ಸಾರಾಂಶ
ಮಾಕೋನಹಳ್ಳಿಯ ಸಮುದಾಯ ಭವನದಲ್ಲಿ ಲಯನ್ಸ್ ಸಂಸ್ಥೆ ಮಾಕೋನಹಳ್ಳಿ ಮಾತೃಶ್ರೀ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಮೂಡಿಗೆರೆನಿಸ್ವಾರ್ಥಿಯಾಗಿ ಕೆಲಸ ಮಾಡಲು ಬಯಸುವಂತವರು ಲಯನ್ಸ್ ಸಂಸ್ಥೆಯಂತಹ ಸಂಘ ಸಂಸ್ಥೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.
ತಾಲೂಕಿನ ಮಾಕೋನಹಳ್ಳಿ ಸಮುದಾಯ ಭವನದಲ್ಲಿ ಲಯನ್ಸ್ ಸಂಸ್ಥೆ ಮಾಕೋನಹಳ್ಳಿ ಮಾತೃಶ್ರೀ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ರಾಜಕಾರಣದಲ್ಲಿ ಸ್ವಾರ್ಥ ಇರುತ್ತದೆ. ನಾನೇನಾದರೂ ಆಗಲೇಬೇಕು ಅನ್ನುವಂತದ್ದು ಒಂದು ಗುರಿ ಇರುತ್ತದೆ. ಆದರೆ, ಈ ಲಯನ್ಸ್ ಸಂಸ್ಥೆಯಲ್ಲಿ ಒಂದು ನಿರ್ದಿಷ್ಟ ಗುರಿ ಇರುತ್ತದೆ. ಅದು ಸಮಾಜಮುಖಿಯಾಗಿಯೇ ಕೆಲಸ ಮಾಡಬೇಕು ಎಂಬ ನಿಸ್ವಾರ್ಥತೆಯ ಗುರಿ ಎಂದರೇ ತಪ್ಪಾಗಲಾರದು ಎಂದರು.ಸಂಸ್ಥೆಯನ್ನು ಕಟ್ಟಲೇಬೇಕೆಂದು ಪ್ರಾಂತೀಯ ಅಧ್ಯಕ್ಷ ಎಂ.ಬಿ.ಗೋಪಾಲಗೌಡರ ಗುರಿಯಾಗಿತ್ತು. ಆದರೆ, ಇಂದು ಅವರಂದುಕೊಂಡಂತಹ ಕೆಲಸ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮೀಣಾ ಭಾಗವಾದ ಮಾಕೋನಹಳ್ಳಿಯಲ್ಲಿ ಲಯನ್ಸ್ ಕ್ಷಬ್ ಪ್ರಾರಂಭಿಸುವ ಮೂಲಕ ಗುರಿ ತಲುಪಿದ್ದಾರೆ ಎಂದು ಹೇಳಿದರು. ಪ್ರಾಂತೀಯ ಅಧ್ಯಕ್ಷ ಎಂ.ಬಿ.ಗೋಪಾಲಗೌಡ ಮಾತನಾಡಿ, ನಮ್ಮ ಸೇವೆ ಬರಿ ನಗರಕ್ಕಷ್ಟೇ ಸೀಮಿತವಾಗಿರಬಾರದು. ಗ್ರಾಮೀಣಾ ಪ್ರದೇಶದ ಜನಸಾಮಾನ್ಯರಿಗೂ ತಲುಪಬೇಕೆನ್ನುವ ಉದ್ದೇಶದಿಂದ ಗೋಣಿಬೀಡಿನಲ್ಲಿ ಮಾತೃಶ್ರೀ ಲಯನ್ಸ್‌ಸಂಸ್ಥೆ ಸ್ಥಾಪಿಸಿ ಯಶಸ್ವಿಯಾಗಿದ್ದು ಈಗ ಮಾಕೋನಹಳ್ಳಿ ಪ್ರಾರಂಭವಾಗಿದೆ. ಇನ್ನು 3 ಕಡೆಗಳಲ್ಲಿ ಲಯನ್ಸ್ ಸಂಸ್ಥೆ ಸ್ಥಾಪಿಸುವ ಗುರಿ ಹೊಂದಿರುವುದಾಗಿ ತಿಳಿಸಿದರು.ಮಾಕೋನಹಳ್ಳಿ ಮಾತೃಶ್ರೀ ಲಯನ್ಸ್ ಸಂಸ್ಥೆ ಸ್ಥಾಪಕ ಅಧ್ಯಕ್ಷರಾಗಿ ಜಿ.ಎಸ್.ತಮ್ಮಣ್ಣಗೌಡ, ಕಾರ್ಯದರ್ಶಿಯಾಗಿ ಎಂ.ಎಂ.ರಮೇಶ್, ಸ್ಥಾಪಕ ಖಜಾಂಚಿಯಾಗಿ ಎಂ.ಬಿ.ದಿನೇಶ್, ಸ್ಥಾಪಕ ಉಪಾಧ್ಯಕ್ಷರಾಗಿ ಎನ್.ಡಿ.ಗಿರೀಶ್ ಅಧಿಕಾರ ವಹಿಸಿಕೊಂಡರು.ಇದೆ ಸಂದರ್ಭದಲ್ಲಿ ಸರ್ಕಾರಿ ಶಾಲೆಗೆ ಕುಡಿಯುವ ನೀರಿನ ಫಿಲ್ಟರ್ ನೀಡಲಾಯಿತು. ಮಾಜಿ ಅಧ್ಯಕ್ಷ ಎಂ.ಬಿ.ಪ್ರಭಾಕರ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು.
