ಬೀದರ್‌ನ ಈ ಮಹಿಳೆ ಹೆಸರೇ ‘ಕನ್ನಡಪ್ರಭ’! ಉಳಿದ ಮಕ್ಕಳ ಹೆಸರು ವಿಭಿನ್ನ

| N/A | Published : Jul 20 2025, 01:21 AM IST / Updated: Jul 20 2025, 09:14 AM IST

Kannadaprabha
ಬೀದರ್‌ನ ಈ ಮಹಿಳೆ ಹೆಸರೇ ‘ಕನ್ನಡಪ್ರಭ’! ಉಳಿದ ಮಕ್ಕಳ ಹೆಸರು ವಿಭಿನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಪತ್ರಿಕಾ ರಂಗದಲ್ಲಿ ತನ್ನದೆಯಾದ ವಿಶಿಷ್ಟ ಸ್ಥಾನ ಪಡೆದುಕೊಂಡು ನಾಡು, ನುಡಿ, ಜಲ ಹೀಗೆ ಕನ್ನಡಿಗರ ಮನೆ ಮಾತಾಗಿರುವ ‘ಕನ್ನಡಪ್ರಭ’ ದಿನ ಪತ್ರಿಕೆ ಹೆಸರನ್ನೇ ಪೋಷಕರು ತಮ್ಮ ಮಗಳಿಗೆ ನಾಮಕರಣ ಮಾಡಿರುವ ಸಂತಸದ ಸುದ್ದಿ 43 ವರ್ಷಗಳ ಬಳಿಕ ಬೆಳಕಿಗೆ ಬಂದಿದೆ.

ಅಪ್ಪಾರಾವ್‌ ಸೌದಿ

 ಬೀದರ್ :  ಕನ್ನಡ ಪತ್ರಿಕಾ ರಂಗದಲ್ಲಿ ತನ್ನದೆಯಾದ ವಿಶಿಷ್ಟ ಸ್ಥಾನ ಪಡೆದುಕೊಂಡು ನಾಡು, ನುಡಿ, ಜಲ ಹೀಗೆ ಕನ್ನಡಿಗರ ಮನೆ ಮಾತಾಗಿರುವ ‘ಕನ್ನಡಪ್ರಭ’ ದಿನ ಪತ್ರಿಕೆ ಹೆಸರನ್ನೇ ಪೋಷಕರು ತಮ್ಮ ಮಗಳಿಗೆ ನಾಮಕರಣ ಮಾಡಿರುವ ಸಂತಸದ ಸುದ್ದಿ 43 ವರ್ಷಗಳ ಬಳಿಕ ಬೆಳಕಿಗೆ ಬಂದಿದೆ.ನಗರದ ಹಾರೂರಗೇರಿ ನಿವಾಸಿ ಹಿರಿಯ ಸಾಹಿತಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಂ.ಕಾಶಿನಾಥ ಗವಾಯಿ ಅವರು ತಮ್ಮ ಮಗಳಿಗೆ ‘ಕನ್ನಡಪ್ರಭ’ ಎಂದು ನಾಮಕರಣ ಮಾಡಿದ್ದಾರೆ. ಅಪ್ಪಟ ಕನ್ನಡಾಭಿಮಾನಿಯಾದ ಕಾಶಿನಾಥ ಗವಾಯಿ ಹಾಗೂ ಅವರ ಪತ್ನಿ ಮಾಯಾದೇವಿ ದಂಪತಿಗೆ 7 ಜನ ಹೆಣ್ಮಕ್ಕಳಿದ್ದು, ಆ ಪೈಕಿ 1982ರ ನ.1ರ ರಾಜ್ಯೋತ್ಸವ ದಿನದಂದು ಜನಿಸಿದ್ದ 5ನೇ ಮಗಳಿಗೆ ‘ಕನ್ನಡಪ್ರಭ’ ಎಂದು ನಾಮಕರಣ ಮಾಡಿದ್ದರು. ಕನ್ನಡ ನಾಡಿನ ಮೇಲಿನ ಪ್ರೀತಿ, ಕನ್ನಡಪ್ರಭದ ಮೇಲಿನ ಅಭಿಮಾನದ ಹಿನ್ನೆಲೆಯಲ್ಲಿ ಅವರು ಹೆಮ್ಮೆಯಿಂದ ತನ್ನ‌ ಮಗಳಿಗೆ ಹೆಸರಿಟ್ಟಿದ್ದಾರೆ.

