ತು ಔಷಧಿ ಪ್ಯಾಕ್ ಮೇಲೆ ಅದರ ಮಾಹಿತಿವುಳ್ಳ ಕ್ಯುಆರ್ ಕೋಡ್‌ಮುದ್ರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಆಗುತ್ತಿರುವ ಚರ್ಚೆ ಅಗತ್ಯ ಮತ್ತು ಅನಿವಾರ್ಯ. ಇತ್ತೀಚೆಗೆ ಎಲ್ಲೆಡೆ ಕ್ಯುಆರ್‌ಕೋಡ್‌ವ್ಯವಸ್ಥೆ ಇರವುದರಿಂದ ಔಷಧಿಗೂ ಅಳವಡಿಸಿದರೆ ಸೂಕ್ತ ಎಂದು ಅವರು ಹೇಳಿದರು.ಕಾಲೇಜಿನ ಹರ್ಷ ವಾತನಾಡಿದರು.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಎಚ್. ಬಸವನಗೌಡಪ್ಪ, ಜಪಾನ್ ನ ಎಕ್ಸ್‌ಪೋರ್ಟ್, ಜಪಾನ್ ಇಂಕ್ ಸಂಸ್ಥೆ ಪ್ರತಿನಿಧಿಗಳಾದ ಟೊಕುಹಿರೊ ಅರಕಾವಾ, ಡೆಲಾಯಿಟ್ ತೊವಾತ್ಸು, ಜೋಟಾರೋ ಸುನಹಾರಾ, ಕೆಂಟಾ ಮಿಾಂಮೊಟೊ ಇತರರು ಇದ್ದರು.---
ಕೋಟ್ಈ ಯೋಜನೆಯಡಿ ದೃಷ್ಟಿಮಾಂಧ್ಯರಿಗೆ ಲಭ್ಯ ತಂತ್ರಜ್ಞಾನಗಳ ಮೂಲಕ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶವಿದೆ. ಜಪಾನ್ ನಲ್ಲಿ ಈ ತಂತ್ರಜ್ಞಾನ ಬಳಕೆ ಆರಂಭವಾಗಿದೆ. ಭಾರತಕ್ಕೂ ಈ ಸೇವೆ ಒದಗಿಸುವ ಉದ್ದೇಶ ಇದೆ. ಭಾರತದಲ್ಲಿ ದೃಷ್ಟಿವಿಶೇಷಚೇತನರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಅವರಿಗೆ ಅವರ ಭಾಷೆಯಲ್ಲೇ ಸೇವೆ ಒದಗಿಸಲು ಈ ತಂತ್ರಜ್ಞಾನ ನೆರವಾಗಲಿದೆ.
- ಬ್ರಿಟನಿ ಪಾರ್ಟಿನ್, ಜಪಾನ್ ಪ್ರತಿನಿಧಿ.