ಲಯನ್ಸ್ ಜಿಲ್ಲಾ ರಾಜ್ಯಪಾಲರಾದ ಬಿ.ಎಂ. ಭಾರತಿ ಕಾರ್ಯಕ್ರಮ ಉದ್ಘಾಟಿಸಿ ನೂತನ ಪಧಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು, ಪದಗ್ರಹಣ ಅಧಿಕಾರಿಯಾಗಿ ಪೂರ್ವ ಜಿಲ್ಲಾ ರಾಜ್ಯಪಾಲ ಎಚ್.ಆರ್.ಹರೀಶ್ ಕಾರ್ಯನಿರ್ವಹಿಸಿದರು. ಅಧ್ಯಕ್ಷತೆಯನ್ನು ಮೂಡಿಗೆರೆ ಲಯನ್ಸ್ ಸಂಸ್ಥೆ ಅಧ್ಯಕ್ಷ ಎಂ.ಇ.ಜಯಕುಮಾರ್ ವಹಿಸಿದ್ದರು. ವೇದಿಕೆಯಲ್ಲಿ ದ್ವಿತೀಯ ಜಿಲ್ಲಾ ಉಪ ರಾಜ್ಯಪಾಲ ಎಚ್.ಎಂ.ತಾರಾನಾಥ್, ಜಿಲ್ಲಾ ಸಂಪುಟ ಕೋಶಾಧಿಕಾರಿ ಶಶಿಧರ್, ವಿಸ್ತರಣಾ ಘಟಕದ ಅಧ್ಯಕ್ಷ ಮನೋರಂಜನ್, ವಲಯ ಅಧ್ಯಕ್ಷ ಬಿ.ಎನ್.ವೆಂಕಟೇಶ್, ಮೂಡಿಗೆರೆ ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಬಿ.ಎಲ್.ದಿನೇಶ್, ಖಜಾಂಚಿ ಎಚ್.ಕೆ.ಶಿವಕುಮಾರ್, ಮಾಜಿ ಅಧ್ಯಕ್ಷರಾದ ಎಚ್.ಬಿ.ಶಿವಣ್ಣ, ಎಂ.ಎನ್.ಅಶ್ವತ್, ಹಳೇಕೋಟೆ ಎನ್. ರಮೇಶ್, ಕೆ.ಟಿ.ದೇವಪ್ಪ, ಜಗ್ ಮೋಹನ್ ಉಪಸ್ಥಿತರಿದ್ದರು. 18 ಕೆಸಿಕೆಎಂ 1ಮೂಡಿಗೆರೆ ತಾಲೂಕಿನ ಮಾಕೋನಹಳ್ಳಿಯ ಸಮುದಾಯ ಭವನದಲ್ಲಿ ನಡೆದ ಲಯನ್ಸ್ ಸಂಸ್ಥೆ ಮಾಕೋನಹಳ್ಳಿ ಮಾತೃಶ್ರೀ ಉದ್ಘಾಟನಾ ಸಮಾರಂಭದಲ್ಲಿ ವಿಧಾನಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ರನ್ನು ಸನ್ಮಾನಿಸಲಾಯಿತು.;Resize=(128,128))
;Resize=(128,128))
;Resize=(128,128))
;Resize=(128,128))