ಕನ್ನಡಪ್ರಭಳಿಗೆ 3 ಮಕ್ಕಳು:

ಸ್ನಾತಕೊತ್ತರ ಪಧವೀಧರೆಯಾದ, 43 ವರ್ಷದ ಕನ್ನಡಪ್ರಭ ಅವರು ಬೀದರ್ ತಾಲೂಕಿನ ಕಮಠಾಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸ್ವ-ಸಹಾಯ ಸಂಘದ ಮೇಲ್ವಿಚಾರಕರಾಗಿದ್ದಾರೆ. ಬಸವಕಲ್ಯಾಣ ತಾಲೂಕಿನ ಘಾಟಹಿಪ್ಪರ್ಗಾ ಗ್ರಾಮದ ಯುವಕನೊಂದಿಗೆ ವಿವಾಹವಾಗಿದ್ದು, 3 ಜನ ಮಕ್ಕಳಿದ್ದಾರೆ. ಒಬ್ಬ ಮಗಳು ವೈದ್ಯಕೀಯ ಶಿಕ್ಷಣ ಪಡೆದಿದ್ದು, ಇಬ್ಬರು ಗಂಡು ಮಕ್ಕಳು ಎಂಜಿನಿಯರಿಂಗ್‌ ವ್ಯಾಸಂಗ ಮಾಡ್ತಿದ್ದಾರೆ. ಈ ಕುರಿತು ಕನ್ನಡಪ್ರಭ ಅವರೇ ‘ಕನ್ನಡಪ್ರಭ’ದೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.

ಉಳಿದ ಮಕ್ಕಳ ಹೆಸರು ವಿಭಿನ್ನ 

ತಂದೆಯವರು ನನಗೆ ಕನ್ನಡಪ್ರಭ ಎಂದು ಹೆಸರಿಟ್ಟರೆ ಇನ್ನೊಬ್ಬಳಿಗೆ ಭಾರತ ರತ್ನ ಎಂದು ನಾಕರಣ ಮಾಡಿದ್ದಾರೆ. ಡಾ.ಅಂಬೇಡ್ಕರ್‌ ಜಯಂತಿ ಸಂದರ್ಭದಲ್ಲಿ ಹುಟ್ಟಿದ ಮಗಳಿಗೆ ಜಯಂತಿ ಎಂದೂ ಹೆಸರಿಟ್ಟಿದ್ದು, ಬೌದ್ಧ ಧರ್ಮದ ಅನುಯಾಯಿಯಾಗಿದ್ದರಿಂದ ನನ್ನ ಇನ್ನುಳಿದ ಸಹೋದರಿಯರಿಗೆ ಪಂಚಶೀಲಾ, ಸತ್ಯಶೀಲಾ, ಚಂದ್ರಶೀಲಾ, ಇಂದ್ರಶೀಲಾ ಎಂಬ ಹೆಸರುಗಳನ್ನಿಟ್ಟಿದ್ದಾರೆ ಎಂದು ಕನ್ನಡಪ್ರಭ ತಿಳಿಸಿದ್ದಾರೆ.

ಹೆಸರಿನ ಬಗ್ಗೆ ಹೆಮ್ಮೆ ಇದೆ:

‘ಕನ್ನಡಪ್ರಭ’ ಎಂಬ ಹೆಸರಿಟ್ಟಿರುವುದಕ್ಕೆ ನನಗೆ ಹೆಮ್ಮೆ ಇದೆ. ನಮ್ಮ ತಂದೆಯವರು ಹಿರಿಯ ಸಾಹಿತಿಗಳಾಗಿದ್ದು, ಅವರಲ್ಲಿದ್ದ ಕನ್ನಡ ಮತ್ತು ಕನ್ನಡ ನಾಡಿನ ಮೇಲಿನ ಪ್ರೀತಿ, ಬೌದ್ಧ ಧರ್ಮದ ಪಾಲನೆ ನಮ್ಮಲ್ಲಿ ಇಂದಿಗೂ ಇವೆ. ಇನ್ನೂ ನಾಡಿನ ಶ್ರೇಷ್ಠ ಪತ್ರಿಕೆಯ ಹೆಸರು ಸಹ ಕನ್ನಡಪ್ರಭ ಆಗಿದ್ದಕ್ಕೆ ಇಂದಲ್ಲ ನಾನು ಚಿಕ್ಕವಳು ಇದ್ದಾಗಿನಿಂದಲೇ ನನಗೆ ಖುಷಿ ನೀಡಿದೆ ಎಂದು ಕನ್ನಡಪ್ರಭ ಅವರು ತಿಳಿಸಿದ್ದಾರೆ.

Read more Articles on