ಈ ಬಾರಿಯ ಚುನಾವಣೆ ತಪಸ್ಸು: ಬಿ.ವೈ.ರಾಘವೇಂದ್ರ

| Published : Mar 26 2024, 01:17 AM IST

ಸಾರಾಂಶ

ಈ ಬಾರಿಯ ಚುನಾವಣೆಯ ಒಂದು ತಪ್ಪಸ್ಸಿನಂತಿದ್ದು, ಅದನ್ನು ಸಾಧಿಸುವ ಕೆಲಸ ಕಾರ್ಯಕರ್ತರ ಹೊಣೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಹೊಸನಗರ: ಈ ಬಾರಿಯ ಚುನಾವಣೆಯ ಒಂದು ತಪ್ಪಸ್ಸಿನಂತಿದ್ದು, ಅದನ್ನು ಸಾಧಿಸುವ ಕೆಲಸ ಕಾರ್ಯಕರ್ತರ ಹೊಣೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಇಲ್ಲಿನ ಬಸ್ ನಿಲ್ದಾಣ ಸಮೀಪದ ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರ 10 ವರ್ಷದ ಸಾಧನೆ ಹಾಗೂ ತಾವು ಇಲ್ಲಿಯ ತನಕ ಮಾಡಿರುವ ಅಭಿವೃದ್ಧಿ ಕೆಲಸದ ಮೇಲೆ ಮತ ಯಾಚನೆ ಮಾಡುತ್ತಿದ್ದೇವೆ ಎಂದರು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ತಮ್ಮದು ಎಂದು ರಾಜ್ಯಸರ್ಕಾರ ಹೈಜಾಕ್ ಮಾಡುತ್ತಿದೆ ಎಂದು ದೂರಿದರು. ರಾಜ್ಯ ಸರ್ಕಾರವು ‘ಗ್ಯಾರೆಂಟಿ’ ಮಂತ್ರ ಹಿಡಿದು ಜಪ ಮಾಡುತ್ತಿದ್ದಾರೆ. ಇದು ಬಹುಕಾಲ ಉಳಿಯಲಾರದು. ಆದರೆ ರಾಜ್ಯದ ಖಜಾನೆ ಖಾಲಿಯಾಗಿದೆ. ಇದರ ಫಲವಾಗಿ ಅಭಿವೃದ್ಧಿ ಮರೀಚಿಕೆ ಆಗಿದೆ ಎಂದು ಆರೋಪಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಕಾರ್ಯಕರ್ತರು ಹೊಂದಾಣಿಕೆ ಮಾಡಿಕೊಂಡು ಚುನಾವಣೆ ಎದುರಿಸಬೇಕು ಎಂದು ಕರೆ ನೀಡಿದರು.

ಜಾತಿ, ಧರ್ಮದ ಹೆಸರಿನಲ್ಲಿ ಮತಯಾಚನೆ ಮಾಡುವ ಕಾಲ ಮುಗಿದು ಹೋಗಿದೆ. ಕೇವಲ ಅಭಿವೃದ್ಧಿ ಮಂತ್ರದಿಂದ ಮತ ಕೇಳುತ್ತಿದ್ದೇವೆ ಎಂದರು.

ಈ ವೇಳೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ, ಬಿ.ಸ್ವಾಮಿರಾವ್, ಜಿಲ್ಲಾಧ್ಯಕ್ಷ ಮೇಘರಾಜ್, ತಾಲೂಕು ಅಧ್ಯಕ್ಷ ಸುಬ್ರಹ್ಮಣ್ಯ, ಜೆಡಿಎಸ್ ತಾಲೂಕು ಅಧ್ಯಕ್ಷ ವರ್ತೇಶ್, ಪ್ರಮುಖರಾದ ದೇವಾನಂದ್, ಗಾಯತ್ರಿ ಮಲ್ಲಪ್ಪ, ಮಂಗಳಾ, ಮಂಡಾನಿ ಮಹೋನ್, ಎಂ.ವಿ.ಜಯರಾಮ್ ಸುಮತಿ ಪೂಜಾರಿ ಮತ್ತಿತರರು ಇದ್ದರು.