ಮಾದಪ್ಪನ ಸನ್ನಿಧಿಗೆ ತೆರಳಬೇಕಾದವರು ಮಸಣ ಸೇರಿದ್ರು!

| Published : Jan 03 2025, 12:32 AM IST

ಮಾದಪ್ಪನ ಸನ್ನಿಧಿಗೆ ತೆರಳಬೇಕಾದವರು ಮಸಣ ಸೇರಿದ್ರು!
Share this Article
  • FB
  • TW
  • Linkdin
  • Email

ಸಾರಾಂಶ

ಅತಿವೇಗ ಮತ್ತು ಅಜಾಗರೂಕತೆಯಿಂದಾಗಿ ಮಾದಪ್ಪನ ಸನ್ನಿಧಿಗೆ ತೆರಳಬೇಕಾದ ಮೂವರು ಗೆಳೆಯರ ಪೈಕಿ ಇಬ್ಬರು ಕೆರೆಗೆ ಮುಳುಗಿ ಸಾವಿಗೀಡಾಗಿದ್ದು ಒಬ್ಬನನ್ನು ಅಗ್ನಿಶಾಮಕ ಮತ್ತು ಪೊಲೀಸರು ರಕ್ಷಣೆ ಮಾಡಿರುವ ಘಟನೆ ಕುಂತೂರು ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಅತಿವೇಗ ಮತ್ತು ಅಜಾಗರೂಕತೆಯಿಂದಾಗಿ ಮಾದಪ್ಪನ ಸನ್ನಿಧಿಗೆ ತೆರಳಬೇಕಾದ ಮೂವರು ಗೆಳೆಯರ ಪೈಕಿ ಇಬ್ಬರು ಕೆರೆಗೆ ಮುಳುಗಿ ಸಾವಿಗೀಡಾಗಿದ್ದು ಒಬ್ಬನನ್ನು ಅಗ್ನಿಶಾಮಕ ಮತ್ತು ಪೊಲೀಸರು ರಕ್ಷಣೆ ಮಾಡಿರುವ ಘಟನೆ ಕುಂತೂರು ಗ್ರಾಮದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಮೃತರನ್ನು ಡಿಜಿಎಫ್ ಕಂಪನಿಯ ಊರ್ಜಿತ್ (25), ಟೆಕ್ನೋಟಾಸ್ಕ್ ಕಂಪನಿಯ ನೌಕರರಾದ ಶುಭ (21) ಎಂದು ಗುರುತಿಸಲಾಗಿದೆ. ಮತ್ತೋರ್ವ ಇವರಿಬ್ಬರ ಗೆಳೆಯ ಮೈಸೂರಿನ ವಿದ್ಯಾರಣ್ಯಪುಂ ವಾಸಿ ಲಯನ್ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುವ ಪುನೀತ್ (21) ಪೊಲೀಸರು, ಸ್ಥಳೀಯರು, ಅಗ್ನಿಶಾಮಕ ಠಾಣೆ ಮತ್ತು ಆ್ಯಂಬುಲೆನ್ಸ್ ಸಿಬ್ಬಂದಿ ಸಹಕಾರದೊಂದಿಗೆ ಈತ ಬದುಕುಳಿದಿದ್ದಾನೆ. ಮೂವರು ಸಹಾ ಬುಧವಾರ ರಾತ್ರಿ 12ಗಂಟೆ ಸುಮಾರಿಗೆ ಮಹದೇಶ್ವರನ ಬೆಟ್ಟಕ್ಕೆ ತೆರಳಲು ಕ್ಯಾಬ್ ವೊಂದನ್ನು ಬಾಡಿಗೆಗೆ ಪಡೆದು ಊರ್ಜಿತ್, ಶುಭ, ಪುನೀತ್ ತೆರಳಿದ್ದು 2.15ಗಂಟೆ ಸುಮಾರಿನಲ್ಲಿ ಕಾರು ಚಲಾಯಿಸುತ್ತಿದ್ದ ಊರ್ಜಿತ್ ಅತಿವೇಗ ಮತ್ತು ಅಜಾಗರೂಕತೆಯಿಂದಾಗಿ ಕುಂತೂರು ಕ್ರಾಸ್‌ನ ಕೆರೆಗೆ ಕಾರ್ ನುಗ್ಗಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೆ ಸಾವಿಗೀಡಾಗಿದ್ದಾರೆ. ಕಾರಿನ ಗ್ಲಾಸ್ ಒಡೆದು ಮುಳುಗುತ್ತಿದ್ದ ಕಾರಿನ ಮೇಲೆ ನಿಂತು ಪುನೀತ್ ರಕ್ಷಣೆಗಾಗಿ ಕೂಗಿಕೊಂಡ ಎನ್ನಲಾಗಿದೆ. ಈ ವೇಳೆ ತೆರಳಿದ್ದ ಆ್ಯಂಬುಲೆನ್ಸ್ ಸಿಬ್ಬಂದಿ ವಾಹನ ನಿಲ್ಲಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿ ಶಾಮಕ ಠಾಣಾಧಿಕಾರಿಗಳು ಜಾಗೃತರಾಗಿ ಪುನೀತ್‌ನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹೊಸ ವರುಷದ ಪ್ರಾರಂಭದಲ್ಲೆ ಮಾದಪ್ಪನ ಸನ್ನಿಧಿಗೆ ತೆರಳಬೇಕಾದ ಮೃತರಿಬ್ಬರು ಅಜಾಗರುಕತೆಯಿಂದಾಗಿ ಕಾರು ಚಲಾಯಿಸಿ ವಿಧಿಯ ಆಟದ ಪರಿಣಾಮ ಕೆರೆಯಲ್ಲಿ ಜಲ ಸಮಾಧಿಯಾಗುವಂತಾಗಿದ್ದು ಮಾತ್ರ ವಿಪರ್ಯಾಸದ ಸಂಗತಿ. ಈ ಸಂಬಂಧ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ತೆರಳಿ ಮುಂದಿನ ಕ್ರಮಕೈಗೊಂಡಿದ್ದಾರೆ. ಬದುಕುಳಿದ ಪುನೀತ್ ಹೇಳಿಕೆ ಹಿನ್ನೆಲೆಯಲ್ಲಿ ಮಾಂಬಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.ಮಹದೇಶ್ವರ ಬೆಟ್ಟಕ್ಕೆ ಮೈಸೂರಿನಿಂದ ಹೊರಟ ಕಾರನ್ನು ಊರ್ಜಿತ್ ಓಡಿಸುತ್ತಿದ್ದ, ಕಾರು ನಿಯಂತ್ರಣ ತಪ್ಪಿ ಕೆರೆಗೆ ಪಲ್ಟಿ ಹೊಡೆಯಿತು. ಶುಭ ಮತ್ತು ಊರ್ಜಿತ್ ಕೆರೆಯಲ್ಲೆ ಸಾವಿಗೀಡಾದರು. ನಾನು ಕಾರಿನ ಗಾಜು ಒಡೆದು ರಕ್ಷಣೆಗಾಗಿ ಕೂಗಿಕೊಂಡೆ. ಆ್ಯಂಬುಲೆನ್ಸ್ ಸಿಬ್ಬಂದಿಯೊಬ್ಬರು ವಾಹನ ನಿಲ್ಲಿಸಿ ಬೀಟ್ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಮಾಂಬಳ್ಳಿ ಠಾಣಾ ಪೊಲೀಸರು, ಅಗ್ನಿ ಶಾಮಕ ಠಾಣಾಧಿಕಾರಿಗಳು ನನ್ನ ರಕ್ಷಿಸಿದರು. ಪವಾಡ ಸದೃಶ್ಯದಿಂದಾಗಿ ನಾನು ಬದುಕುಳಿದೆ. ನನಗೂ ಸಣ್ಣ ಪುಟ್ಟ ಗಾಯಗಳಾಗಿವೆ.

- ಪುನೀತ್, ಪವಾಡ ಸದೃಶ್ಯ ಬದುಕುಳಿದ ಮೈಸೂರು ನಿವಾಸಿ